ಮೂರನೇ ಹಂತದ ಲಸಿಕಾ ಕಾರ್ಯಕ್ರಮ : ಲಸಿಕೆ ಪಡೆದ ಶಾಸಕ ಕೆ.ಜಿ.ಬೋಪಯ್ಯ

March 1, 2021

ಮಡಿಕೇರಿ ಮಾ. 1 : ಕೋವಿಡ್-19 ತಡೆಯುವ ನಿಟ್ಟಿನಲ್ಲಿ ಮೂರನೇ ಹಂತದ ಲಸಿಕಾ ಕಾರ್ಯಕ್ರಮವು ಆರಂಭವಾಗಿದೆ.
ಆ ದಿಸೆಯಲ್ಲಿ 60 ವರ್ಷ ಪೂರ್ಣಗೊಂಡವರಿಗೆ ಲಸಿಕೆ ಪಡೆಯಲು ನೋಂದಣಿ ಮಾಡಿಕೊಳ್ಳಬಹುದಾಗಿದೆ. ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜಿ.ಬೋಪಯ್ಯ ಅವರು ಸೋಮವಾರ ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್ 19 ಲಸಿಕೆ ಪಡೆದರು.
ಕೊಡಗು ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಹಾಗೂ 45 ರಿಂದ 59 ವರ್ಷದವರೆಗಿನ ಕೋಮಾರ್‍ಡಿಟಿ (comorbidities like BP/Sugar/Asthama etc) ಹೊಂದಿರುವ ವಯೋಮಾನದವರಿಗೆ ಕೋವಿಡ್-19 ಲಸಿಕಾ ಅಭಿಯಾನವು ಸರ್ಕಾರದ ಆದೇಶದಂತೆ ಸಾಂಕೇತಿಕವಾಗಿ ಸೋಮವಾರ (ಮಾ.01 ರಂದು) ನಗರದ ಜಿಲ್ಲಾ ಆಸ್ಪತ್ರೆ, ಸೋಮವಾರಪೇಟೆ ಸಾರ್ವಜನಿಕ ಆಸ್ಪತ್ರೆ ಹಾಗೂ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ ಇಲ್ಲಿನ ಲಸಿಕಾ ಕೇಂದ್ರಗಳಲ್ಲಿ ಆಯೋಜಿಸಲಾಗಿದೆ.
ಈ ವಯೋಮಾನದವರು ಲಸಿಕಾ ಕೇಂದ್ರದಲ್ಲಿ ಆಯಾಯ ದಿನವೇ ಸ್ಥಳದಲ್ಲಿಯೇ ನೋಂದಾವಣೆ ಮಾಡಿಕೊಂಡು ಕೋವಿಡ್ ಲಸಿಕೆ ಪಡೆಯಬಹುದಾಗಿದೆ. ಲಸಿಕೆಗೆ ಆಗಮಿಸುವವರು ಆಧಾರ್ ಕಾರ್ಡ್ ಪ್ರತಿ ಅಥವಾ ಭಾರತ ಸರ್ಕಾರ ಅಥವಾ ಕರ್ನಾಟಕ ರಾಜ್ಯ ಸರ್ಕಾರದಿಂದ ನೀಡಿರುವ ಭಾವಚಿತ್ರ ಮತ್ತು ವಿಳಾಸ ಹೊಂದಿರುವ ಗುರುತಿನ ದಾಖಲಾತಿಗಳ ಪ್ರತಿಯನ್ನು ಹಾಜರು ಪಡಿಸಬೇಕಿದೆ.
ಮಾರ್ಚ್, 08 ರಿಂದ ಆಯೋಜಿಸಿರುವ ಲಸಿಕಾ ಅಭಿಯಾನದ ವೇಳಾಪಟ್ಟಿಯನ್ನು ಭಾರತ ಸರ್ಕಾರ ಮತ್ತು ಮುಂದಿನ ಕರ್ನಾಟಕ ರಾಜ್ಯ ಸರ್ಕಾರದ ಮುಂದಿನ ಸೂಚನೆಗಳ ಅನುಸಾರ ಹಮ್ಮಿಕೊಳ್ಳಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಲಸಿಕೆ ಪಡೆದುಕೊಳ್ಳುವ ಸಾರ್ವಜನಿಕ ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಕಾರ್ಯಕರ್ತೆಯರು ಕೋವಿಡ್-19 ಲಸಿಕಾ ಅಭಿಯಾನದ ಮಾಹಿತಿ ನೀಡುತ್ತಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್ ಅವರು ತಿಳಿಸಿದ್ದಾರೆ.

error: Content is protected !!