ಶ್ರದ್ಧಾಭಕ್ತಿಯಿಂದ ಜರುಗಿದ ಕುಶಾಲನಗರದ ಶ್ರೀಕನ್ನಿಕಾಪರಮೇಶ್ವರಿ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ

February 27, 2021

ಮಡಿಕೇರಿ ಫೆ.27 : ಕುಶಾಲನಗರದ ಶ್ರೀಕನ್ನಿಕಾಪರಮೇಶ್ವರಿ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.
ಅಭಿಷೇಕ, ಅಲಂಕಾರ ಪೂಜೆ, ಅರ್ಚನೆ, ಭಜನೆ, ಮಹಾಪೂಜೆ, ರಥೋತ್ಸವ ಮತ್ತಿತರ ಪೂಜಾ ಕೈಂಕರ್ಯಗಳೊಂದಿಗೆ ವಾರ್ಷಿಕೋತ್ಸವ ನೆರವೇರಿತು.
ವಾಸವಿ ಯುವತಿಯ ಮಂಡಳಿ ವತಿಯಿಂದ ಆರ್ಯ ವೈಶ್ಯ ಸುಮಂಗಲಿಯರಿಂದ ಮಾತಂಗಿ ಗೌರಿ ಪೂಜೆ, ಆರ್ಯವೈಶ್ಯ ಮಹಿಳಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ಕೂಡ ನಡೆಯಿತು. ಅರ್ಚಕ ಪ್ರಮೋದ್ ಭಟ್ ನೇತೃತ್ವದಲ್ಲಿ ಪೂಜಾ ಕೈಕಂರ್ಯಗಳು ಜರುಗಿದವು.
ಆರ್ಯವೈಶ್ಯ ಮಂಡಳಿ ಅಧ್ಯಕ್ಷ ವಿ.ಪಿ.ನಾಗೇಶ್ ಅವರು ವಾರ್ಷಿಕೋತ್ಸವದ ಉಸ್ತುವಾರಿ ವಹಿಸಿದ್ದರು.
ಮಂಡಳಿ ಉಪಾಧ್ಯಕ್ಷ ಬಿ.ಎಲ್.ಉದಯಕುಮಾರ್, ಕಾರ್ಯದರ್ಶಿ ಬಿ.ಎಲ್.ಅಶೋಕ್, ನಿರ್ದೇಶಕರಾದ ಸುರೇಶ್ ಬಾಬು, ಎಂ.ಪಿ.ಸತ್ಯನಾರಾಯಣ, ಅನಿಲ್, ಮಹಿಳಾ ಮಂಡಳಿ ಅಧ್ಯಕ್ಷೆ ಶೋಭಾ ಸತ್ಯ, ಯುವತಿಯರ ಸಂಘದ ಅಧ್ಯಕ್ಷೆ ಲಕ್ಷ್ಮಿ ಸುಬ್ಬರಾಜು ಮತ್ತಿತರರು ಹಾಜರಿದ್ದರು. ನೂರಾರು ಭಕ್ತರು ವಾರ್ಷಿಕೋತ್ಸವದ ಪೂಜಾ ವಿಧಿ ವಿಧಾನಗಳಿಗೆ ಸಾಕ್ಷಿಯಾದರು.

error: Content is protected !!