ಸುಂಟಿಕೊಪ್ಪದ ವಿವಿಧೆಡೆ ಮನೆ ಮನೆ ನಲ್ಲಿ ನೀರು ಸಂಪರ್ಕಕ್ಕೆ ಚಾಲನೆ

March 4, 2021

ಸುಂಟಿಕೊಪ್ಪ, ಮಾ.4: ಜಲಜೀವನ ಯೋಜನೆಯಡಿಯಲ್ಲಿ ಮನೆ-ಮನೆ ನಲ್ಲಿ ನೀರು ಸಂಪರ್ಕಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ, ಶಾಸಕ ಅಪ್ಪಚ್ಚು ರಂಜನ್ ಚಾಲನೆ ನೀಡಿದರು.

ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 534 ಮನೆಗಳಿಗೆ ಒಟ್ಟು ರೂ.123.4 ಲಕ್ಷ ವೆಚ್ಚದ ಮನೆಮನೆ ನಲ್ಲಿ ನೀರು ಸಂಪರ್ಕಕ್ಕೆ ಚಾಲನೆ ನೀಡಲಾಯಿತು.
ನಂತರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಜನರ ಬಗ್ಗೆ ಕಾಳಜಿ ವಹಿಸಿರುವ ಸರ್ಕಾರ ಹಲವಾರು ಸವಲತ್ತುಗಳನ್ನು ಒದಗಿಸಿದೆ. ಕೊಡಗಿನಲ್ಲಿ ಸುಮಾರು 59ಸಾವಿರ ಮನೆಗಳಿಗೆ ಮೂರು ನಲ್ಲಿಗಳನ್ನು ಅಳವಡಿಸುವ ನಿಟ್ಟಿನಲ್ಲಿ ಭೂಮಿಪೂಜೆ ನಡೆಸಲಾಗಿದೆ ಎಂದರು.
ನರೇಂದ್ರ ಮೋದಿ ಅವರು ಬಡವರ ಸಮಸ್ಯೆಯನ್ನು ಕಂಡು ಅವರಿಗೆ ಪರಿಹಾರ ನೀಡುವ ಕೆಲಸದಲ್ಲಿ ತೊಡಗಿಕೊಂಡಿರುವುದು ಶ್ಲಾಘನೀಯ. ಹಾಗೆಯೇ ಯಾವ ರೈತರು ನಮಗೆ ಹಣವನ್ನು ಕೊಡಿ ಎಂದು ಸರ್ಕಾರವನ್ನು ಕೇಳದೆ ಇದ್ದರೂ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ರೂ.6000 ಗಳನ್ನು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ರೂ.4000 ನೀಡಲಾಗುತ್ತಿದೆ. 9ಕೋಟಿ ಮಹಿಳೆಯರಿಗೆ ಉಚಿತ ಗ್ಯಾಸ್, ಎಲ್‍ಇಡಿ ಬಲ್ಬ್‍ಗಳ, ಗ್ರಾಮಾಂತರ ರಸ್ತೆಗಳ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.ಇದರ ಜೋತೆಯಲ್ಲಿ ನಲ್ಲಿಯಲ್ಲಿ ನೀರು ಕೊಡುವ ನಿಟ್ಟಿನಲ್ಲಿ ಪ್ರತಿ ಗ್ರಾಮಗಳಿಗೆ ಈ ವ್ಯವಸ್ಥೆ ಮಾಡಲಾಗಿದ್ದು, ಕೇಂದ್ರ ಸರ್ಕಾರದಿಂದ ಶೇ.60 ಹಾಗೂ ರಾಜ್ಯ ಸರ್ಕಾರದಿಂದ ಶೇ.40ರಷ್ಟು ಅನುದಾನ ಬಿಡುಗಡೆಯಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್ ಅವರು, ಕೊಡಗು ಜಿಲ್ಲೆಗೆ ಕೇಂದ್ರ ಸರ್ಕಾರದಿಂದ ರೂ.60ಕೋಟಿ ಹಾಗೂ ರಾಜ್ಯದಿಂದ ರೂ. 50 ಕೋಟಿ ಅನುದಾನ ಬಿಡುಗಡೆಗೊಂಡಿದೆ. ಈ ಗ್ರಾಮಕ್ಕೆ 123.4 ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಇನ್ನೆರಡು ತಿಂಗಳಲ್ಲಿ ಬೆಲೆ ಇಳಿಮುಖವಾಗಲಿದೆ ಎಂದರು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯ ಕುಮುಧಾ ಧರ್ಮಪ್ಪ, ತಾ.ಪಂ.ಸದಸ್ಯೆ ಮಣಿ ಧರ್ಮ, ನಾಕೂರು ಶಿರಂಗಾಲ ಗ್ರಾ.ಪಂ.ಅಧ್ಯಕ್ಷ ರಮೇಶ್ ರೈ, ಉಪಾಧ್ಯಕ್ಷ ಸತೀಶ್ ಇದ್ದರು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ: ಕೊಡಗರಹಳ್ಳಿ ಗ್ರಾಮ ಪಂಚಾಯಿತಿಯ 1021 ಮನೆಗಳಿಗೆ ಜಲಜೀವನ್ ಕಿಷನ್ ಅನುದಾನದಲ್ಲಿ ಮನೆಮನೆ ನಲ್ಲಿ ನೀರಿನ ಸಂಪರ್ಕಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ ನೀಡಿದರು.
ನಂತರ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಈ ವ್ಯಾಪ್ತಿಯಲ್ಲಿ ರೂ.1.20 ಲಕ್ಷ ವೆಚ್ಚದಲ್ಲಿ ನಲ್ಲಿ ನೀರಿನ ಸಂಪರ್ಕಕ್ಕೆ ಚಾಲನೆ ನೀಡಿದ್ದು, ಕೊಡಗಿಗೆ ಈ ಸಂಬಂಧ ರೂ.115 ಕೋಟಿ ಅನುದಾನ ಬಿಡಗಡೆಯಾಗಿದೆ ಎಂದರು.
ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಲ್, ಗ್ರಾ.ಪಂ ಅಧ್ಯಕ್ಷ ಸುನೀತ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ಡಾ.ಶಶಿಕಾಂತ್ ರೈ, ಗ್ರಾ ಪಂ.ಸದಸ್ಯರು ಇದ್ದರು.
ಕೆದಕಲ್ ಗ್ರಾಮ ಪಂಚಾಯಿತಿ: ಕೆದಕಲ್ ಗ್ರಾಮ ವ್ಯಾಪ್ತಿಯ ಕೆದಕಲ್ ಬಸ್ ನಿಲ್ಧಾಣದ ಬಳಿಯಲ್ಲಿ ಜಲಜೀವನ್ ಮೀಷನ್ ಯೋಜನೆಗೆ ಸಂಸದರಾದ ಪ್ರತಾಪ್ ಸಿಂಹ ಭೂಮಿ ಪೂಜೆ ನೇರವೇರಿಸಿರು.
ಕೆದಕಲ್ ವ್ಯಾಪ್ತಿಯಲ್ಲಿ ಭೂಮಿ ಪೂಜೆಯನ್ನು ನೇವೇರಿಸಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಕೊಡಗಿನಲ್ಲಿ 59 ಸಾವಿರ ಮನೆಗಳಿಗೆ ಜಲಜೀವನ್ ಕಿಷನ್ ಅನುದಾನದಲ್ಲಿ ಪ್ರತಿ 186 ಮನೆಗಳಿಗೂ ಪೈಪ್‍ಲೈನ್ ಅಳವಡಿಸುವ ಕಾರ್ಯಕ್ರಮ ಇದ್ದಾಗಿದೆ. ಕುಡಿಯುವ ನೀರು, ಬಾತು ರೂಂ ಹಾಗೂ ಶೌಚಾಲಯಗಳಿಗೆ ಅಳವಡಿಸಿಲಾಗುತ್ತದೆ ಎಂದರು. ಮುಂದಿನ 4 ತಿಂಗಳೊಳಗೆ ಕಾಮಗಾರಿಯನ್ನು ಸಂಪೂರ್ಣಗೊಳಿಸಲಾಗುತ್ತದೆ. ಕೊಡಗಿನಲ್ಲಿರುವ 104 À ಗ್ರಾಮ ಪಂಚಾಯಿತಿಗಳಿಗೂ ಅಧಿವೇಶನ ಮುಗಿದ ತಕ್ಷಣವೇ ಭೇಟಿ ನೀಡಲಿದ್ದು 15ನೇ ಹಣಕಾಸು ಆಯೋಗದಿಂದ ಅನುದಾನ ಹಾಗೂ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ನೇರವೇರಿಸುವ ನಿಟ್ಟಿನಲ್ಲಿ ಭೇಟಿ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯೆ ಕೆ.ಪಿ.ಚಂದ್ರಕಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಕೆ.ವಿಸ್ಮಿತ,ಉಪಾಧ್ಯಕ್ಷ ಎಂ.ಎಂ.ಪೊನ್ನಪ್ಪ, ಸದಸ್ಯರುಗಳಾದ ಬಿದ್ದಪ್ಪ,ಶಿವಪ್ರಸಾದ್,ಹೆಚ್.ಎ.ಆನಂದ,ಅಮ್ಮಣಿ,ಪಾರ್ವತಿ,ಪುಷ್ಪ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಿ.ಬಿ.ಭಾರತೀಶ್, ಗ್ರಾ.ಪಂ.ಮಾಜಿ ಅಧ್ಯಕ್ಷ ಯು.ಎಂ.ಸೋಮಯ್ಯ,ಶಶಿಕಾಂತರೈ,ದಾಸಂಡ ರಮೇಶ್ ಪಿಡಿಓ ರಾಜಶೇಖರ್ ಹಾಗೂ ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ, ಸದಸ್ಯೆ ನಾಗರತ್ನ ಮತ್ತಿತರರು ಇದ್ದರು.

error: Content is protected !!