ಸೋಮವಾರಪೇಟೆ ರೂ. 11 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚು ರಂಜನ್ ಚಾಲನೆ

March 3, 2021

ಮಡಿಕೇರಿ ಮಾ. 3 : ಸೋಮವಾರಪೇಟೆ ತಾಲೂಕಿನ ವಿವಿಧೆಡೆ ರೂ. 11 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಾಸಕ ರಂಜನ್ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಸೋಮವಾರಪೇಟೆ, ಶನಿವಾರಸಂತೆ, ಕೊಡ್ಲಿಪೇಟೆ, ಹೋಬಳಿಗಳಲ್ಲಿ ರಸ್ತೆ ಅಭಿವೃದ್ಧಿ ಸೇರಿದಂತೆ ಜೆ.ಜೆ.ಮಿಷನ್ ನ ಕುಡಿಯುವ ನೀರುಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕರು, ಈ ಬಾರಿ ಪ್ರತಿ ಗ್ರಾಮಗಳಿಗೂ ಕುಡಿಯುವ ನೀರು ಸರಭರಾಜಿನೊಂದಿಗೆ ರಸ್ತೆಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗಿದೆ. ಜನತೆ ಇವಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ದೊಡ್ದಮಲ್ತೆ ಗ್ರಾ.ಪಂ. ಹೊನ್ನವಳ್ಳಿ ಗ್ರಾಮಕ್ಕೆ 17 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ಗೌಡಳ್ಳಿ ಗ್ರಾ.ಪಂ.ನ ವಡ್ಡರಕೊಪ್ಪ ರಸ್ತೆ ಅಭಿವೃದ್ಧಿ 1 ಕೊಟಿ ಹಾಗೂ 1.03 ಕೋಟಿ ವೆಚ್ಚದ ನೀರಿನ ಯೋಜನೆ, ನಿಡ್ತ ಗ್ರಾಮದಲ್ಲಿ 34.68, ಬ್ಯಾಡಗೊಟ್ಟ ಗ್ರಾಮದಲ್ಲಿ 80,ಕೊಡ್ಲಿಪೇಟೆಯಲ್ಲಿ 57,ಬೆಸ್ಸುರು 98,ಹಂಡ್ಲಿ ರಸ್ತೆ95, ಆಲೂರು, ಅಂಕನಳ್ಳಿ ರಸ್ತೆ 80, ಗಣಗೂರು,ಆಲೂರುಸಿದ್ದಾಪುರ ರಸ್ತೆ 100, ಗಣಗೂರು ಕುಡಿಯುವ ನೀರು 171 ಹಾಗೂ ಗೋಣಿಮಾರೋರು, ಗಣಗೂರು, ಮಾಲಂಬಿ ರಸ್ತೆ 80 ಲಕ್ಷದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಲಾಗಿದೆ ಎಂದರು.

ಈ ಸಂದರ್ಭ ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹಾಗೂ ಸ್ಥಳೀಯ ಪಂಚಾಯ್ತಿ ಅಧ್ಯಕ್ಷರು, ಸದಸ್ಯರು , ಪಕ್ಷದ ಪ್ರಮುಖರು ಹಾಜರಿದ್ದರು.

error: Content is protected !!