ಏ.20ರಿಂದ ಮಡಿಕೇರಿಯಲ್ಲಿ ಗೌಡ ಕುಟುಂಬಗಳ ನಡುವೆ ಕ್ರಿಕೆಟ್ ಹಬ್ಬ

March 3, 2021

ಮಡಿಕೇರಿ ಮಾ.3 : ಕೊಡಗು ಗೌಡ ಯುವ ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ ಏಪ್ರಿಲ್ 20ರಿಮದ ಮೇ 1ರವರೆಗೆ ಗೌಡ ಕುಟುಂಬಗಳ ನಡುವಣ ಕ್ರಿಕೆಟ್ ಪಂದ್ಯಾವಳಿಯನ್ನು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವುದು ಎಂದು ವೇದಿಕೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವೇದಿಕೆಯ ನಿರ್ದೇಶಕ ಪುದಿಯನೆರವನ ರಿಷಿತ್ ಮಾದಯ್ಯ ಅವರು, ಪ್ರಾಕೃತಿಕ ವಿಕೋಪಗಳ ಹಿನ್ನೆಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಕ್ರೀಡಾಕೂಟವನ್ನು ಆಯೋಜಿಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಮೊದಲು ನೋಂದಾಯಿಸಿಕೊಳ್ಳುವ 128 ತಂಡಗಳಿಗೆ ಸೀಮಿತವಾಗಿ ಪಂದ್ಯಾವಳಿಯನ್ನು ಆಯೋಜಿಸುತ್ತಿರುವುದಾಗಿ ವಿವರಿಸಿದರು.
ಈ ಹಿಂದಿನ ಕ್ರಿಕೆಟ್ ಹಬ್ಬಗಳಲ್ಲಿ 200ರಿಂದ 300ಕ್ಕೂ ಅಧಿಕ ಕುಟುಂಬ ತಂಡಗಳು ಭಾಗವಹಿಸುತ್ತಿದ್ದವು. ಆದರೆ ಈ ಬಾರಿ ಸರÀಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಭಾಗವಹಿಸಲಿಚ್ಛಿಸುವ ಕುಟುಂಬ ತಂಡಗಳು ಏಪ್ರಿಲ್ 5ರ ಒಳಗಾಗಿ ಕೊಡಗು ಗೌಡ ಸಮಾಜ ಕಟ್ಟಡದಲ್ಲಿಯವ ಯುವ ವೇದಿಕೆಯ ಕಚೇರಿಯಲ್ಲಿ ಅಚ್ಲಪಾಡಿ ಪ್ರಸಾದ್ (9481770780) ಇವರಲ್ಲಿ ಪ್ರವೇಶ ಶುಲ್ಕ 3ಸಾವಿರ ರೂ. ಪಾವತಿಸಿ ನೋಂದಾಯಿಸಿಕೊಳ್ಳಬಹುದು ಎಂದರು.
ವಿಜೇತ ತಂಡಕ್ಕೆ ಆಕರ್ಷಕ ಟ್ರೋಫಿಯೊಂದಿಗೆ ನಗದು ಬಹುಮಾನ ಸೇರಿದಂತೆ ಇತರ ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವುದೆಂದ ಅವರು, ಹತ್ತು ಕುಟುಂಬ ಹದಿನೆಂಟು ಗೋತ್ರದ ಹಿರಿಮೆ, ಗರಿಮೆಯಿರುವ ಗೌಡ ಜನಾಂಗದ ಒಗ್ಗಟ್ಟು, ಸಂಸ್ಕøತಿ, ಆಚಾತ-ವಿಚಾರ, ಪದ್ಧತಿಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಕೊಡಗು ಗೌಡ ಯುವ ವೇದಿಕೆ ವತಿಯಿಂದ ಕಳೆದ ಎರಡು ದಶಕಗಳಿಂದ ಜನಾಂಗದ ಕುಟುಂಬಗಳ ನಡುವೆ ಕ್ರೀಡಾ ಹಬ್ಬವನ್ನು ಜನಾಂಗ ಬಾಂಧವರು ಮತ್ತು ದಾನಿಗಳ ಸಹಕಾರದೊಂದಿಗೆ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕ್ರೀಡಾಹಬ್ಬವನ್ನು ಕ್ರಿಕೆಟ್‍ಗೆ ಸೀಮಿತಗೊಳಿಸಲಾಗುತ್ತಿದ್ದು, ಇತರ ಯಾವುದೇ ಕ್ರೀಡೆಗಳಿಗೆ ಅವಕಾಶವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಕೃತಿ ವಿಕೋಪ ಹಾಗೂ ಕೊರೋನಾದಿಂದಾಗಿ ಜನ ಜೀವನ ಜಡಗಟ್ಟಿ ಹೋಗಿದ್ದು, ಒಂದು ರೀತಿಯಲ್ಲಿ ಎಲ್ಲರೂ ಖಿನ್ನತೆಗೆ ಒಳಗಾಗಿದ್ದಾರೆ. ಅದರಲ್ಲೂ ಗ್ರಾಮೀಣ ಭಾಗದ ಭಾಗದ ಮಂದಿ ಹೊರ ಬರಲಾರದ ಸಂಕಟದಲ್ಲಿ ಸಿಲುಕಿದಂತಿದ್ದು, ಈ ಮಂಕು ಕವಿದ ವಾತಾವರಣದಿಂದ ಜನರು ಹೊರಬಂದು ಮನಸ್ಸಿಗೊಂದಿಷ್ಟು ಮನೋಲ್ಲಾಸ ಪಡೆಯುವಂತಾಗಲೆಂಬುದು ಕ್ರೀಡಾ ಹಬ್ಬ ಆಯೋಜನೆಯ ಉದ್ದೇಶವಾಗಿದೆ ಎಂದು ಅವರು ನುಡಿದರು.
ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಯುವ ವೇದಿಕೆಯ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ, ಕಾರ್ಯದರ್ಶಿ ಕಟ್ಟೆಮನೆ ರೋಶನ್, ಉಪಾಧ್ಯಕ್ಷರಾದ ಪಾಣತ್ತಲೆ ಜಗದೀಶ್ ಮಂದಪ್ಪ, ಬಾಳಾಡಿ ಮನೋಜ್ ಹಾಗೂ ನಿರ್ದೇಶಕ ಕುಕ್ಕೇರ ಲಕ್ಷ್ಮಣ್ ಉಪಸ್ಥಿತರಿದ್ದರು.

error: Content is protected !!