ಬಾಡಗಕೇರಿಯ ಶ್ರೀ ಮೃತ್ಯುಂಜಯ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯುತ್ತಿರುವ ವಾರ್ಷಿಕೋತ್ಸವ

March 2, 2021

ಮಡಿಕೇರಿ ಮಾ.2 : ವಿರಾಜಪೇಟೆ ತಾಲ್ಲೂಕಿನ ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಶ್ರದ್ಧಾಭಕ್ತಿಯಿಂದ ನಡೆಯುತ್ತಿದೆ.
ಫೆ.24 ರಿಂದ ಆರಂಭಗೊಂಡಿರುವ ವಾರ್ಷಿಕೋತ್ಸವದ ಧಾರ್ಮಿಕ ವಿಧಿ ವಿಧಾನಗಳು ಮಾ.5 ರಂದು “ಕೊಡಿಮರ” ಇಳಿಸುವುದರೊಂದಿಗೆ ಸಂಪನ್ನಗೊಳ್ಳಲಿದೆ. ಸೋಮವಾರ ರಾತ್ರಿ ಮತ್ತು ಮಂಗಳವಾರ ಉತ್ಸವ ಮೂರ್ತಿ ದರ್ಶನ, ನಿತ್ಯ ಪೂಜೆ, ತೂಚಂಬಲಿ, ಭಂಡಾರ ಬರುವುದು, ಇರುಬಳಕು, ಹರಕೆ ಬಳಕು ಹಾಗೂ ಪ್ರಸಾದ ವಿತರಣೆ ನಡೆಯಿತು.
::: 3 ದಿನ ನಡೆಯುವ ಪೂಜೆ :::
ಮಾ.3 ರಂದು ಸಂಜೆ 5 ಗಂಟೆಗೆ ಇರುಬಳಕು, ಹರಕೆ ಬಳಕಿನ ಪ್ರಸಾದ ವಿತರಣೆ ನಂತರ ಬೆಳಗ್ಗೆ 11 ಗಂಟೆಗೆ ನಿತ್ಯ ಪೂಜೆ ನಡೆಯಲಿದ್ದು, ಸಂಜೆ 5 ಗಂಟೆಗೆ ನೆರವು, ರಾತ್ರಿ 8 ಗಂಟೆಗೆ ಶ್ರೀ ವಿಷ್ಣು ದೇವರ ಅಲಂಕಾರ ಪೂಜೆ ಜರುಗಲಿದೆ.
ಮಾ.4 ರಂದು ಬೆಳಗ್ಗೆ 10 ಗಂಟೆಯಿಂದ ನಿತ್ಯ ಪೂಜೆ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ನಂತರ ಸಂಜೆ 3 ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ನಡೆಯಲಿದೆ. ಸಂಜೆ 5 ಗಂಟೆಗೆ ಉತ್ಸವ ಮೂರ್ತಿ ದರ್ಶನ, ಅವಭೃತ ಸ್ನಾನ, ರಾತ್ರಿ ಉತ್ಸವ ಮೂರ್ತಿ ದರ್ಶನ ನಂತರ ವಸಂತ ಪೂಜೆ ಜರುಗಲಿದೆ.
ಮಾ.5 ರಂದು ಬೆಳಗ್ಗೆ 10.30ಕ್ಕೆ “ಕೊಡಿಮರ” ಇಳಿಸುವುದು ಮತ್ತು 11 ಗಂಟೆಗೆ ಎಂದಿನಂತೆ ನಿತ್ಯ ಪೂಜೆ ಜರುಗಲಿದೆ.

error: Content is protected !!