ಕೆದಕಲ್‍ನಲ್ಲಿ ಮಾ. 13 ಮತ್ತು 14 ರಂದು ಕೊರಗಜ್ಜ ನೇಮೋತ್ಸವ

March 3, 2021

ಕೆದಕಲ್‍ನಲ್ಲಿ ಮಾ. 13 ಮತ್ತು 14 ರಂದು ಕೊರಗಜ್ಜ ನೇಮೋತ್ಸವ

ಸುಂಟಿಕೊಪ್ಪ, ಮಾ. 3 : ಕೆದಕಲ್ 7ನೇ ಮೈಲಿನ ಸ್ವಾಮಿ ಕೊರಗಜ್ಜ, ಪಾಷಾಣ ಮೂರ್ತಿ ಮತ್ತು ದೈವರಾಜ ಗುಳಿಗದ ನೇಮೋತ್ಸವವು ಮಾ.13 ಮತ್ತು 14 ರಂದು ನಡೆಯಲಿದೆ.
ಮಾ.13 ರಂದು ಸಂಜೆ 7ಕ್ಕೆ ಭಂಡಾರ ಪೆಟ್ಟಿಗೆ ತೆಗೆಯುವುದು, ರಾತ್ರಿ 9 ಗಂಟೆಗೆ ಅನ್ನದಾನ, ರಾತ್ರಿ 10 ಗಂಟೆಗೆ ಪಾಷಾಣಮೂರ್ತಿ ನೇಮೋತ್ಸವ ಮತ್ತು ದೈವರಾಜಗಳಿಗೆ ನೇಮೋತ್ಸವ ನಡೆಯಲಿದೆ.
ಮಾ.14 ರಂದು ಬೆಳಗ್ಗೆ 7 ಗಂಟೆಗೆ ಸ್ವಾಮಿ ಕೊರಗಜ್ಜ ದೈವ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಲು ದೇವಾಲಯದ ಪ್ರಮುಖರು ತಿಳಿಸಿದ್ದಾರೆ.

error: Content is protected !!