ಕುಶಾಲನಗರ ಕಾಲೇಜು : ವಯೋನಿವೃತ್ತಿ ದೇಹಕ್ಕೆ ಹೊರತು ಜ್ಞಾನಕ್ಕಲ್ಲ : ಎಸ್.ಬಿ.ಅಪ್ಪಾಜಿಗೌಡ ಅಭಿಪ್ರಾಯ

February 27, 2021

ಕುಶಾಲನಗರ ಫೆ.27 : ವಯೋನಿವೃತ್ತಿ ದೇಹಕ್ಕೆ ಹೊರತು ಜ್ಞಾನಕ್ಕಲ್ಲ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಜಂಟಿ ನಿರ್ದೇಶಕ ಎಸ್.ಬಿ.ಅಪ್ಪಾಜಿಗೌಡ ಅಭಿಪ್ರಾಯಪಟ್ಟರು.
ಕುಶಾಲನಗರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸುದೀರ್ಘ ಸೇವೆ ಸಲ್ಲಿಸಿದ ಪ್ರೊ.ಪಿ.ಟಿ.ಕಾಶಿಕುಮಾರ್ ನಿವೃತ್ತಿಯಾದ ಹಿನ್ನೆಲೆ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾವು ಈ ಭೂಮಿ ಮೇಲೆ ಏನೇನು ಸಂಪಾದನೆ ಮಾಡಿದ್ದೇವೆ ಎಂಬುವುದಕ್ಕಿಂತ ಯಾವ ಕೊಡುಗೆಯನ್ನು ನೀಡಿದ್ದೇವೆ ಎನ್ನುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಂಶುಪಾಲ ಪ್ರೊ.ಹೆಚ್.ಬಿ.ಲಿಂಗಮೂರ್ತಿ ಮಾತನಾಡಿ ಸಾಮಾಜಿಕ ಬದಲಾವಣೆಯಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದರು. ಸಮಾರಂಭದಲ್ಲಿ ಡಾ.ಬಿ.ಡಿ.ಹರ್ಷ ಹಾಗೂ ಟಿ.ಎಲ್.ತ್ಯಾಗರಾಜ್ ಅಭಿಪ್ರಾಯ ಹಂಚಿಕೊಂಡರು .
ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕಛೇರಿಯ ವಿಶೇಷ ಅಧಿಕಾರಿ ಪ್ರೊ.ಸ್ಟೀವನ್ ಕ್ವಾಡ್ರಸ್, ಗ್ರಂಥಪಾಲಕ ಚಂದ್ರಶೇಖರ್ ಜಿ.ಎಸ್., ನಿಕಟ ಪೂರ್ವ ನಿವೃತ್ತ ಪ್ರಾಂಶುಪಾಲ ಸುಬ್ರಹ್ಮಣ್ಯ ಹಾಜರಿದ್ದರು.
ಡಾ.ಎಂ.ರಶ್ಮಿ ಪ್ರಾರ್ಥಿಸಿ, ಡಾ.ಪಿ.ರಮೇಶಚಂದ್ರ ಸ್ವಾಗತಿಸಿದರು. ಸಿ.ಪುಟ್ಟರಾಜು ನಿರೂಪಿಸಿ, ಎಂ.ಆರ್.ಚರಿತ ವಂದಿಸಿದರು.

error: Content is protected !!