ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ : ಪೆರುಂಬಾಡಿಯಲ್ಲಿ ಆಟಗಾರರ ಹರಾಜು ಪ್ರಕ್ರಿಯೆ

March 2, 2021

ವಿರಾಜಪೇಟೆ, ಮಾ. 2 : ಮಾಹಾಶಿವರಾತ್ರಿ ಪ್ರಯುಕ್ತ ಪುರುಷರ ಹೊನಲು ಬೆಳಕಿನ ತಾಲ್ಲೂಕು ಮಟ್ಟದ ಮುಕ್ತ ಕಬ್ಬಡ್ಡಿ ಪಂದ್ಯಾವಳಿಗೆ ಆಟಗಾರರ ಬಿಡ್ ನಡೆಸುವ ಮೂಲಕ ಚಾಲನೆ ನೀಡಲಾಯಿತು.

ವಿರಾಜಪೇಟೆ ತಾಲ್ಲೂಕು ಪೆರುಂಬಾಡಿ ಗ್ರಾಮದ ಯೂತ್ ಫ್ರೆಂಡ್ಸ್ ಸಂಸ್ಥೆಯು ಶಿವರಾತ್ರಿ ಪ್ರಯುಕ್ತ ಪ್ರಥಮ ವರ್ಷದ ಹೊನಲು ಬೆಳೆಕಿನ ಪುರುಷರ ಕಬಡ್ಡಿ ಪ್ರಿಮಿಯರ್ ಲೀಗ್ ಪಂದ್ಯಾಟದ ಆಟಗಾರರ ಬಿಡ್ ಅನ್ನು ಮೆಗ್ನೋಲೀಯ ರೆಸಾರ್ಟ್ ಸಭಾಂಗಣದಲ್ಲಿ ನಡೆಯಿತು.

ಪಂದ್ಯಾಟದ ಆಯೋಜಕ ಉಮೇಶ್ ಟಿ.ಬಿ ಮಾತನಾಡಿ, ಗ್ರಾಮೀಣಾ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಮತ್ತು ಉತ್ತೇಜನ ನೀಡುವ ನಿಟ್ಟಿನಲ್ಲಿ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು. ಪೆರುಂಬಾಡಿ ಗ್ರಾಮದ ಅಯ್ಯಪ್ಪ ಭಜನಾ ಮಂದಿರದ ಆವರಣದಲ್ಲಿ ಶಿವರಾತ್ರಿಯ ಪ್ರಯುಕ್ತ ತಾ.10 ಮತ್ತು 11 ರಂದು ಪಂದ್ಯಾಟವನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಟ್ರೋಫಿ ಮತ್ತು ನಗದು ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಪಂದ್ಯಾವಳಿಗಳು ಲೀಗ್ ಮಾದರಿಯಲ್ಲಿದ್ದು, ತಾಲ್ಲೂಕಿನ ವಿವಿಧ ಭಾಗಗಳ ಒಟ್ಟು 80 ಮಂದಿ ಕ್ರೀಡಾ ಪಟುಗಳು 85 ಅರ್ಜಿಗಳು ಸಲ್ಲಿಕೆಯಾಗಿದೆ. ಒಟ್ಟು ಗ್ರಾಮದ ಏಳು ತಂಡಗಳಾದ ಎಲ್ಲೊ ವಾರಿಯರ್ಸ್, ಸೇವನ್ ಇಗಲ್ಸ್, ಬ್ಲಾಕ್ ಪಾಂಥೇರ್ಸ್, ಸ್ಟøಂಜರ್ಸ್ ,ಪ್ರಗತಿ ಸ್ಪೋಟ್ರ್ಸ ಅಕಾಡೆಮಿ, ಸೈಕೊ ಚಾಲೇಂಜರ್ಸ್ ಮತ್ತು ಮೈಲ್ ಸ್ಟೋನ್ ಪ್ರಮುಖ ತಂಡಗಳಾಗಿವೆ. ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ 10 ಮಂದಿ ಮುಂಚೂಣಿಯ ಆಟಗಾರರ ಆಯ್ಕೆ ನಡೆಯಿತು. ದ್ವಿತೀಯ ಭಾಗದಲ್ಲಿ ಉಳಿದ ಮುಂಚೂಣಿಯ ಆಟಗಾರರ ಆಯ್ಕೆ ನಡೆದವು,

ಬಿಡ್ ಕಾರ್ಯಕ್ರಮದಲ್ಲಿ ಆಯೋಜಕ ಹರೀಶ್ ಕುಟ್ಟನ್, ಟಿ.ಬಿ., ನಿಖಿಲ್ ಉನ್ನಿ, ಅನುಕೃತ್ ನಂದು, ಮನು ಟಿ.ಬಿ. ಮತ್ತು ಪ್ರಮುಖ ತಂಡಗಳ ಮಾಲೀಕರು, ಸಹ ಪ್ರಯೋಜಕರುಗಳು ಹಾಗೂ ಆಟಗಾರರು ಹಾಜರಿದ್ದರು.

error: Content is protected !!