ಚೆನ್ನಯ್ಯನಕೋಟೆಯಲ್ಲಿ ಕಾಂಕ್ರಿಟ್ ರಸ್ತೆ, ಉದ್ಯಾನವನ ಉದ್ಘಾಟನೆ

March 1, 2021

ಸಿದ್ದಾಪುರ ಮಾ.1 : ಶುಚಿತ್ವದೊಂದಿಗೆ ಗ್ರಾಮವನ್ನು ಸುಂದರ ಪರಿಸರವನ್ನಾಗಿಸಿ ಅಭಿವೃದ್ಧಿಯತ್ತ ಕೊಂಡೊಯ್ಯಲು ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಹೇಳಿದ್ದಾರೆ.
ಚೆನ್ನಯ್ಯನಕೋಟೆಯ ದೊಡ್ಡಕೆರೆ ಸಮೀಪ ಉದ್ಯಾನವನ ಮತ್ತು 23ಲಕ್ಷ ರೂ. ವೆಚ್ಚದ ಕಾಂಕ್ರಿಟ್ ರಸ್ತೆ ಉದ್ಘಾಟಿಸಿ ಅವರು ಮಾತನಾಡಿದರು. ಚೆನ್ನಯ್ಯನಕೋಟೆ ಗ್ರಾ.ಪಂ ವ್ಯಾಪ್ತಿಗೆ ಹೆಚ್ಚು ಅನುದಾನ ನೀಡಲಾಗಿದ್ದು, ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳುವುದರ ಮೂಲಕ ಮಾದರಿ ಗ್ರಾಮವನ್ನಾಗಿಸಲು ಸಹಕಾರ ನೀಡಬೇಕೆಂದರು.
ಉದ್ಯಾನವನ ಅಭಿವೃದ್ದಿ ಸಮಿತಿಯ ಕಾರ್ಯದ ಹಾಗೂ ಸಮಾಜ ಸೇವಕ ಸಮೀರ್ ಅವರು ಉದ್ಯಾನವನಕ್ಕೆ ಹೂ ಗಿಡಗಳನ್ನು ನೀಡುವ ಮೂಲಕ ಪರಿಸರ ಕಾಳಜಿ ತೋರಿರುವುದಕ್ಕೆ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾ.ಪಂ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷೆ ಗಾಯತ್ರಿ, ಅಭಿವೃದ್ಧಿ ಅಧಿಕಾರಿ ರಾಜನ್, ಸದಸ್ಯರುಗಳಾದ ಜೆ.ಕೆ.ಅಪ್ಪಾಜಿ, ವಿಜು, ಮೇಕೇರಿರ ಅರುಣ್, ಕಾವೇರಿ, ಶಿಲ್ಪಾ, ಉದ್ಯಾನವನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕಾರ್ಯಪ್ಪ, ಮಾಲ್ದಾರೆ ಗ್ರಾ.ಪಂ ಅಧ್ಯಕ್ಷ ಸಮೀರ್, ಪಾಲಿಬೆಟ್ಟ ವಿಎಸ್.ಎಸ್.ಎನ್ ಅಧ್ಯಕ್ಷ ಶ್ಯಾಮ್ ಚಂದ್ರ, ಇಂಜಿನಿಯರ್ ಸುಬ್ಬಯ್ಯ, ಪ್ರಮುಖರಾದ ಮಲ್ಲಂಡ ಮಧುದೇವಯ್ಯ, ಬೋಪಣ್ಣ, ರದೀಶ್, ರೆಹಮಾನ್, ಸಮಾಜ ಸೇವಕ ಸಮೀರ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!