ಗೋಣಿಕೊಪ್ಪದಲ್ಲಿ ಮನೆಮನೆ ನಲ್ಲಿ ನೀರು ಸಂಪರ್ಕಕ್ಕೆ ಶಾಸಕ ಕೆ.ಜಿ ಬೋಪಯ್ಯ ಚಾಲನೆ

March 2, 2021

ಮಡಿಕೇರಿ ಮಾ. 2 : ಗೋಣಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಮನೆಮನೆಗೆ ನಲ್ಲಿ ನೀರು ಸಂಪರ್ಕಕ್ಕೆ ಶಾಸಕ ಕೆ.ಜಿ ಬೋಪಯ್ಯ ಚಾಲನೆ ನೀಡಿದರು.
ರೂ. 60.72 ಲಕ್ಷ ಅನುದಾನದಲ್ಲಿ ಸುಮಾರು 105 ಮನೆಗಳಿಗೆ ಜಲಜೀವನ ಯೋಜನೆಯಡಿಯಲ್ಲಿ ಮನೆಮನೆ ನಲ್ಲಿ ನೀರು ವ್ಯವಸ್ಥೆ ಕಲ್ಪಿಸಲಾಯಿತು.
ಇದೇ ಸಂದರ್ಭ ಗೋಣಿಕೊಪ್ಪ ಪಂ. ವ್ಯಾಪ್ತಿಯ 1ನೇ ವಿಭಾಗದ ಶ್ರೀ ಉಮಾಮಹೇಶ್ವರಿ ಬಡಾವಣೆಯಲ್ಲಿ ಶಾಸಕರ ಅನುದನ ರೂ. 25 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕುಡಿಯುವ ನೀರಿನ ಟ್ಯಾಂಕ್‍ನ್ನು ಉದ್ಘಾಟಿಸಿದರು.
ಜಿ.ಪಂ ಸದಸ್ಯ ಸಿ.ಕೆ ಬೋಪಣ್ಣ, ಗೋಣಿಕೊಪ್ಪ ಗ್ರಾ.ಪಂ. ಅಧ್ಯಕ್ಷ ಸೆಲ್ವಿ, ಸದಸ್ಯರುಗಳಾದ ಬಿ.ಎನ್ ಪ್ರಕಾಶ್, ರಾಮ ಕೃಷ್ಣ, ನೂರೆರ ರತಿ ಅಚ್ಚಪ್ಪ, ಮಂಜು ಸುರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಕರ್, ಜಿ.ಪಂ ಇಂಜಿನಿಯರ್ ಮಹದೇವ್, ಗ್ರಾಮೀಣ ಕುಡಿಯುವ ನೀರು ಅಭಿವೃದ್ಧಿ ಇಲಾಖೆ ಅಧಿಕಾರಿ ಯೋಗೇಶ್ ಗೌಡ, ಜಿಮ್ಮ ಸುಬ್ಬಯ್ಯ, ಪ್ರೊ. ಇಟ್ಟಿರಾ ಬಿದ್ದಪ್ಪ, ಕಮಲಾಕ್ಷಿ ಬಿದ್ದಪ್ಪ, ಹಾಜರಿದ್ದರು.

error: Content is protected !!