ಸಣ್ಣ ಕೈಗಾರಿಕೆಗಳಿಗೆ ಸಮ್ಮತಿ ಪತ್ರ ಕಡ್ಡಾಯ: ಸಿ.ಪಿ.ಯೋಗೇಶ್ವರ್ ಹೇಳಿಕೆ

March 4, 2021

ಮೈಸೂರು: ”ರಾಜ್ಯದಲ್ಲಿ 6 ಲಕ್ಷ ಸಣ್ಣ ಕೈಗಾರಿಕೆಗಳಿದ್ದರೂ ಈವರೆಗೂ ನೋಂದಣಿಯಾಗಿ ಸಮ್ಮತಿ ಪತ್ರ ಪಡೆದಿರುವುದು ಒಂದು ಲಕ್ಷ ಮಾತ್ರ,” ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಶಾಸ್ತ್ರ ಸಚಿವರಾದ ಸಿ.ಪಿ.ಯೋಗೇಶ್ವರ್‌ ಹೇಳಿದರು.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ‘ಸಮ್ಮತಿ ಮೇಳ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಹಸಿರು ನ್ಯಾಯ ಪೀಠ, ಇಲಾಖೆಯನ್ನು ಈ ಕುರಿತು ಪ್ರಶ್ನಿಸಿದೆ. ಹೀಗಾಗಿ ಕಡ್ಡಾಯವಾಗಿ ಸಣ್ಣ ಕೈಗಾರಿಕೆಗಳು ನೋಂದಣಿ ಮಾಡಿಸಿ, ಸಮ್ಮತಿ ಪತ್ರ ಪಡೆದು ವ್ಯವಸ್ಥಿತವಾಗಿ ನೆಲ, ಜಲ, ವಾಯು ಹಾಗೂ ಶಬ್ದ ಮಾಲಿನ್ಯವನ್ನೂ ನಿಯಂತ್ರಿಸಬೇಕು,” ಎಂದರು.

”ಸಣ್ಣ ಕೈಗಾರಿಕೆಗಳನ್ನು ಪರಿಸರ ವಿಜ್ಞಾನ ಇಲಾಖೆ ವ್ಯಾಪ್ತಿಯಡಿ ನೋಂದಣಿ ಮಾಡಿ ಸಮ್ಮತಿ ಪತ್ರ ನೀಡಿ ಕಾನೂನು ಕಟ್ಟಳೆಗಳ ಅರಿವು ಮೂಡಿಸಬೇಕಾಗಿದೆ. ಹಾಗಾಗಿ ಈ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಿದ್ದೇನೆ,” ಎಂದು ತಿಳಿಸಿದರು.

error: Content is protected !!