ರಾಷ್ಟ್ರ ಮಟ್ಟದ ಕ್ರಿಕೆಟ್ : ಮಡಿಕೇರಿ ಮ್ಯೆಕ್ಸ್ ವೆಲ್ ತಂಡಕ್ಕೆ ಪ್ರಶಸ್ತಿ : ಕೋಬ್ರ ಸ್ಟಾರ್ ದ್ವಿತೀಯ

March 2, 2021

ವಿರಾಜಪೇಟೆ ಮಾ.2 : ವಿರಾಜಪೇಟೆ ಬ್ಲಾಕ್ ಕೋಬ್ರ ಮತ್ತು ಆದ್ಯಾ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ನಡೆದ ರಾಷ್ಟø ಮಟ್ಟದ ಅಫ್ರೀದ್ ಜ್ಞಾಪಕಾರ್ಥ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಡಿಕೇರಿ ಮ್ಯೆಕ್ಸ್ ವೆಲ್ ತಂಡಕ್ಕೆ ಪ್ರಶಸ್ತಿ ಲಭಿಸಿದೆ. ಕೋಬ್ರ ಸ್ಟಾರ್ ದ್ವೀತಿಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ವಿವಿಧ ರಾಜ್ಯ ಮತ್ತು ಜಿಲ್ಲೆಗಳ ಸುಮಾರು 40 ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದವು.
ಚಿಕ್ಕಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಅಂತರರಾಷ್ಟ್ರೀಯ ಕ್ರೀಡಾಪಟುಗಳಾದ ಮಾದಂಡ ತಿಮ್ಮಯ್ಯ ಹಾಗೂ ನಡಿಕೇರಿಯಂಡ ಅಕ್ಕಮ್ಮ ಕ್ರೀಡಾಜ್ಯೋತಿ ಬೆಳಗಿಸುವ ಮೂಲಕ ಪಂದ್ಯಾಟವನ್ನು ಉದ್ಘಾಟಿಸಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜಿ.ಪಂ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಉದ್ಯಮಿ ವಿಷ್ಣು, ಬಿಜೆಪಿ ಪ್ರಮುಖ ಪಟ್ರಪಂಡ ರಘು ನಾಣಯ್ಯ, ಪಂದ್ಯಾಟದ ಪ್ರಯೋಜಕ ಸಚಿನ್ (ಸಚ್ಚು) ಪಿಟ್ನೇಸ್ ಜಿಮ್ ನ ಮಾಲೀಕ ಸಂಪತ್ ಮತ್ತಿತರರು ಹಾಜರಿದ್ದರು.

error: Content is protected !!