ಮಾ.6 ಮತ್ತು 7 ರಂದು “ಕೊಯಿಮೆ-2021” ಕೊಡವ ಸಾಂಸ್ಕೃತಿಕ ಉತ್ಸವ

March 2, 2021

ಮಡಿಕೇರಿ ಮಾ.2 : ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್‍ನ ವತಿಯಿಂದ ಮಾ.6 ಮತ್ತು 7 ರಂದು “ಕೊಯಿಮೆ-2021” ಕೊಡವ ಸಾಂಸ್ಕೃತಿಕ ಮತ್ತು ಕಲಿಕಾ ಮಹೋತ್ಸವವು ಪೊನ್ನಂಪೇಟೆಯಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಸಂಚಾಲಕ ಚೇಂದಂಡ ಶಮ್ಮಿ ಮಾದಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡವ ಸಾಂಸ್ಕøತಿಕ, ಸಾಹಿತ್ಯ, ಆಚಾರ, ವಿಚಾರ, ಪದ್ದತಿಯನ್ನು ಮುಂದಿನ ತಲೆಮಾರಿಗೆ ತಿಳಿಯಪಡಿಸುವ ನಿಟ್ಟಿನಲ್ಲಿ ಪೆÇನ್ನಂಪೇಟೆಯ ಚಿಕ್ಕಮಂಡೂರು ಗ್ರಾಮದ ಅಪ್ಪಚ್ಚ ಕವಿ ವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆಸಲು ತೀರ್ಮಾನಿಸಲಾಗಿದ್ದು, ಕೊಡವ ಜನಾಂಗಕ್ಕೆ ಸಂಬಂಧ ಪಟ್ಟ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ಮಹಿಳೆಯರ ವಿಭಾಗಕ್ಕೆ ಉಮ್ಮತ್ತಾಟ್ (122) 8 ನಿಮಿಷಗಳ ಕಾಲವಕಾಶ, ಆಶು ನಟನೆ (ಆಂಜೆಡ್‍ತ್ ನಟನೆ),ಕೊಡವ ತಿನಿಸು (3 ಕೊಡವ ಪುಟ್ಟ್’ ಇರಬೇಕು), ಕೊಡವ ಹಾಡಿಗೆ ಗುಂಪು ನೃತ್ಯ (ಕೂಟ್ ಆಟ್) 8-12 ಮಂದಿ, 5 ನಿಮಿಷ ಕಾಲವಕಾಶ ನೀಡಲಾಗುವುದು, ಚೋದ್- ಚೋದ್ಯ (ರಸಪ್ರಶ್ನೆ) ಇಬ್ಬರ ಒಂದು ತಂಡಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದರು. ಆಮಕ್ಕಡ ವಿಭಾಗದಲ್ಲಿ ಬೊಳ್‍ಕಾಟ್(124), ಕೋಲಾಟ್(124) ಬಾಳೊಪಾಟ್(48), ಕತ್ತಿಯಾಟ್(12*4) ಇವುಗಳಿಗೆ ಆರು ನಿಮಿಷಗಳ ಕಾಲವಕಾಶ ನೀಡಲಾಗುವುದು. ಪರೆಯಕಳಿ(2 ಜನ) 3 ನಿಮಿಷ, ತಾಲಿಪಾಟ್(4 ಜನ), ಸಮ್ಮಂಧ ಅಡ್‍ಕೊ ಸ್ಪರ್ಧೆಗೆ 8 ನಿಮಿಷಗಳ ಕಾಲವಕಾಶ ನೀಡಲಾಗುವುದು. ಅಲ್ಲದೆ ಮಕ್ಕಳ ವಿಭಾಗಕ್ಕೆ ಕಪ್ಪೆ ಆಟ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.

ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಕೊಡವ ಹಾಡು (ಸ್ವರ್ಗೀಯ ಕೊಡವ ಸಾಹಿತಿಗಳ ರಚನೆ, ಪ್ರಾಚೀನ ವಸ್ತು ಸಂಗ್ರಹ (ಕೊಡವಾಮೆಗೆ ಸಂಬಂಧ ಪಟ್ಟಂತೆ), ವಾಲಗತ್ತಾಟ್, ಕಥೆ ಹೇಳುವುದು( 8 ನಿಮಿಷ- ಸ್ವಂತ ರಚನೆ, ವೀರ ಶೂರರ ಕತೆ, ಮಕ್ಕಳ ಕಥೆ, ಕಾಲ್ಪನಿಕ ಕಥೆ), ಹಳೆಯ ಕಾಲದ ಸಾಂಸ್ಕೃತಿಕ ವೈಭವಕ್ಕೆ ಸಂಬಂಧಪಟ್ಟ ಫೆÇೀಟೊ (ವ್ಯಕ್ತಿ, ವಸ್ತು, ಘಟನೆಗೆ ಸಂಬಂಧಪಟ್ಟಂತೆ), ತೆಂಗಿನ ಕಾಯಿ ಎಸೆತ, ಬಿಲ್ಲು ಬಾಣ(ಅಂಬು ಬಿಲ್ಲ್), ಆಶು ಭಾಷಣ (5 ನಿಮಿಷ), ಪ್ರಬಂಧ(ನಿಂತು ಹೋಗಿರುವ ಕೊಡವರ ಮೂಲ ಪದ್ದತಿ), ಒs & ಒಡಿ ಕೊಯಿಮೆ-2021(ಕೊಡವ ಸಾಂಪ್ರದಾಯಿಕ ಉಡುಗೆಯೊಂದಿಗೆ ಮಾತ್ರ ಭಾಗವಹಿಸಲು ಅವಕಾಶ) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
16 ವಯಸ್ಸಿನ ಕೆಳಗಿರುವಮಕ್ಕಳ ವಿಭಾಗದಕ್ಕೆ ಬೋಜಿ ಕುಞÂ ಕ್‍ಣ್ಣ, ಬೋಜಿ ಕುಞÂ ಮೂಡಿ, ಮಿಸ್ಟರ್ ಕೋಯಿಮೆ (ಚಾಯಿಕಾರ ಬಂಬ), ಮಿಸ್ಟರ್ ಕೋಯಿಮೆ (ಚಾಯಿಕರ್ತಿ ಕನ್ನಿ) ಸ್ಪರ್ಧೆಯನ್ನು ಆಯೋಜಿಸಲಾಗಿದೆ.
60 ವರ್ಷ ಮೇಲ್ಪಟ್ಟ ಹಾಗೂ ಕೆಳಗಿವರಿಗೆ ಆದರ್ಶ ದಂಪತಿ, ಚಿತ್ರ ಕುರಿಪೆÇ ಪೈಪೆÇೀಟಿ (ಕೊಡವಾಮೆಗೆ ಸಂಬಂಧಪಟ್ಟ ವಿಚಾರದಲ್ಲಿ ಚಿತ್ರ ಬಿಡಿಸುವುದು, ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದರು.
ಪ್ರತಿಯೊಬ್ಬರಿಗೂ ಯಾವುದಾದರೂ ಒಂದು ತಂಡವನ್ನು ಪ್ರತಿನಿಧಿಸಿ ಮಾತ್ರ ಭಾಗವಹಿಸುವ ಅವಕಾಶವಿದೆ. ಆದರೆ ಇಂತಿಷ್ಟೇ ಸ್ಪರ್ಧೆಯಲ್ಲಿ ಭಾಗವಹಿಸಬೇಕು ಎಂಬ ನಿರ್ಭಂಧವಿಲ್ಲ. ಅಲ್ಲದೆ ವೈಯಕ್ತಿಕ ವಿಭಾಗಗಳಲ್ಲಿ ತಂಡದ ಹೊರತಾಗಿಯೂ ಆಸಕ್ತರು ಭಾಗವಹಿಸಬಹುದಾಗಿದ್ದು, ಪ್ರತಿಯೊಂದು ಸ್ಪರ್ಧೆಯಲ್ಲಿ ಭಾಗವಹಿಸಿ ಅಧಿಕ ಅಂಕಗಳನ್ನು ಗಳಿಸುವ ತಂಡಕ್ಕೆ ಚಾಂಪಿಯನ್ ಪಟ್ಟವನ್ನು ಘೋಷಿಸಲಾಗುವುದು ಎಂದರು.

ಸ್ಪರ್ಧೆಗೆ ಅನೇಕ ಸಂಘ, ಸಂಸ್ಥೆಗಳು, ಗ್ರಾಮ, ಕೇರಿ, ಕುಟುಂಬಗಳು ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದು, ಕೋಯಿಮೆ ನಮ್ಮೆಯ ಸ್ಥಳದಲ್ಲೇ ಹೆಸರು ನೋಂದಾಯಿಸುವ ಅವಕಾಶವನ್ನು ಕಲ್ಪಿಸಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ವಿಸ್ತರಿಸಲಾಗುವುದು ಎಂದರು.
ಕಾರ್ಯಕ್ರಮಕ್ಕೆ ಸುಮಾರು ಮೂರು ಸಾವಿರ ಜನ ಪಾಲ್ಗೊಳ್ಳುವ ನೀರಿಕ್ಷೆ ಇದೆ ಎಂದ ಅವರು, ಎರಡು ದಿನಗಳ ಕಾಲಾವಕಾಶದಲ್ಲಿ ಎಲ್ಲಾ ಕಾರ್ಯಕ್ರಮಗಳು ಪೂರ್ವ ನಿರ್ಧರಿತ ನೀತಿ ನಿಯಮ, ಸಮಯಾವಕಾಶದಂತೆ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಕೋವಿಡ್ ಸಂದರ್ಭದ ಎಲ್ಲಾ ಮುನ್ನೆಚ್ಚರಿಕೆಯ ಕ್ರಮಗಳನ್ನು ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರವನ್ನೆಲ್ಲಾ ಪಾಲಿಸುತ್ತಾ ಈ ನಮ್ಮೆಯನ್ನು ಎಲ್ಲಾ ಕೊಡವ ಭಾಂಧವರ ಸಲಹೆ, ಸಹಕಾರ ಮತ್ತು ಅಧಿಕ ಸಂಖ್ಯೆಯ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ನಡೆಸಲಾಗುವುದೆಂದು.
ಹಲವಾರು ಕೊಡುಗೈ ದಾನಿಗಳು, ಪ್ರಾಯೋಜಕರು ಆರ್ಥಿಕ ಸಹಾಯ, ಉತ್ತಮ ಮಾರ್ಗದರ್ಶನ ನೀಡುತ್ತಿದ್ದಾರೆ. ನಾಡಿನಾದ್ಯಂತ ಜನಸಮೂಹ ಉತ್ತಮ ಸ್ಪಂದನೆದೊರೆಯುತ್ತಿರುವುದಾಗಿ ತಿಳಿಸಿದರು.
ಮತ್ತೋರ್ವ ಸಂಚಾಲಕ ಚೋಕಂಡ ಸೂರಜ್ ಸೋಮಯ್ಯ ಮಾತನಾಡಿ, ಕೊಡಗು ಜಿಲ್ಲೆಯ ಕೊಡವ ಸಮುದಾಯದವರು ಇಂದು ಪ್ರಪಂಚದ ಮೂಲೆ ಮೂಲೆಗಳಲ್ಲಿಯೂ ಉದ್ಯೋಗ, ಉದ್ಯಮ, ವಿದ್ಯಾಭ್ಯಾಸ ಹೀಗೆ ನಾನಾ ಕಾರಣಗಳಿಂದ ನೆಲೆಕಂಡಿದ್ದಾರೆ.
ಕೊಡವ ಕೌಟುಂಬಿಕ ಹಾಕಿ ಉತ್ಸವದ ನೆಪದಲ್ಲಿ ಇದುವರೆಗೂ ತಮ್ಮ ತಾಯ್ನಾಡಿನಲ್ಲಿ, ತಮ್ಮ ಕುಟುಂಬದೊಂದಿಗೆ ಬಂದು ಬೆರೆತು ಪ್ರೀತಿ, ಅನ್ಯೋನ್ಯತೆಯಿಂದ, ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಕಳೆದೆರಡು ವರ್ಷದಿಂದ ಅನಿವಾರ್ಯ ಕಾರಣಗಳಿಂದಾಗಿ ಹಾಕಿ ಕ್ರೀಡಾ ಹಬ್ಬ ನಿಂತಿರುವುದು ವಿಷಾದನೀಯ.
ಇಂತಹ ಸಂದರ್ಭದಲ್ಲಿ ಜನಾಂಗ ಭಾಂಧವರನ್ನು ಒಗ್ಗೂಡಿಸುವ ಸಲುವಾಗಿ, ವರುಷಕ್ಕೊಮ್ಮೆ ಜನಾಂಗ ಭಾಂಧವರ ನಡುವೆ ನಿಕಟ ಬಾಂಧವ್ಯವನ್ನು ಬಲಗೊಳಿಸುವ ಸಲುವಾಗಿ ಕೊಡವ ಸಾಂಸ್ಕೃತಿಕ, ಕಲಿಕಾ ಹಬ್ಬವನ್ನು ಆಯೋಜಿಸಲಾಗಿದೆ ಎಂದರು.
ನಮ್ಮಲಿನ ವಿಶೇಷ ಪಾಂಡಿತ್ಯವಿರುವ ಕಲಾವಿದರು, ತೆರೆಮರೆಯ ಉದಯೋನ್ಮುಖ ಆಟ್, ಪಾಟ್, ಸಾಹಿತ್ಯ, ಕ್ರೀಡಾ ಕ್ಷೇತ್ರ, ಹೀಗೆ ವಿವಿಧ ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ, ವೇದಿಕೆ ಕಲ್ಪಿಸುವ, ಕೊಡವಾಮೆಯ ಸಾರವನ್ನು ಕಲಿಸುವ, ಬೆಳೆಸುವ, ನಿಟ್ಟಿನಲ್ಲಿ ಈ ಕೋಯಿಮೆ ಕಾರ್ಯಕ್ರಮ ಹಬ್ಬವಾಗಿ ಆಚರಿಸಲಾಗುತ್ತಿದೆ ಎಂದರು.
ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಹಿಂದಿನ ಮೂಲ ಉದ್ದೇಶವೇ ಕೊಡವ ಬುಡಕಟ್ಟು ಜನಾಂಗದ ಪದ್ಧತಿಗಳ ಮೂಲ ಸ್ವರೂಪದ ಅನುಪಾಲನೆ ಮತ್ತು ಪುನಶ್ಚೇತನ ನೀಡುವುದು. ಆಧುನಿಕತೆಯ ಭರಾಟೆಯಲ್ಲಿ ನಾವು ಕೈಬಿಟ್ಟ ಕೆಲವು ಅರ್ಥಪೂರ್ಣ ಹಾಗೂ ವಿಶೇಷವಾದ ಆಚರಣೆಗಳಿಗೆ ಜೀವ ನೀಡುವ ಉದ್ದೇಶವನ್ನು ಹೊಂದಿದ್ದು, ಇದೊಂದು ಹೊಸ ಪ್ರಯತ್ನ ಎಂದರು.
ಹಬ್ಬದ ವಿಶೇಷತೆ : ಯಾವುದೇ ಕೊಡವ ಸಮಾಜ, ಕೊಡವ ಕೇರಿ, ಸಂಘ, ಸಂಸ್ಥೆ, ಒಕ್ಕೂಟ, ಊರು, ಕುಟುಂಬ, ಹೀಗೆ ತಂಡ ರಚನೆ ಮಾಡಿ ಪ್ರತಿನಿಧಿಯಳಾಗಿ ಭಾಗವಹಿಸಲು ಅವಕಾಶವಿದೆ. ಒಂದು ತಂಡದ ಹೆಸರಿನಲ್ಲಿ ಒಮ್ಮೆ ಮಾತ್ರ ಭಾಗವಹಿಸಲು ಅವಕಾಶ ಮಾಡಲಾಗಿದೆ.
ಪಡಿಪು ಕಯ್ಯಾಲೆ ಎನ್ನುವ ಕಲಿಕಾ ಕೇಂದ್ರದಲ್ಲಿ ನಮ್ಮ ಸಂಸ್ಕೃತಿ, ಸಾಹಿತ್ಯ, ಆಚಾರ ವಿಚಾರ, ಪದ್ಧತಿ ಪರಂಪರೆಯನ್ನು ಮೆಲುಕು ಹಾಕುತ್ತಾ ಮುಂದಿನ ತಲೆಮಾರಿನವರಿಗೆ ನಮ್ಮ ವಿಶೇಷ ಸಂಸ್ಕøತಿಯ ಬಗ್ಗೆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗುವುದು.
ತಲೆತಲಾಂತರದಿಂದ ಕೊಡವ ಪೂರ್ವಜರು ಉಪಯೋಗಿಸುತ್ತಿದ್ದ ಕೃಷಿ, ಕಲೆ, ಪರಿಕರಗಳು, ದಿನ ಬಳಕೆಯ ವಸ್ತುಗಳ ಸಂಗ್ರಹವನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದರು.
ಕೊಡವರ ನಡುವೆ ಇರುವ ಯಶಸ್ವಿ ಉದ್ಯಮಿಗಳನ್ನು ಗುರುತಿಸಿ ಅವರಿಂದ ಉದಯೋನ್ಮುಖ ಉದ್ಯಮಿಗಳಿಗೆ ಹಾಗೂ ಆಸಕ್ತರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬಿಸಿನೆಸ್ ಕೋನ್‍ಕ್ಲೇವ್ ಎಂಬ ನೂತನ ಪರಿಕಲ್ಪನೆಯೊಂದಿಗೆ ವ್ಯಾಪಾರೋದ್ಯಮ ಕ್ಷೇತ್ರದ ಸಾಧಕರನ್ನು ಅರಿತುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ತಿಳಿಸಿದರು.
ಅಲ್ಲದೇ ಮಾರಾಟ ಕೇಂದ್ರಗಳನ್ನು ತೆರೆದು ವಿವಿಧ ಬಗೆಯ ತಿಂಡಿ ತಿನಿಸು, ದಿನ ಬಳಕೆಯ ವಸ್ತುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಕೊಡವ ಉಡುಪಿನ ವೈಶಿಷ್ಟ್ಯತೆಗಳಾದ ಪಾನಿ ಮಂಡೆತುಣಿ, ನೀಲಿ ಮತ್ತು ಕೆಂಪು ಬಣ್ಣದ ಚೇಲೆಗಳನ್ನು ಪ್ರತ್ಯೇಕ ಮಾರಾಟ ಮಳಿಗೆಯಲ್ಲಿ ಮಾರಾಟಕ್ಕೆ ಇರಿಸಲಾಗುತ್ತದೆ. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಕೊಡವರ ಧಾರ್ಮಿಕ ಮತ್ತು ಸಂಸ್ಕೃತಿಯ ಧ್ಯೋತಕವಾದ ವಿಶೇಷ ಮತ್ತು ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುವುದು. ಎಲ್ಲಾ ಕೊಡವ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕೋಯಿಮೆ ಉತ್ಸವವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗೆ ಚೋಕಂಡ ಸೂರಜ್ ಸೋಮಯ್ಯ-9902582230, ನಿರನ್ ನಾಚಪ್ಪ-9611506319, ಚೇಂದಂಡ ಶಮ್ಮಿ ಮಾದಯ್ಯ-99459 99366 ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಸ್ಥಪಕರಾದ ಶಾಂತೆಯಂಡ ನಿರನ್ ನಾಚಪ್ಪ, ಸಂಚಾಲಕ ಕೇಲೆಟ್ಟಿರ ಪವಿತ್ ಪೂವಯ್ಯ ಉಪಸ್ಥಿತರಿದ್ದರು.

error: Content is protected !!