ಮೂರ್ನಾಡು ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘದ ಯೋಜನೆಗಳ ಲಾಭ ಪಡೆಯಲು ಮನವಿ

March 3, 2021

ಮಡಿಕೇರಿ ಮಾ.3 : ಮೂರ್ನಾಡಿನ ಶ್ರೀಅನ್ನಪೂರ್ಣೇಶ್ವರಿ ಪತ್ತಿನ ಸಹಕಾರ ಸಂಘವು ಆಕರ್ಷಕ ಬಡ್ಡಿ ದರದ ಉಳಿತಾಯ ಹಾಗೂ ಉದ್ಯೋಗ ಭರವಸೆಯ ಸಾಲ ಸೌಲಭ್ಯದ ಯೋಜನೆಯನ್ನು ಜಾರಿಗೆ ತಂದಿದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಡಾ.ಮಹಾಭಲೇಶ್ವರ ಭಟ್ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಪ್ರಾಕೃತಿಕ ವಿಕೋಪ ಮತ್ತು ಕೋವಿಡ್ ಸಂದರ್ಭದಲ್ಲೂ ಧೃತಿಗೆಡದೆ ಆಶಾ ಭಾವನೆಯೊಂದಿಗೆ ಎದ್ದು ನಿಂತ ಮೂರ್ನಾಡಿನ ಸಹಕಾರ ಸಂಘ ಈಗಾಗಲೇ ಲಾಭದ ಹಾದಿಯಲ್ಲಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಮೂರ್ನಾಡು ವಿಭಾಗದಲ್ಲಿ ಈಗಾಗಲೇ ಪಿಗ್ಮಿ ಸಂಗ್ರಹ ಮತ್ತು ಪಿಗ್ಮಿ ಸಾಲ ವಿತರಣೆಯನ್ನು ಆರಂಭಿಸಲಾಗಿದೆ. ಸಂಘದ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಉದ್ದೇಶದಿಂದ ಮಡಿಕೇರಿ ಮತ್ತು ವಿರಾಜಪೇಟೆ ತಾಲ್ಲೂಕುಗಳಲ್ಲೂ ಪಿಗ್ಮಿ ಸಂಗ್ರಹ ಮತ್ತು ವ್ಯಾಪಾರಿ ಸಾಲಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರ ಆರ್ಥಿಕ ದೃಢತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ನಗರದಲ್ಲಿ ಪಿಗ್ಮಿ ಸಂಗ್ರಹಗಾರರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಎರಡು ನಗರಗಳಲ್ಲಿ ನೂತನ ಶಾಖೆಗಳನ್ನು ಹೊಂದುವ ಯೋಜನೆಯನ್ನು ರೂಪಿಸಲಾಗುತ್ತಿದೆ.
ಗ್ರಾಹಕರು ಸಂಘದೊಂದಿಗೆ ಸಹಕರಿಸುವುದರೊಂದಿಗೆ ವಿವಿಧ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಡಾ.ಮಹಾಭಲೇಶ್ವರ ಭಟ್ ಮನವಿ ಮಾಡಿದ್ದಾರೆ.

error: Content is protected !!