ಮಡಿಕೇರಿ ಮಿಸ್ಟಿ ಹಿಲ್ಸ್ ನಿಂದ ಗಾಯಕ ಶರಣ್ ಅಯ್ಯಪ್ಪ ಗೆ ಸನ್ಮಾನ

March 3, 2021

ಮಡಿಕೇರಿ. ಮಾ. 3 : ರಾಜ್ಯದ ಉದಯೋನ್ಮುಖ ಗಾಯಕ, ಹಾಡು ಕನಾ೯ಟಕ ಖ್ಯಾತಿಯ ಮಚ್ಚಂಡ ಶರಣ್ ಅಯ್ಯಪ್ಪ ಅವರನ್ನು ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಗ್ಗೋಡ್ಲುವಿನ ಅಂಬರ ರೆಸಾಟ್೯ನಲ್ಲಿ ಜರುಗಿದ ಕಾಯ೯ಕ್ರಮದಲ್ಲಿ ಚೆಯ್ಯಂಡಾಣೆಯ ಕೋಕೇರಿ ಗ್ರಾಮ ಮೂಲದ ಮಚ್ಚಂಡ ಶರಣ್ ಅಯ್ಯಪ್ಪ ಮತ್ತು ಮಂಗಳೂರಿನ ಯುವಗಾಯಕಿ ಡಾ.ವೈಷ್ಣವಿ ಕಿಣಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಚ್ಚಂಡ ಶರಣ್, ರಾಜ್ಯದಲ್ಲಿ ಕೊಡಗನ್ನು ಪ್ರತಿನಿಧಿಸುವ ಹಿನ್ನಲೆ ಗಾಯಕರ ಕೊರತೆಯಿದ್ದು ಹೀಗಾಗಿಯೇ ಛಲದಿಂದ ತಾನು ಹಿನ್ನಲೆ ಗಾಯನ ಕ್ಷೇತ್ರದಲ್ಲಿ ಮುಂದುವರೆಯುತ್ತಿರುವೆ. ಕಲರ್ಸ್ ಕನ್ನಡ ವಾಹಿನಿಯ ಹಾಡು ಕನಾ೯ಟಕ ತನಗೆ ರಾಜ್ಯವ್ಯಾಪಿ ಹೆಸರು ತಂದುಕೊಟ್ಟಿತು. ಕೊಡಗು ಸಾಂಸ್ಕೖತಿಕವಾಗಿಯೂ ಶ್ರೀಮಂತ ಜಿಲ್ಲೆ ಎಂಬುದನ್ನು ನಿರೂಪಿಸುವತ್ತ ತನ್ನ ಪರಿಶ್ರಮ ಸಾಗಿದೆ. ಹಲವೆಡೆ ಸಂಗೀತ ಕಾಯ೯ಕ್ರಮಗಳಲ್ಲಿಯೂ ಪಾಲ್ಗೊಳ್ಳುತ್ತಿರುವುದಾಗಿ ತಿಳಿಸಿದ ಶರಣ್ ಅಯ್ಯಪ್ಪ, ಭವಿಷ್ಯದಲ್ಲಿ ತನ್ನದೇ ಸ್ವಂತ ಆಡಿಯೋ ಸಂಸ್ಥೆ ಸ್ಥಾಪಿಸಬೇಕೆಂಬ ಹಂಬಲವಿದೆ ಎಂದೂ ಹೇಳಿದರು.

ವಿರಾಜಪೇಟೆಯಲ್ಲಿ ರೋಟರಿ ಶಾಲೆಯಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ಹಿನ್ನಲೆಯಲ್ಲಿ ರೋಟರಿಯ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಯಿತು ಎಂದು ಸ್ಮರಿಸಿದರು. ಪೊಲೀಸ್ ಇಲಾಖೆಯಲ್ಲಿ ಕಾಯ೯ನಿವ೯ಹಿಸುತ್ತಿರುವ ತಂದೆ ಮಚ್ಚಂಡ ಮುತ್ತಣ್ಣ ತಾಯಿ ಇಂದಿರಾ ಅವರ ಪ್ರೋತ್ಸಾಹ ತನ್ನ ವೖತ್ತಿ ಜೀವನದ ಯಶಸ್ಸಿನ ಹಿಂದಿದೆ ಎಂದೂ ಅವರು ಹೆಮ್ಮೆಯಿಂದ ಹೇಳಿದರು.

ಹಾಡು ಕನಾ೯ಟಕದಲ್ಲಿ ಹೆಸರಾಗಿದ್ದ ಮಂಗಳೂರಿನ ಯುವ ಗಾಯಕಿ ಡಾ.ವೈಷ್ಣವಿ ಕಿಣಿ, ಕೊಡಗಿನಲ್ಲಿ ಹಾಡಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಪಿ.ಎಂ.ಸಂದೀಪ್, ಕಾಯ೯ದಶಿ೯ ಸತೀಶ್ ಸೋಮಣ್ಣ, ನಿಯೋಜಿತ ಅಧ್ಯಕ್ಷೆ ಅನಿತಾ ಪೂವಯ್ಯ, ಜೋನಲ್ ಲೆಫ್ಟಿನೆಂಟ್ ಜಿ.ಆರ್.ರವಿಶಂಕರ್ ಹಾಜರಿದ್ದರು.

ಇದೇ ಸಂದಭ೯ ಶರಣ್ ಅಯ್ಯಪ್ಪ ಮತ್ತು ಡಾ.ವೈಷ್ಣವಿ ಕಿಣಿ ಅವರ ಸಂಗೀತ ಕಾಯ೯ಕ್ರಮ ಮನಸೂರೆಗೊಂಡಿತು.

error: Content is protected !!