ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಪದಾಧಿಕಾರಿಗಳ ಆಯ್ಕೆ

March 4, 2021

ಮಡಿಕೇರಿ ಮಾ.4 : ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಂಚಾಲಕರಾಗಿ ಬಿ.ಎಸ್.ರಮಾನಾಥ್ ಆಯ್ಕೆಯಾಗಿದ್ದಾರೆ.
ನಗರದಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ಗೌರವ ಸಂಚಾಲಕರನ್ನಾಗಿ ಕುಂಞಅಬ್ದುಲ್ಲ, ಸಹ ಸಂಚಾಲಕರುಗಳನ್ನಾಗಿ ಜೆ.ಎಲ್.ಜನಾರ್ಧನ ಕೊಡ್ಲಿಪೇಟೆ, ನೆರವಂಡ ಉಮೇಶ್, ಟಿ.ಈ.ಸುರೇಶ್, ಅಜ್ಜಳ್ಳಿ ರವಿ ಹಾಗೂ ಕೆ.ವಿ.ಬಶೀರ್ ಅವರನ್ನು ನೇಮಕ ಮಾಡಲಾಯಿತು.
ಮಾನವೀಯತೆಯೇ ನಮ್ಮ ಧರ್ಮ ಎಂಬ ಧ್ಯೇಯ ವಾಕ್ಯದೊಂದಿಗೆ ಯುವ ಸಮೂಹಗಳನ್ನು ಸಂಘಟಿಸಲಾಗುವುದು. ಜಿಲ್ಲಾ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಕಾರ್ಯಕ್ರಮ ರೂಪಿಸಲಾಗುವುದು. ಜಿಲ್ಲೆಯ ಬಹುಸಂಖ್ಯಾತ ವರ್ಗಗಳನ್ನು ಕೂಡ ವಿನೂತನ ಕಾರ್ಯಕ್ರಮಗಳ ಮೂಲಕ ವೇದಿಕೆಗೆ ಸೇರ್ಪಡೆಯಾಗುವಂತೆ ನೋಡಿಕೊಳ್ಳಲಾಗುವುದು ಎಂದು ಸಭೆ ನಿರ್ಣಯ ಕೈಗೊಂಡಿತು. ಜೆ.ಎಲ್.ಜನಾರ್ಧನ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

error: Content is protected !!