ಮೆಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ಮಹಾ ಶಿವರಾತ್ರಿ ಉತ್ಸವಕ್ಕೆ ಚಾಲನೆ

ಮಡಿಕೇರಿ, ಮಾ. 3: ಮೆಕೇರಿಯ ಶ್ರೀ ಗೌರಿ ಶಂಕರ ದೇವಾಲಯದಲ್ಲಿ ದಶದಿನಗಳ ಮಹಾ ಶಿವರಾತ್ರಿ ಉತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಿತು.
ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಧ್ವಜಾರೋಹಣ ನೆರವೇರಿಸಲಾಯಿತು. ದೇವಾಲಯ ಸಮಿತಿ ಪದಾಧಿಕಾರಿಗಳು, ಉತ್ಸವ ಸಮಿತಿ ಪ್ರಮುಖರು ಈ ಸಂದರ್ಭ ಹಾಜರಿದ್ದರು.
ದಶ ದಿನಗಳ ಶಿವರಾತ್ರಿ ಉತ್ಸವದಲ್ಲಿ ಪ್ರತಿ ದಿನ ಸಂಜೆ 6.30 ರಿಂದ ವಿವಿಧ ಭಜನಾ ತಂಡಗಳಿಂದ ಸಂಗೀತಾರ್ಚನೆ ಕಾರ್ಯಕ್ರಮ ನಡೆಯಲಿದೆ.
ಮಾ. 11 ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ಮೃತ್ಯುಂಜಯ ಹೋಮ ಸಂಕಲ್ಪ ಪೂಜೆ ಆರಂಭವಾಗಲಿದ್ದು, ಬೆಳಗ್ಗೆ 9 ಗಂಟೆಗೆ ಲೋಕಕಲ್ಯಾಣಕ್ಕಾಗಿ ಈಶ್ವರ ವಿಶೇಷ ಪೂಜೆ, ಮತ್ತು ಗ್ರಾಮದ ಮನೆಗಳಿಂದ ಹೊರಕಾಣಿಗೆ ಸೇವೆಯೂ ಭವ್ಯ ಮೆರವಣಿಗೆಯ ಮೂಲಕ ಸಮರ್ಪಣೆಯಾಗಲಿದೆ. ಸಂಜೆ 6 ಗಂಟೆಯಿಂದ ಶಿವರಾತ್ರಿ ಜಾಗರಣೆ ಅಂಗವಾಗಿ ಭಕ್ತಿ ಪೂರಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ರಾತ್ರಿ 8 ಗಂಟೆಗೆ ರುದ್ರಾಭಿಷೇಕ, ರಂಗಪೂಜೆ ನಡೆಯಲಿದೆ.
ಮಾ. 12 ರಂದು ನೈರ್ಮಲ್ಯ ಪೂಜೆ, ನವಕಲಶ ಪೂಜೆ ಮತ್ತು ರುದ್ರಾಭಿಷೇಕ ನಡೆಯಲಿದೆ. ಬೆಳ್ಗಗೆ 11 ಗಂಟೆಯಿಂದ ಧಾರ್ಮಿಕ ಉಪನ್ಯಾಸ, ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಲಿದೆ.
ಕೋವಿಡ್ ಹಿನ್ನಲೆ ಎಲ್ಲಾ ಮಂಜಾಗೃತ ಕ್ರಮಗಳನ್ನು ಕೈಗೊಂಡು ಉತ್ಸವದ ಆಚರಣೆ ನಡೆಸಲಾಗುತ್ತಿದೆ ಎಂದು ಮಹಾಶಿವರಾತ್ರಿ ಉತ್ಸವದ ಉಸ್ತುವಾರಿ ಟಿ.ಕೆ. ರವಿಂದ್ರ ತಿಳಿಸಿದ್ದಾರೆ.
