ಮಡಿಕೇರಿಯಲ್ಲಿ ಸಂಭ್ರಮದ ಗೌಳಿ ಸಮುದಾಯದ ಕ್ರೀಡೋತ್ಸವ : ಟೀಂ ಒಮ್ಮ ಕ್ರಿಕೆಟ್ ಚಾಂಪಿಯನ್

March 4, 2021

ಮಡಿಕೇರಿ, ಮಾ. 4: ನಗರದ ಕಂಚಿ ಕಾಮಾಕ್ಷಿ ದೇವಾಲಯ ಸಮಿತಿ ವತಿಯಿಂದ ಎರಡು ದಿನಗಳು ಗೌಳಿ ಸಮುದಾಯದವರಿಗೆ ಏರ್ಪಡಿಸಿದ್ದ ಕ್ರೀಡೋತ್ಸವ ಸಂಭ್ರಮದಿಂದ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಒಮ್ಮ ಇಲೆವೆನ್ ತಂಡ 2021ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಂಗರ ಇಲೆವೆನ್ ತಂಡ ರನರ್ಸ್ ಪ್ರಶಸ್ತಿ ಪಡೆದುಕೊಂಡಿದೆ.

ಪೈನಲ್ ಪಂದ್ಯದಲ್ಲಿ ಪಂದ್ಯ ಪುರಷೋತ್ತಮ ಹಾಗೂ ಉತ್ತಮ ಬ್ಯಾಟ್ಸ್‍ಮ್ಯಾನ್ ಪ್ರಶಸ್ತಿಯನ್ನು ಒಮ್ಮ ತಂಡದ ಜಿ.ಎಸ್. ಮಂಜುನಾಥ್ ಪಡೆದುಕೊಂಡರೆ, ಉತ್ತಮ ಬೌಲರ್ ಆಗಿ ಒಮ್ಮ ತಂಡದ ಉಮೇಶ್ ಸುಬ್ರಮಣಿ ಅವರು ಪಡೆದುಕೊಂಡರು.

ಫೆ.28ರಂದು ಗೌಳಿಬೀದಿಯ ಚೆರಿಯಮನೆ ದಿ.ಪೆÇನ್ನಪ್ಪ ಮೈದಾನದಲ್ಲಿ ನಡೆದ ವಿವಿಧ ಕ್ರಿಡಾ ಕೂಟಕ್ಕೆ ಸಮಿತಿಯ ಗೌರವಧ್ಯಕ್ಷರುಗಳು, ಸಮುದಾಯದ ಹಿರಿಯರು ಹಾಗೂ ಸಮಿತಿಯ ಪದಾಧಿಕಾರಿಗಳು ಚಾಲನೆ ನೀಡಿದರು. ವಾಲಿಬಾಲ್ ಪೈನಲ್ ಪಂದ್ಯಾವಳಿಯಲ್ಲಿ ಒಮ್ಮ ಬ್ರದರ್ಸ್ ತಂಡ ಗೆಲುವು ಸಾಧಿಸಿತು. ವಂಗರ ಬ್ರದರ್ಸ್ ತಂಡ ದ್ವಿತೀಯ ಸ್ಥಾನ ಪಡೆಯಿತು.

ಥ್ರೋಬಾಲ್‍ನಲ್ಲಿ ಒಮ್ಮ ಸೆವೆನ್ ಪ್ರಥಮ, ವಂಗರ ಸೆವೆನ್ ದ್ವಿತೀಯ ಸ್ಥಾನ ಪಡೆದುಕೊಂಡಿತು. ಅತ್ಯಂತ ರೋಮಂಚನಕಾರಿಯಾಗಿ ನಡೆದ ಪುರುಷರ ಹಗ್ಗಜಗ್ಗಾಟ ಪಂದ್ಯದಲ್ಲಿ ವಂಗರ ಪ್ರಥಮ, ಒಮ್ಮ ದ್ವಿತೀಯ, ಮಹಿಳೆಯರ ಹಗ್ಗಜಗ್ಗಾಟ ಪಂದ್ಯದಲ್ಲಿಯೂ ಕೂಡಾ ವಂಗರ ಪ್ರಥಮ, ಒಮ್ಮ ದ್ವಿತೀಯ ತಂಡವಾಗಿ ಹೊರಹೊಮ್ಮಿತು.

ಬಾಲಕಿಯರ 100 ಮೀಟರ್ ಓಟದ ಸ್ಪರ್ಧೆಯಲ್ಲಿ ಅದಿತಿ (ಪ್ರ), ಅನನ್ಯ ಜಿ.ಎಂ (ದ್ವಿ), ಬಾಲಕರ ವಿಭಾಗದಲ್ಲಿ ವಿಶ್ವಾಸ್ ವೆಂಕಟ್ ಜಿ.ಆರ್ (ಪ್ರ), ದೈವಿಕ್ ಡಿ.ವಿ (ದ್ವಿ), ಬಾಲಕರ 50 ಮೀಟರ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ ಪಿ.ಹೆಚ್ (ಪ್ರ), ಮನಿಶ್ ನಾಥ್ ಜಿ.ಎಂ (ದ್ವಿ), ಬಾಲಕಿಯರ ವಿಭಾಗದಲ್ಲಿ ಅನನ್ಯ ಪಿ.ಎ (ಪ್ರ), ಶ್ರೇಯ ಪವನ್ (ದ್ವಿ), 100 ಮೀಟರ್ ಓಟದ ಬಾಲಕರ ಓಟದ ಸ್ಪರ್ಧೆಯಲ್ಲಿ ದೀಕ್ಷಿತ್ ಜಿ.ಎ (ಪ್ರ) ವರುಣ್ ವಿ.ಕೆ (ದ್ವಿ), ಬಾಲಕಿಯರ ವಿಭಾಗದಲ್ಲಿ ಪ್ರೇಕ್ಷ ಪಿ.ಕೆ (ಪ್ರ), ಮೋಕ್ಷಾಧಾಯಿನಿ ಜಿ.ಆರ್ (ದ್ವಿ), ಮಕ್ಕಳ ಓಟದ ಸ್ಪರ್ಧೆಯಲ್ಲಿ ದೈವಂತ್ (ಪ್ರ) ಲಕ್ಷಿತಾ (ದ್ವಿ), ಮಹಿಳೆಯರ ಓಟz ಸ್ಪರ್ಧೆಯಲ್ಲಿ ರಮ್ಯ ರಾಜೀವ್ (ಪ್ರ), ಅನುರಾಧ ಕೆ (ದ್ವಿ), ಮಹಿಳೆಯರ ನಡಿಗೆ ಸ್ಪರ್ಧೆಯಲ್ಲಿ ದೀಪಾ (ಪ್ರ), ವಿಜಿ, ಬಾಲಕಿಯರ ಓಟದ ಸ್ಪರ್ಧೆಯಲ್ಲಿ ಮೋನಿಷಾ ಪಿ.ಎಸ್ (ಪ್ರ), ದೀಕ್ಷಾ ಜಿ.ಬಿ (ದ್ವಿ) ಮಹಿಳೆಯರಿಗೆ ನಡೆದ ಬಾಂಬ್ ಇನ್ ದಿ ಸಿಟಿ ಸ್ಪರ್ಧೆಯಲ್ಲಿ ದೀಪ್ತಿ ಜಿ.ಬಿ (ಪ್ರ), ಧನ್ಯ ಪಿ.ಎಸ್.(ದ್ವಿ), ದೀಕ್ಷಾ ಜಿ.ಬಿ (ತೃ) ವಿಜೇತರಾದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈವಾಹಿಕ ಜೀವನದಲ್ಲಿ 50 ವರ್ಷ ಪೂರೈಸಿದ ಸಮುದಾಯದ ಹಿರಿಯ ದಂಪತಿಗಳಾದ ಜಿ.ಎ ಚಾಮಿ ಮತ್ತು ಸುಭದ್ರ, ಕೆ.ಜಿ ರಾಜು ಮತ್ತು ಸುಶೀಲ, ಜಿ.ಎ. ರಾಜು ಮತ್ತು ಕಮಲ, ಬಾಲರಾಜು ಮತ್ತು ಅಮ್ಮುಲು, ಜಿ.ಎಂ. ಗೋಪಾಲ ಮತ್ತು ತಂಗಮ್ಮ ಇವರುಗಳನ್ನು ಇದೇ ಸಂದರ್ಭ ಸನ್ಮಾನಿಸಲಾಯಿತು.

ಕೊರೊನಾ ವಾರಿರ್ಸ್ ಆಗಿ ಸೇವೆ ಸಲ್ಲಿಸಿದ ಆರೋಗ್ಯ ಇಲಾಖೆಯ ಎಂ. ಕಾವೇರಿ. ಎಂ. ಲಲಿತಾ, ರಘು ಆರ್. ಸಚಿನ್ ಯಾದವ್ ಮತ್ತು ಆಶಾ ಕುಮಾರಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಡಾ. ತನುಶ್ರಿ ಜಿ.ಸಿ, ಹರ್ಷಿತ್ ಜಿ.ಸಿ, ಜಿ.ಎಂ. ಚಂದ್ರ, ಕೆ.ಕೆ. ಐಶ್ವರ್ಯ, ಶ್ರೀವಿದ್ಯಾ ಆರ್, ಪಿ.ವಿ ವಿಘ್ನೇಶ್, ಜಿ.ಸಿ. ಪ್ರಶಾಂತ್, ಪಿ.ಎಸ್. ಮೊನೀಶ, ಅರ್ಪಿತಾ ಜಿ.ಎ, ಕಾರ್ತಿಕ್ ಪಿ.ಯು, ಜಿ. ಎನ್. ಸ್ವಾತಿ, ಸಿ.ಹೆಚ್. ಆದಿತ್ಯ, ಎಂ.ಹೆಚ್. ಕಾವ್ಯಶ್ರೀ, ಅಬಿಶೀತ್ ಡಿ.ಎಸ್, ಅಮೃತ್ ಯಾದವ್, ಬಿ. ದರ್ಶಿನಿ, ಜಿ.ಎಸ್. ಐಶ್ವರ್ಯ, ಎಂ.ಎಸ್. ಚರಣ್ ಸಂಜಯ್, ಕುಲದೀಪ್ ಪ್ರಸಾದ್, ವಿ.ಕೆ. ವೈಷ್ಣವ್ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರಿದ ಹಿರಿಯ ಕಬ್ಬಡಿ ಆಟಗಾರ, ರಾಜ್ಯ ಮಟ್ಟದ ತೀರ್ಪುಗಾರ ಜಿ.ಎಸ್. ಕೃಷ್ಣ ಇವರನ್ನು ಸನ್ಮಾನಿಸಲಾಯಿತು.

ಸಮಿತಿಯ ಅಧ್ಯಕ್ಷ ಜಿ.ವಿ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಸಮಿತಿಯ ಗೌರವಧ್ಯಕ್ಷರುಗಳು, ಸಮುದಾಯದ ಹಿರಿಯರು ಹಾಗೂ ಸಮಿತಿಯ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೊನೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

error: Content is protected !!