ನಾಕೂರು ಶಿರಂಗಾಲ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ಕ್ರೀಡಾಕೂಟ ಸಮಾರೋಪ

March 1, 2021

ಸುಂಟಿಕೊಪ್ಪ ಮಾ.1 : ನಾಕೂರು ಶಿರಂಗಾಲ ಕಾನ್‍ಬೈಲ್ ಫ್ರೆಂಡ್ಸ್ ಯೂತ್ ಕ್ಲಬ್ ವತಿಯಿಂದ 21ನೇ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭ ನಡೆಯಿತು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಸ್ಥಳೀಯ ಪ್ರತಿಭೆಗಳು ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗಲಿದೆ ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಬಿ.ಜಿ.ರಮೇಶ್ ಕುಮಾರ್ ರೈ ಫ್ರೆಂಡ್ಸ್ ಯೂತ್ ಕ್ಲಬ್ ಸಂಘಟನೆ ಕೇವಲ ಕ್ರೀಡಾಕೂಟಕ್ಕೆ ಸೀಮಿತವಾಗಿರದೆ ಶ್ರಮದಾನ, ಸಾಮಾಜಿಕ, ಸಾರ್ವಜನಿಕ ಸೇವೆಗಳಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವೆಂದರು.
ತಾ.ಪಂ ಸದಸ್ಯ ಮಣಿ ಧರ್ಮ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸ್ಥಾಪಕ ಅಧ್ಯಕ್ಷ ಕೆ.ಪಿ.ವಸಂತ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಬೆಳೆಗಾರರಾದ ನೀಲಮ್ಮ ಪೆಮ್ಮಯ್ಯ, ಗ್ರಾ.ಪಂ ಪಿಡಿಓ ಗೂಳಪ್ಪ ಕೂತಿನ, ಉಪಾಧ್ಯಕ್ಷ ಸತೀಶ್, ಸದಸ್ಯರುಗಳಾದ ಮಂದೋಡಿ ಶಶಿ, ಸೀತೆ, ರಾಧಾಮಣಿ, ಗ್ರಾ.ಪಂ ಮಾಜಿ ಅಧ್ಯಕ್ಷೆ ರಂಜಿನಿ, ಉಪಾಧ್ಯಕ್ಷೆ ಯಶೋಧ, ತಾ.ಪಂ ಮಾಜಿ ಉಪಾಧ್ಯಕ್ಷ ಶಂಕರನಾರಾಯಣ, ಪ್ರಮುಖರಾದ ವಿನ್ಸೆಂಟ್ ಬಾಬು, ತೀರ್ಥ ಪ್ರಸಾದ್, ಕೊಡಗು ಅಮೆಚಾರ್ ಕಬಡ್ಡಿ ಸಂಸ್ಥೆಯ ಅಧ್ಯಕ್ಷ ಉತ್ತಪ್ಪ ಹಾಜರಿದ್ದರು.
ಕಾನ್ ಬೈಲ್ ಸರಕಾರಿ ಶಾಲಾ ಮೈದಾನದಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಪುರುಷರಿಗೆ ಮುಕ್ತ ಕಬಡ್ಡಿ ಪಂದ್ಯಾಟ, ಹಗ್ಗ ಜಗ್ಗಾಟ, ಮಹಿಳೆಯರಿಗಾಗಿ ಹಗ್ಗ ಜಗ್ಗಾಟ, ರಸ್ತೆ ಓಟ, ಬಾಂಬ್ ಇನ್ ದ ಸಿಟಿ, ಪಾಸಿಂಗ್ ಬಾಲ್, ಮಕ್ಕಳಿಗಾಗಿ ಕಾಳು ಹೆಕ್ಕುವುದು, ಕಪ್ಪೆಜಿಗಿತ, ಗೋಣಿಚೀಲ ಓಟ ಕ್ರೀಡಾ ಮತ್ತಿತರ ಕೂಟಗಳನ್ನು ನಡೆಸಲಾಯಿತು.
ಕಬಡ್ಡಿ ಪಂದ್ಯಾವಳಿಯಲ್ಲಿ ಕುಶಾಲನಗರದ ಸತ್ಯ ಸ್ಫೋಟ್ರ್ಸ್ ತಂಡ ಗೆಲುವು ಸಾಧಿಸಿತು. ದ್ವಿತೀಯ ನಾಕೂರು ಟಿಂಬರ್ ಬಾಯ್ಸ್ ಮತ್ತು ತೃತೀಯ ಬಹುಮಾನ ಸ್ಟ್ರೈಕ್ ಸ್ಪೋಟ್ರ್ಸ್ ಕುಶಾಲನಗರ ತಂಡ ಪಡೆದುಕೊಂಡಿತು.

error: Content is protected !!