ಮಡಿಕೇರಿಯ ತನಲ್ ಆಶ್ರಮದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಪುಟಾಣಿ ಜೋನಾ

March 2, 2021

ಮಡಿಕೇರಿ ಮಾ.2 : ಸಾಮಾಜಿಕ ಕಾರ್ಯಕರ್ತ, ನಗರಸಭಾ ಮಾಜಿ ಸದಸ್ಯ ಹಾಗೂ ಕೊಡಗು ತನಲ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಕೆ.ಜಿ.ಪೀಟರ್ ತಮ್ಮ ಮೊಮ್ಮಗಳು ಜೋóನಾಳ 5 ನೇ ವರ್ಷದ ಹುಟ್ಟು ಹಬ್ಬವನ್ನು ತನಲ್ ಆಶ್ರಮದಲ್ಲಿ ಸರಳವಾಗಿ ಆಚರಿಸಿದರು.
ಸಂತ ಮೈಕಲರ ಚರ್ಚ್‍ನ ಭಗಿನೀಯರ ಪ್ರಾರ್ಥನೆಯೊಂದಿಗೆ 5 ನೇ ವರ್ಷಕ್ಕೆ ಕಾಲಿಟ್ಟ ಜೋóನಾ ಕೇಕ್ ಕತ್ತರಿಸಿ ಸಂಧ್ಯಾ ಕಾಲದ ಬಂಧುಗಳಿಗೆ ಹಂಚುವ ಮೂಲಕ ಸಂಭ್ರಮಿಸಿದರು.
ತನಲ್ ಸಂಸ್ಥೆಯ ಅಧ್ಯಕ್ಷ ಎಂ.ಎಚ್.ಮೊಹಮ್ಮದ್ ಮುಸ್ತಫ, ಉಪಾದ್ಯಕ್ಷ ಕೆ.ಟಿ.ಬೇಬಿಮ್ಯಾಥ್ಯು, ಸಹ ಕಾರ್ಯದರ್ಶಿ ಅಬ್ದುಲ್ಲ ಮಡಿಕೇರಿ, ಹಿರಿಯರಾದ ಬಾಬುಚಂದ್ರ ಉಳ್ಳಾಗಡ್ಡಿ, ಅಝ್ಗರ್ ಆಲಿ ಹಾಗೂ ಪೀಟರ್ ಅವರ ಕುಟುಂಬದ ಸದಸ್ಯರುಗಳು ಹಾಜರಿದ್ದು ಜೋóನಾಳಿಗೆ ಶುಭ ಕೋರಿದರು.

error: Content is protected !!