ಮೂರ್ನಾಡಿನಲ್ಲಿ ‘ದಾಸ ಸಾಹಿತ್ಯ ಸಮಾವೇಶಕ್ಕೆ ಚಾಲನೆ

March 4, 2021

ಮಡಿಕೇರಿ ಮಾ. 4 : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಮೂರ್ನಾಡಿನಲ್ಲಿ ‘ದಾಸ ಸಾಹಿತ್ಯ ಸಮಾವೇಶಕ್ಕೆ ಚಾಲನೆ ನೀಡಲಾಯಿತು.

ಕ.ಸಾ.ಪ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರ ಅಧ್ಯಕ್ಷತೆಯಲ್ಲಿ ಮೂರ್ನಾಡಿನ ಕೊಡವ ಸಮಾಜದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಅಧ್ಯಕ್ಷ ಆನೂರು ಅನಂತಕೃಷ್ಣ ಶರ್ಮ, ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ , ಮಕ್ಕಳ ತಜ್ಞ ಡಾ. ಬಿ.ಸಿ. ನವೀನ್ ಉಮಾರ್,ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ಪಾಲ್ಗೊಂಡು ಸಾಹಿತಿ ನಾಗೇಶ್ ಕಾಲೂರು ರಚಿಸಿರುವ ‘ಆಗಸ್ಟ್ ಹದಿನಾರು’ ಮತ್ತು ‘ಹೆಗ್ಗಣಗಳಿಗೊಂದು ಪತ್ರ’ ಕೃತಿಯನ್ನು ಅನಾವರಣಗೊಳಿಸಿದರು.

error: Content is protected !!