ಕೊಡಗು ಪೊಲೀಸ್ ಇಲಾಖೆಯಿಂದ “ಅಪರಾಧ ಪ್ರಕರಣಗಳಲ್ಲಿ ವೈಜ್ಞಾನಿಕ ನೆರವು” ಕಾರ್ಯಾಗಾರ

March 4, 2021

ಮಡಿಕೇರಿ ಮಾ. 4 : ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮೈಸೂರಿನ ಆರ್.ಎಫ್.ಎಸ್.ಎಲ್. ವತಿಯಿಂದ “ಮಹಿಳೆಯರ ವಿರುದ್ಧ ನಡೆಯುವ ಅಪರಾಧ ಪ್ರಕರಣ ಗಳಲ್ಲಿ ವೈಜ್ಞಾನಿಕ ನೆರವು” ಕಾರ್ಯಾಗಾರ ನಡೆಯಿತು.

ನಗರದ ಪೊಲೀಸ್ ಮೈತ್ರಿ ಸಮುದಾಯ ಭವನದಲ್ಲಿ ಡಿವೈ.ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಮಹಿಳೆಯರ ವಿರುದ್ಧದ ಅಪರಾಧ ಪ್ರಕರಣಗಳಲ್ಲಿ ವೈಜ್ಞಾನಿಕ ನೆರವನ್ನು ಪಡೆಯುವ ಕುರಿತು ಮೈಸೂರಿನ ಆರ್.ಎಫ್.ಎಸ್.ಎಲ್ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಉಪನ್ಯಾಸ ನೀಡಿದರು.

ಅಲ್ಲದೆ, ಕೃತ್ಯ ನಡೆದ ಸ್ಥಳದಲ್ಲಿ ಸಾಕ್ಷ್ಯಾಧಾರವನ್ನು ಪಡೆದು ಕೊಳ್ಳುವುದು ಹೇಗೆ ಎಂಬುದರ ಬಗ್ಗೆ ಅಣುಕು ಪ್ರದರ್ಶನ ನೀಡಿದರು. ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆ, ವೃತ್ತ ಕಛೇರಿ ಮತ್ತು ಪೊಲೀಸ್ ಉಪಾಧೀಕ್ಷಕರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!