ಸೋಮವಾರಪೇಟೆ ಪ.ಪಂ ಗೆ ಜಿಲ್ಲಾಧಿಕಾರಿ ಭೇಟಿ : ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂಡನೆ ಸಮಾಲೋಚನೆ

March 2, 2021

ಮಡಿಕೇರಿ ಮಾ. 2 : ಸೋಮವಾರಪೇಟೆ ಪ.ಪಂ ಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪಂಚಾಯಿತಿ ಕಚೇರಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂಡನೆ ಸಮಾಲೋಚನೆ ನಡೆಸಿದರು.
ಪಟ್ಟಣದ ವಿಸ್ತೀರ್ಣ, ಪಂಚಾಯ್ತಿಯ ಆಸ್ತಿ, ಆದಾಯದ ಮೂಲಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಕಸವಿಲೇವಾರಿ,ಪ್ಲಾಸ್ಟಿಕ್ ನಿಷೇದ,ಕಂದಾಯ ವಸೂಲಾತಿಬಗ್ಗೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ ಸಂಬಂಧಿಸಿದಂತೆ ಬರುವ ಸಮಸ್ಯೆಗಳನ್ನು ಗಮನಿಸಿ ತಕ್ಷಣವೇ
ಕ್ರಮಕೈಗೊಂಡು ಪರಿಹರಿಸುವಂತೆ ತಹಶೀಲ್ದಾರ್ ಗೋವಿಂದರಾಜು ಅವರಿಗೆ ತಿಳಿಸಿದರು.
ಈ ಸಂದರ್ಭ ಪ.ಪಂ.ಅಧ್ಯಕ್ಷೆ ನಳಿನಿ ಗಣೇಶ್, ಸದಸ್ಯರುಗಳಾದ ಮಹೇಶ್,ಸೋಮೇಶ್,ಎಸ್.ಮಹೇಶ್,ಶರತ್,ಮುಖ್ಯಾಧಿಕಾರಿ ನಾಚಪ್ಪ,ಅಭಿಯಂತರ ಹೇಮಂತ್,ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!