ಮಾ. 27 ರಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಸಾನ್ ಘಟಕದಿಂದ ಪ್ರತಿಭಟನೆ

February 27, 2021

ಮಡಿಕೇರಿ ಫೆ. 27 : ಇಂಧನ ಬೆಲೆ ಹಾಗೂ ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಮಾ. 27 ರಂದು ಜಿಲ್ಲಾ ವ್ಯಾಪಿ ರೈತಪರ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಿಸಾನ್ ಘಟಕದ ವತಿಯಿಂದ ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು.
ಜಿಲ್ಲೆಯಲ್ಲಿ ರೈತರಿಗೆ ಹಾಗೂ ಬೆಳೆಗಾರರಿಗೆ ಆಗುತ್ತಿರುವಂತಹ ಸಮಸ್ಯೆಗಳು, ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುತ್ತಿರುವ ಕೇಂದ್ರ ಸರಕಾರದ ನಡೆ ಹಾಗೂ ಡೀಸೆಲ್ ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆ ವಿರುದ್ಧ ಕೊಡಗು ರೈತರ ಮೂಲಭೂತ ಸಮಸ್ಯೆಗಳಾದ ಮರದ ಹಕ್ಕುಗಳನ್ನು ಪಡೆಯುವ ಬಗ್ಗೆ, ಪಿಂಚಣಿ ಸಮಸ್ಯೆಗಳಾದ ವಿಧವಾ ವೇತನ, ವೃದಾಪ್ಯ ವೇತನ, ಅಂಗವಿಕಲ ವೇತನ ಫಲಾನುಭವಿಗಳಿಗೆ ದೊರಕದ ಬಗ್ಗೆ ಬೆಳೆ ಪರಿಹಾರ ಸಿಗದ ಬಗ್ಗೆ ಸಹಕಾರ ಸಂಘದಲ್ಲಿ ಸಾಲಮನ್ನ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ಮಾತನಾಡಿ, ಹೋರಾಟವನ್ನು ಯಶಸ್ವಿಗೊಳಿಸಲು ಕರೆ ನೀಡಿದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್ ಪೆÇನ್ನಣ್ಣ ಹೋರಾಟ ನಡೆಸುವ ಬಗ್ಗೆ ಸಲಹೆ ಸೂಚನೆ ನೀಡಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಜಿ.ಪಂ. ಸದಸ್ಯೆ ಕೆ.ಪಿ ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ಅನಂತ್ ಕುಮಾರ್, ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಸನ್ನಿ ಕುಶಾಲಪ್ಪ, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕೊಡಗು ಕಿಸಾನ್ ಘಟಕದ ಪದಾಧಿಕಾರಿಗಳು, ಬ್ಲಾಕ್ ಮಟ್ಟದ, ಭೂತ್ ಮಟ್ಟದ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.

error: Content is protected !!