ಬೈಲುಕೊಪ್ಪ ನಿರಾಶ್ರಿತ ಟಿಬೇಟಿಯನ್ ಶಿಬಿರದಲ್ಲಿ ಲೋಸಾರ್ ಆಚರಣೆ

February 27, 2021

ಕುಶಾಲನಗರ ಫೆ. 27 : ಟಿಬೇಟಿಯನ್ನರ ನೂತನ ವರ್ಷ ಲೋಸಾರ್ ಅನ್ನು ಬೈಲುಕೊಪ್ಪ ನಿರಾಶ್ರಿತ ಟಿಬೇಟಿಯನ್ ಶಿಬಿರದಲ್ಲಿ ಬರಮಾಡಿಕೊಳ್ಳಲಾಯಿತು.

ಈ ಬಾರಿಯ ಲೋಸಾರ್ ಆಚರಣೆಯನ್ನು ಶಿಬಿರಗಳಿಗೆ ಸೀಮಿತವಾಗಿ ನಡೆಸಲಾಯಿತು. 15 ದಿನಗಳ ಅವಧಿಯಲ್ಲಿ ವಿಶ್ವದ ಅತಿ ದೊಡ್ಡ ಚಿತ್ರ ಪರದೆ ಎಂಬ ಖ್ಯಾತಿಯುಳ್ಳ ಬುದ್ದ ಅಮಿತಾಯುಷ್ ಮತ್ತು ಗುರುಪದ್ಮ ಸಾಂಭವ ಚಿತ್ರಪಟಗಳನ್ನು ಕೆಲವೇ ಕ್ಷಣಗಳ ಕಾಲ ಬೈಲುಕೊಪ್ಪ ಗೋಲ್ಡನ್ ಟೆಂಪಲ್ ಆವರಣದಲ್ಲಿ ಅನಾವರಣಗೊಳಿಸಿ ಧಾರ್ಮಿಕ ಪೂಜಾ ವಿಧಿವಿಧಾನಗಳನ್ನು ನಡೆಸಲಾಯಿತು.

error: Content is protected !!