ಕಾವೇರಿ ತಮಿಳು ಸಂಘದಿಂದ ಅರೆಕಾಡಿನಲ್ಲಿ ಪೊಂಗಲ್ ಹಬ್ಬದ ಸಂಭ್ರಮ

March 5, 2021

ಮಡಿಕೇರಿ ಮಾ. 5 : ಕೊಡಗು ಕಾವೇರಿ ತಮಿಳು ಸಂಘ ವತಿಯಿಂದ ಅರೆಕಾಡು ಶಾಲಾ ಮೈದಾನದಲ್ಲಿ 6ನೇ ವರ್ಷದ ಪೊಂಗಲ್ ಹಬ್ಬದ ಅಂಗವಾಗಿ ನಡೆದ ಕ್ರೀಡೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.
ಕಾವೇರಿ ತಮಿಳು ಸಂಘದ ಅಧ್ಯಕ್ಷ ತಿರುಮಲ ರಾಜನ್ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.
ಕ್ರಿಕೆಟ್ ಪಂದ್ಯಾವಳಿ, ಹಗ್ಗಜಗ್ಗಾಟ, ಮಡಿಕೆ ಒಡೆಯುವ ಸ್ಪರ್ಧೆ, ರಂಗೋಲಿ,ಭಾರದ ಗುಂಡು ಎಸೆತ,ಲೆಮೆನ್&ಸ್ಪೂನ್, ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಕ್ರೀಡೆಗಳಲ್ಲಿ ಮಹಿಳೆಯರು, ಮಕ್ಕಳು, ಪುರುಷರು, ಯುವಕರು ಭಾಗವಹಿಸಿ ಸಂಭ್ರಮಿಸಿದರು.
ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯೋತ್ಸವ ನೋಡುಗರ ಗಮನ ಸೆಳೆಯಿತು.
ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ವರೆಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭ ಕಾವೇರಿ ತಮಿಳು ಸಂಘದ ಉಪಾಧ್ಯಕ್ಷರಾದ ಪಾಲಿಬೆಟ್ಟ ಮೈಕಲ್, ಕಣ್ಣನ್, ಕಾರ್ಯದರ್ಶಿ ಫ್ರಾನ್ಸಿಸ್,ಖಜಾಂಜಿ ತಂಬಿ ಪ್ರಮುಖರಾದ ನಾಗರಾಜ್ ಸೇರಿದಂತೆ ಮತ್ತಿತರರು ಇದ್ದರು.

error: Content is protected !!