ಮಾ.5ರಂದು ಮಡಿಕೇರಿಯಲ್ಲಿ ಉಚಿತ ಶ್ರವಣ ಪರೀಕ್ಷೆ ಶಿಬಿರ

March 1, 2021

ಮಡಿಕೇರಿ ಮಾ. 1 : ವಿಶ್ವ ಶ್ರವಣ ದಿನದ ಅಂಗವಾಗಿ ಮಾ.5ರಂದು ನಗರದ ರಾಜಾಸೀಟ್ ರಸ್ತೆಯ ಅಮೃತಾ ಇ.ಎನ್.ಟಿ. ಮತ್ತು ವರ್ಟಿಗೊ ಕೇರ್ ಕ್ಲಿನಿಕ್ ನಲ್ಲಿ ಉಚಿತ ಶ್ರವಣ ಪರೀಕ್ಷೆ ಶಿಬಿರ ಆಯೋಜಿಲಾಗಿದೆ ಎಂದು ಶ್ರವಣ ತಜ್ಞ ಎಂ.ಎ.ಅಚ್ಚಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಜೀವನದ ಎಲ್ಲಾ ಹಂತಗಳಲ್ಲಿ ಉತ್ತಮ ಶ್ರವಣ ಮತ್ತು ಸಂವಹನ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ವಿಶ್ವ ಶ್ರವಣ ದಿನದ ಅಂಗವಾಗಿ ‘ಹಿಯರಿಂಗ್ ಕೇರ್ ಫಾರ್ ಆಲ್’ ಎಂಬ ಘೋಷ ವಾಕ್ಯದೊಂದಿಗೆ ಶ್ರವಣದೋಷವುಳ್ಳವರನ್ನು ಬಹುಬೇಗನೆ ಗುರುತಿಸಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ಕೊಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಕರೆ ಕೊಟ್ಟಿದೆ. ಅದರಂತೆ ನಗರದ ಕಾವೇರಿ ಹಿಯರಿಂಗ್ ಕ್ಲಿನಿಕ್ ಸಹಯೋಗದೊಂದಿಗೆ ಅಂದು ಬೆಳಗ್ಗೆ 10ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಶ್ರವಣ ಪರೀಕ್ಷೆ ಶಿಬಿರ, ಉಚಿತ ಶ್ರವಣ ಯಂತ್ರ ಪ್ರಯೋಗ ಹಾಗೂ ಶ್ರವಣ ಯಂತ್ರ ಬದಲಾವಣೆ ಶಿಬಿರ ಆಯೋಜಿಸಲಾಗಿದೆ ಎಂದು ವಿವರಿಸಿದರು.

ಯಾರಿಗಾದರೂ, ಯಾವುದೇ ವಯಸ್ಸಿನಲ್ಲಿಯೂ ಶ್ರವಣ ನಷ್ಟ ಸಂಭವಿಸಬಹುದಾಗಿದ್ದು, ವಯಸ್ಕರಲ್ಲಿ ಮಾತನಾಡುವಾಗ ಅರ್ಥಮಾಡಿಕೊಳ್ಳುವಲ್ಲಿ ತೊಂದರೆ, ಟಿವಿ ಅಥವಾ ಮೊಬೈಲ್ ±ಬ್ದವನ್ನು ಹೆಚ್ಚಿಸುವುದು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂವಹನ

ಕಡಿಮೆಯಾಗುವುದು. ಮಾತು ಅರ್ಥವಾಗದ ಕಾರಣ ದುಃಖ ಅಥವಾ ಖಿನ್ನತೆ ಉಂಟಾಗುವುದು ಮುಂತಾದ ಬಹಳಷ್ಟು ಸಮಸ್ಯೆಗಳಿಗೆ ಇದು ಕಾರಣವಾಗಬಹುದು. ಶ್ರವಣದೋಷವುಳ್ಳ ಮಕ್ಕಳಲ್ಲಿನ ಮಾತು ಹಾಗೂ ಭಾμÉಯನ್ನು ಕಲಿಯಲು ಅಸಮರ್ಥತೆ, ಶಾಲೆಯಲ್ಲಿ ವಿಷಯಗಳನ್ನು ಕಲಿಯುವ ತೊಂದರೆ ಮತ್ತಿತರ ಸಮಸ್ಯೆಗಳು ತಲೆದೋರುತ್ತದೆಂದರು.

ಆದರೆ ಸರಿಯಾದ ಸಮಯ ಹಾಗೂ ಸರಿಯಾದ ರೀತಿಯ ಚಿಕಿತ್ಸೆ, ಶ್ರವಣ ಸಾಧನಗಳು, ಕಾಕ್ಲಿಯರ್ ಇಂಪ್ಲಾಂಟ್‍ಗಳು ಅಥವಾ ಬೇರೆ ವಿಧಾನಗಳ ಮೂಲಕ ಅದನ್ನು ನಿವಾರಿಸಬಹುದಾಗಿದ್ದು, ಇಂತಹ ಸಮಸ್ಯೆಗಳನ್ನು ಆದಷ್ಟು ಶೀಘ್ರವಾಗಿ ಪತ್ತೆ ಮಾಡಿ ಚಿಕಿತ್ಸೆ ಪಡೆಯುವುದರಿಂದ ಶ್ರವಣದೋಷವುಳ್ಳವರು ಕೂಡಾ ಯಶಸ್ವಿ ಜೀವನ ನಡೆಸಬಹುದಾಗಿದೆ ಎಂದರು.

ಶಿಬಿರದಲ್ಲಿ ಭಾಗವಹಿಸುವವರ ನೋಂದಣಿ ಕಡ್ಡಾಯವಾಗಿದ್ದು, ಮಾ.4ರ ಸಂಜೆಯೊಳಗೆ ಮೊಬೈಲ್ ಸಂಖ್ಯೆ 8792874030ಕ್ಕೆ ಕರೆ ಮಾಡಿ ಹೆಸರು ನೋಂದಣಿ ಮಾಡಿಕೊಳ್ಳಬಹುದಾಗಿದೆ. ಶಿಬಿರಕ್ಕೆ ಬರುವವರುತಮ್ಮ ಹಳೆಯ ವೈದ್ಯಕೀಯ ವರದಿಗಳು, ಶ್ರವಣ ಸಾಧನಗಳು(ಉಪಯೋಗಿಸುತ್ತಿದ್ದಲ್ಲಿ) ತಮ್ಮೊಂದಿಗೆ ತರಬೇಕು. ಹೆಚ್ಚಿನ ಮಾಹಿತಿಗೆ 8792874030 ಅಥವಾ 08272-221460ನ್ನು ಸಂಪರ್ಹಿಸಬಹುದೆಂದರು.

error: Content is protected !!