ಸೋಮವಾರಪೇಟೆಯಲ್ಲಿ ಜನೌಷಧಿ ದಿವಸ್ ಆಚರಣೆ

March 3, 2021

ಮಡಿಕೇರಿ ಮಾ. 3 : ಜನೌಷಧಿ ಅಂಗಡಿಗಳನ್ನು ಜನ ಸಾಮಾನ್ಯರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಸೋಮವಾರಪೇಟೆ ಪ.ಪಂ ಅಧ್ಯಕ್ಷೆ ನಳಿನಿ ಗಣೇಶ್ ತಿಳಿಸಿದರು.
ಜನೌಷಧಿ ಕೇಂದ್ರದ ವತಿಯಿಂದ ಪಟ್ಟಣದ ಎಸ್.ಜೆ.ಎಂ.ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಜನೌಷಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಜನೌಷಧಿ ಸಿಗಬೇಕೆಂದು ಯೋಜಿಸಿ ಜನೌಷಧಿ ಅಂಗಡಿಗಳನ್ನು ಆರಂಭಿಸಿದ್ದಾರೆಂದರು.
ಪ.ಪಂ ಸದಸ್ಯ ಎಸ್.ಮಹೇಶ್ ಮಾತನಾಡಿ, ಪ್ರಧಾನ ಮಂತ್ರಿ ಗಳ ಮಹತ್ವಾಕಾಂಕ್ಷೆಯ ಜನೌಷಾಧಿ ಕೇಂದ್ರಗಳು ಜನಸಾಮಾನ್ಯರಿಗೆ ವರದಾನವಾಗಿದೆ. ತಿಂಗಳಲ್ಲಿ ಒಂದು ಕೋಟಿಗೂ ಅಧಿಕ ಕುಟುಂಬಗಳು ಇದರ ಸೌಲಭ್ಯ ಪಡೆದುಕೊಳ್ಳುತ್ತಿವೆ ಎಂದ ಅವರು ದೇಶದಲ್ಲಿ ವಾರ್ಷಿಕ ವಾಗಿ ಜನಸಾಮಾನ್ಯರಿಗೆ 2,200 ಕೋಟಿ ಯಷ್ಟು ಉಳಿತಾಯವಾಗಿದೆಯೆಂದು ತಿಳಿದುಬಂದಿದೆ.

ಈಗಾಗಲೇ ದೇಶಾದ್ಯಂತ 6 ಸಾವಿರಕ್ಕಿಂತ ಅಧಿಕ ಜನೌಷಾಧಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.
ಕೇಂದ್ರದ ಮಾಲೀಕ ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ರಾಣಿ ಅಧ್ಯಕ್ಷತೆ ವಹಿಸಿದ್ದರು. ಪ.ಪಂ ಸದಸ್ಯ ರುಗಳಾದ ಮಹೇಶ್, ಸೋಮೇಶ್, ಶರತ್ ಹಾಗೂ ಮುಂತಾದವರು ಉಪಸ್ಥಿತರಿದ್ದರು.

error: Content is protected !!