ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ಪುನಶ್ಚೇತನ ಕಾರ್ಯಾಗಾರ

March 4, 2021

ಸುಂಟಿಕೊಪ್ಪ, ಮಾ.4: ಮಕ್ಕಳ ಪ್ರತಿಭೆಗೆ ಅನುಸಾರ ಉಪನ್ಯಾಸಕರು ತಯಾರಿಗೊಳಿಸಿದ್ದಾರೆ ಮಾತ್ರ ಯಶಸ್ಸು ಖಂಡಿತ ಸಾಧ್ಯವೆಂದು ಪದವಿ ಪೂರ್ವ ಕಾಲೇಜಿನ ಕೊಡಗು ಜಿಲ್ಲಾ ಉಪನಿರ್ದೇಶಕ ವಿಷ್ಣುಮೂರ್ತಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಪ್ರಾಚಾರ್ಯರ ಹಾಗೂ ಉಪನ್ಯಾಸಕರ ಸಂಯುಕ್ತ ಆಶ್ರಯದಲ್ಲಿ ಗಣಿತಶಾಸ್ತ್ರ ಹಾಗೂ ಜೀವಶಾಸ್ತ್ರ ಪುನಶ್ಚೇತನ ಕಾರ್ಯಗಾರವನ್ನು ಕೊಡಗು ಪದವಿ ಪೂರ್ವ ಶಿಕ್ಷಣ ಉಪನಿರ್ದೇಶಕರಾದ ವಿಷ್ಣುಮೂರ್ತಿ ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ 34 ವಿಜ್ಞಾನ ಪದವಿ ಕಾಲೇಜುಗಳು ಕಾರ್ಯಚರಿಸುತ್ತಿದೆ. ಕಾಲೇಜಿನ ಉನ್ನತ್ತೀಕರಣಗೊಳ್ಳಬೇಕಾದರೆ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಮಕ್ಕಳ ಮೇಲೆ ಮಹತ್ತರ ಜವಬ್ದಾರಿ ಇದೆ. ಮಕ್ಕಳು ಯಶಸ್ಸುಗೊಳ್ಳಬೇಕೆಂದರೆ ಉಪನ್ಯಾಸಕರು ಮಕ್ಕಳ ಜೋತೆಗೆ ಇದ್ದರೆ ಮಾತ್ರ ಯಶಸ್ಸು ಕಾಣಲು ಕೊಡಗು ಜಿಲ್ಲೆಯು ಪ್ರತಿಬಾರಿಯು ಮೂರನೇ ಸ್ಥಾನವನ್ನು ಅಲಂಕರಿಸುತ್ತಿದ್ದು ಮೊದಲನೇ ಸ್ಥಾನವನ್ನು ಪಡೆಯುವಂತ ಪ್ರಾಚಾರ್ಯರು ಮತ್ತು ಉಪನ್ಯಾಸಕರುಗಳು ತಯಾರಿಗೊಳಿಸಬೇಕಿದೆ. ವಿದ್ಯಾರ್ಥಿಗಳಿಗೆ ಸೃಜನ್ಮತಕ ಆರಿವು ಮೂಡಿಸುವ ಮೂಲಕ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಮನಗಂಡು ತಯಾರಿಗೊಳಿಸಿದ್ದಲ್ಲಿ ಮಾತ್ರ ಸಂಪೂರ್ಣ ಯಶಸ್ಸು ದೊಕಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸುಂಟಿಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪಿ.ಎಸ್.ಜಾನ್ ಮಾತನಾಡಿ ತಾಯಿ ಭ್ರೂಣದಲ್ಲಿದ್ದ ಶಿಶು ಜನನವಾದ ನಂತರ ಪುನಶ್ಚೇತನಗೊಳ್ಳಲು ಸೂರ್ಯನ ಕಿರಣದ ಶಾಖವನ್ನು ನೀಡುವ ಮೂಲಕ ಪುನಶ್ಚೇತನಗೊಳ್ಳುತ್ತದೊ ಅದೇ ರೀತಿಯಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ಮೂಲಕ ಪುನಶ್ಚೇತನಗೊಳಿಸಬೇಕೆಂದರು.
ವೇದಿಕೆಯಲ್ಲಿ ಗಣಿತ ಶಾಸ್ತ್ರ ಜಿಲ್ಲಾ ಸಂಯೋಜಕರಾದ ಮೋಹನ್ ಕುಮಾರ್, ಜೀವಶಾಸ್ತ್ರ ಜಿಲ್ಲಾ ಸಂಯೋಜಕರಾದ ಮಮತ, ಕಾಲೇಜು ಅಭಿವೃದ್ಧಿ ಸಮಿತಿ ಖಜಾಂಜಿ ಆರ್.ರಮೇಶ್ ಪಿಳ್ಳೆ,ಸಮಿತಿ ಸದಸ್ಯರಾದ ಅರುಣಾ ಮತ್ತಿತರರು ಇದ್ದರು.
ಕಾರ್ಯಗಾರಕ್ಕೆ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಉಪನ್ಯಾಕರು ಪಾಲ್ಗೊಂಡಿದ್ದರು.
ಉಪನ್ಯಾಸಕರಾದ ಮಹೇಶ್ ಸ್ವಾಗತಿಸಿ, ಉಪನ್ಯಾಸಕಿ ಕವಿತಭಕ್ತ್ ನಿರೂಪಿಸಿ,ಪದ್ಮಾವತಿ ವಂದಿಸಿದರು.

error: Content is protected !!