ಸುಂಟಿಕೊಪ್ಪ ಪಶು ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟನೆ

March 3, 2021

ಸುಂಟಿಕೊಪ್ಪ,ಮಾ.2: ಸರಕಾರಿ ನೌಕರರಿಗೆ ಕೆಲಸ ಮಾಡುವ ಮನಸ್ಥಿತಿ ಗಟ್ಟಿ ನಿರ್ಧಾರ ಇರಬೇಕು ಎಂದು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ವತಿಯಿಂದ ಸುಂಟಿಕೊಪ್ಪ ಪಶು ಆಸ್ಪತ್ರೆಯ ನೂತನ ಕಟ್ಟಡ ಸಮಾರಂಭ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಸರಕಾರದ ನಿಧಿಯಿಂದ 29 ಲಕ್ಷದ 60 ಸಾವಿರ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಿದ್ದು, ರೈತರಿಗೆ ಜಾನುವಾರು ಸಾಕುವವರಿಗೆ ಪ್ರಯೋಜನವಾಗಲಿದೆ. ದನಗಳ ಸಂಖ್ಯೆ ಕಡಿಮೆಯಾಗಿದೆ. ಜನ ಸಂಖ್ಯೆ ಹೆಚ್ಚಾಗಿದೆ. ಅಧಿಕಾರಿಗಳು ನೌಕರ ಸಂಖ್ಯೆ ಕಡಿಮೆಯಾಗಿದ್ದರೂ ಶೃದ್ಧೆಯಿಂದ ಕೆಲಸ ಮಾಡಬೇಕೆಂದು ಕರೆ ನೀಡಿದರು.
ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ ಮಾತನಾಡಿ ಪಶುವೈದ್ಯಕೀಯ ಕಛೇರಿ ನಿರ್ಮಿಸಿದ್ದರಿಂದ ಪಶುಸ್ನೇಹಿಗಳಿಗೆ ಅನುಕೂಲವಾಗಿದೆ. ಕೇಂದ್ರ ಸರಕಾರ ಪೆಟ್ರೋಲ್,ಡಿಸೇಲ್, ಅಡುಗೆ ಅನಲ ಸೇರಿದಂತೆ ನಿತ್ಯೋಪಯೋಗಿ ಬೆಲೆ ಹೆಚ್ಚಿಸಿದ್ದರಿಂದ ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಬೆಲೆ ಕಡಿಮೆಗೊಳಿಸಲು ಸಂಸದರು ಶಾಸಕರು ಸರಕಾರದ ಮೇಲೆ ಒತ್ತಡ ತರಬೇಕು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಪ್ರತಾಪಸಿಂಹ ಅವರು ಕೊರೊನಾದಿಂದ ದೇಶದ ಅರ್ಥಿಕ ಪರಿಸ್ಥಿತಿ ಕುಂಠಿತವಾಗಿದೆ. ಮುಂದಿನ ದಿನಗಳಲ್ಲಿ ಸುಧಾಹರಣೆಯಾಗಲಿದೆ. ಆನೇಕ ಜನಪ್ರಿಯ ಯೋಜನೆಗಳಿಂ ಜನರಿಗೆ ಪ್ರಯೋಜನವಾಗಿದೆ. ಗ್ರಾಮ ಪಂಚಾಯಿತಿಗೆ ಜಲ ಮಿಷನ್ ಯೋಜನೆ,ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ,ಉಜ್ವಲ ಯೋಜನೆ,ಸೌಭಾಗ್ಯ ಯೋಜನೆ ಕಿಸಾನ್ ಸಮ್ಮಾನ ಯೋಜನೆಯಿಂದ ಎಲ್ಲಾ ವರ್ಗದವರಿಗೆ ಸರಕಾರ ಯೋಜನೆ ರೂಪಿಸಿದೆ ಎಂದು ವಿವರಣೆ ನೀಡಿದರು.
ವೇದಿಕೆಯಲ್ಲಿ ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯ ಕೆ.ಪಿ.ಚಂದ್ರಕಲಾ, ಜಿ.ಪಂ.ಸದಸ್ಯ ಪಿ.ಎಂ.ಲತೀಫ್, ತಾ.ಪಂ.ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ, ಓಡಿಯಪ್ಪನ ವಿಮಾಲಾವತಿ, ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಗ್ರಾ.ಪಂ.ಸದಸ್ಯರುಗಳು ಉಪಸ್ಥಿತರಿದ್ದರು.
ಪಶು ಸಂಗೋಪಾನಾ ಇಲಾಖೆಗೆ ಜಾಗ ದಾನಿಗಳಾದ ದಿ. ನಿರುವಾಣಿಗೌಡ್ನ.ಟಿ.ರುದ್ರಪ್ಪ ಅವರ ಪುತ್ರರಾದ ಎನ್.ಆರ್. ನಂಜಪ್ಪ ಹಾಗೂ ಎನ್.ಎಸ್.ದೇವಪ್ಪ ಇವರುಗಳಿಗೆ ಶಾಲು ಹಾಕಿ ಸನ್ಮಾನಿಸಲಾಯಿತು.
ಜಿಲ್ಲಾ ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕರುಗಳಾದ ಶಿವು, ಬಾದಾಮಿ ಕಾರ್ಯಕ್ರಮ ನಿರೂಪಿಸಿದರು.
ಕೊಡಗು ಜಿಲ್ಲಾ ಬಿಜೆಪಿ ಮಾಜಿಅಧ್ಯಕ್ಷ ಬಿ.ಬಿ.ಭಾರತೀಶ್, ಡಾ.ಶಶಿಕಾಂತ ರೈ, ದಾಸಂಡ ರಮೇಶ್ ಚಂಗಪ್ಪ, ಎಂ.ಎನ್.ಕೊಮರಪ್ಪ ಮತ್ತಿತರರು ಇದ್ದರು.

error: Content is protected !!