ಕೃಷಿ ಇಲಾಖೆ ರಾಯಭಾರಿಯಾಗಿ ನಟ ದರ್ಶನ್

March 5, 2021

ಬೆಂಗಳೂರು ಫೆ.16 : ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರನ್ನು ಕೃಷಿ ಇಲಾಖೆ ರಾಯಭಾರಿಯನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.

ಈ ಕುರಿತು ಸರ್ಕಾರದಿಂದ ಅಧಿಕೃತ ಆದೇಶ ಹೊರ ಬಿದ್ದಿದೆ. ಈ ಹಿಂದೆಯೇ ನಟ ದರ್ಶನ್​ ಅವರನ್ನು ಭೇಟಿಯಾಗಿದ್ದ ಕೃಷಿ ಸಚಿವ ಬಿಸಿ ಪಾಟೀಲ್​, ಕೃಷಿ ಇಲಾಖೆ ರಾಯಭಾರಿಯಾಗುವಂತೆ ಮನವಿ ಸಲ್ಲಿಸಿದ್ದರು. ಸಚಿವರ ಈ ಮನವಿಯನ್ನು ಸ್ವೀಕರಿಸಿರುವ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಯಾವುದೇ ಸಂಭಾವನೆ ಪಡೆಯದೇ ಕೃಷಿ ಇಲಾಖೆ ರಾಯಭಾರಿಯಾಗಲು ಒಪ್ಪಿಗೆ ಸೂಚಿಸಿದ್ದಾರೆ. ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪ್ರಚಾರ ಪಡಿಸಲು ಮತ್ತು ಕೃಷಿಕರಲ್ಲಿ ಸ್ಪೂರ್ತಿ ತುಂಬಲು ಕನ್ನಡ ಚಲನಚಿತ್ರರಂಗದ ಖ್ಯಾತ ನಟ ದರ್ಶನ್​ ನೇಮಕವಾಗಿದ್ದಾರೆ. ಇದಕ್ಕೆ ಅವರು ಯಾವುದೇ ಸಂಭಾವನೆ ಪಡೆದಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!