ಇಬ್ನಿವಳವಾಡಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ : ಎಸ್.ಎಂ.ಎಸ್ ತಂಡ ಚಾಂಪಿಯನ್

March 3, 2021

ಮಡಿಕೇರಿ ಮಾ.3 : ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕತ್ತಲೆಕಾಡುವಿನಲ್ಲಿ ಇಬ್ನಿವಳವಾಡಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಿತು.
ಪೈನಲ್ ಪಂದ್ಯದಲ್ಲಿ ಟೀಮ್ ಜಾಗ್ವರ್ ತಂಡ ಟಾಸ್ ಗೆದ್ದು ಕ್ಷೇತ್ರ ರಕ್ಷಣೆ ಆಯ್ಕೆ ಮಾಡಿಕೊಂಡಿತು. ಎಸ್.ಎಂ.ಎಸ್ ತಂಡ ನಿಗಧಿತ 4 ಓವರ್ ಗೆ 2 ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿತು. ಟೀಮ್ ಜಾಗ್ವರ್ ತಂಡ 4 ಓವರ್ ಗೆ 46 ರನ್ ಗಳಿಸುವಲ್ಲಿ ಶಕ್ತವಾಗಿ 7ರನ್‍ಗಳ ಸೋಲನ್ನು ಅನುಭವಿಸಿತು.
ಫೈನಲ್ ಪಂದ್ಯಾಟದಲ್ಲಿ ಮಣಿಕ್ ಉತ್ತಮ ಬೌಲಿಂಗ್ ಮಾಡುವ ಮೂಲಕ 1 ಓವರ್ ಗೆ 9ರನ್ ನೀಡಿ 4 ವಿಕೇಟ್ ಪಡೆಯುವ ಮೂಲಕ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು.
ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟ್ಸ್‍ಮನ್ ಎಸ್.ಎಂ.ಎಸ್ ತಂಡದ ಕಿರಣ್ ಪಡೆದರು. ಬೆಸ್ಟ್ ಬೌಲರ್ ಆಗಿ ಎಸ್.ಎಂ.ಎಸ್ ತಂಡದ ಮಣಿಕ್ ಬಹುಮಾನ ಪಡೆದುಕೊಂಡರು. ಸರಣಿ ಪುರುಷೋತ್ತಮ ಪ್ರಶಸ್ತಿಯನ್ನು ಎಸ್.ಎಂ.ಎಸ್ ತಂಡದ ಶಿವು ಪಡೆದುಕೊಂಡರು.
ಕತ್ತಲೆಕಾಡುವಿನ ತಲಾಟ್ ಕ್ರಿಕೆಟ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ಲೀಗ್ ಪಂದ್ಯಾವಳಿಯಲ್ಲಿ ಒಟ್ಟು 9 ತಂಡಗಳು ಭಾಗವಹಿಸಿದ್ದವು. ಟೀಮ್ ಮ್ಯಾಕ್ಸಿಮಮ್ ನೀರುಕೊಲ್ಲಿ ತಂಡ ತೃತೀಯ ಸ್ಥಾನ ಪಡೆಯಿತು.
ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೈಸೂರಿನ ಡಿವೈಎಸ್‍ಪಿ ಸುಂದರರಾಜ್, ರೆಸಾರ್ಟ್ ಮಾಲೀಕ ಜನಾರ್ಧನ, ಕಡಗದಾಳು ಗ್ರಾ.ಪಂ ಅಧ್ಯಕ್ಷ ಜಯಣ್ಣ, ಗ್ರಾಮದ ಮಾಜಿ ಸೈನಿಕ ಪೊನ್ನಚೆಟ್ಟಿರ ಮಾಚಯ್ಯ ಮತ್ತು ಪ್ರಭಾ ನೀರುಕೊಲ್ಲಿ, ಮಡಿಕೇರಿಯ ಹೊಟೇಲ್ ಉದ್ಯಮಿ ನಿಶು, ಐ.ಪಿ.ಎಲ್ ಸಮಿತಿಯ ಅಧ್ಯಕ್ಷ ನವೀನ್, ಉಪಾಧ್ಯಕ್ಷ ಮಾಲೇರ ವಿಜು ಮತ್ತಿತರರು ಹಾಜರಿದ್ದರು.

CHAMPION
RUNNAR
3RD PRIZE

error: Content is protected !!