ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಫೇಸ್‌ಬುಕ್ ಖಾತೆ ಹ್ಯಾಕ್

March 4, 2021

ಬೆಂಗಳೂರು: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆನ್‌ಲೈನ್‌ ಖದೀಮರ ಹಾವಳಿ ಹೆಚ್ಚಾಗಿದ್ದು, ಈಗಾಗಲೇ ಅನೇಕ ಜನರು ಈ ಸಮಸ್ಯೆ ಸಿಲುಕಿದ್ದಾರೆ. ಹಿರಿಯ ಐಪಿಎಸ್‌ ಅಧಿಕಾರಿ ಭಾಸ್ಕರ್‌ ರಾವ್‌ ಅವರನ್ನು ಕೂಡ ಈ ಪಿಡುಗು ಬಿಟ್ಟಿಲ್ಲ.

ಇದೀಗ ಕಿಡಿಗೇಡಿಗಳು ಹಿರಿಯ ಐಪಿಎಸ್‌ ಅಧಿಕಾರಿ, ಬೆಂಗಳೂರಿನ ಮಾಜಿ ಪೊಲೀಸ್ ಕಮಿಷನರ್‌ ಭಾಸ್ಕರ್‌ ರಾವ್‌ ಅವರ ಫೇಸ್‌ಬುಕ್‌ ಅಕೌಂಟ್‌ನನ್ನೂ ಹ್ಯಾಕ್‌ ಮಾಡಿದ್ದಾರೆ ಎನ್ನಲಾಗಿದ್ದು, ಆನ್‌ಲೈನ್‌ ಖದೀಮರು ಹಲವರಿಗೆ ಫೇಸ್‌ಬುಕ್‌ ಮೂಲಕ ಹಣಕ್ಕಾಗಿ ಮೆಸೇಜ್‌ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಸ್ವತಃ ಭಾಸ್ಕರ್‌ ರಾವ್‌ ಅವರೇ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ತಿಳಿಸಿದ್ದಾರೆ.

ಅಕೌಂಟ್‌ ಹ್ಯಾಕ್‌ ಆಗಿರುವ ಬಗ್ಗೆ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಭಾಸ್ಕರ್‌ ರಾವ್‌, ‘ನನ್ನ ಅಕೌಂಟ್‌ ಹ್ಯಾಕ್‌ ಆಗಿದೆ. ಹಣ ಕಳುಹಿಸಿ ಎಂದು ಯಾವುದಾದರೂ ಸಂದೇಶಗಳು ಫೇಸ್‌ಬುಕ್‌ನಲ್ಲಿ ಬಂದರೆ ದಯವಿಟ್ಟು ಹಣ ಕಳುಹಿಸಬೇಡಿ. ನನ್ನ ಅಕೌಂಟ್‌ ಹ್ಯಾಕ್‌ ಆಗಿದ್ದರೂ, ನಾನು ಹಣ ಕೇಳುವುದಿಲ್ಲ ಎಂದು ತಮ್ಮ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

error: Content is protected !!