ಸೋಮವಾರಪೇಟೆಯಲ್ಲಿ “ಸೆಲ್ಯೂಟ್ ದಿ ಸೈಲೆಂಟ್ ವರ್ಕರ್” ಕಾರ್ಯಕ್ರಮ : ಸೆಸ್ಕ್ ಇಲಾಖೆಯ ಸಿಬ್ಬಂದಿ ವಿಜಯಕುಮಾರ್ ಗೆ ಸನ್ಮಾನ

February 27, 2021

ಸೋಮವಾರಪೇಟೆ ಫೆ. 27 : ಜೇಸಿ ಸಂಸ್ಥೆಯ ವತಿಯಿಂದ “ಸೆಲ್ಯೂಟ್ ದಿ ಸೈಲೆಂಟ್ ವರ್ಕರ್” ಎಂಬ ಕಾರ್ಯಕ್ರಮದಲ್ಲಿ ಸೆಸ್ಕ್ ಇಲಾಖೆಯ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.
ಸೋಮವಾರಪೇಟೆ ಸೆಸ್ಕ್ ಇಲಾಖೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯುತ್ ಮಾರ್ಗದಾಳು ವಿಜಯಕುಮಾರ್ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಜೇಸಿ ಅಧ್ಯಕ್ಷೆ ಮಾಯಾ ಗಿರೀಶ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಇಲಾಖೆಯ ಸಹಾಯಕ ಅಭಿಯಂತರ ಮನು ಕುಮಾರ್, ಸಂಸ್ಥೆಯ ಕಾರ್ಯದರ್ಶಿ ನೆಲ್ಸನ್, ಜೇಸಿರೇಟ್ ಪವಿತ್ರಾ ಲಕ್ಷ್ಮೀಕುಮಾರ್, ಪದಾಧಿಕಾರಿಗಳಾದ ರಾಜೇಶ್, ಜಗದಾಂಬ ಇದ್ದರು.
ಇದೇ ಸಂದರ್ಭ ಇಲಾಖೆಯ 40 ಮಾರ್ಗದಾಳುಗಳಿಗೆ ಅಭಿನಂದನಾ ಪತ್ರವನ್ನು ವಿತರಿಸಲಾಯಿತು.

error: Content is protected !!