ಏ.4 ರಿಂದ ಕೊಡಗು ಜಿಲ್ಲಾ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಆರಂಭ

March 5, 2021

ಮಡಿಕೇರಿ ಮಾ.5 : ಕೊಡಗು ಮುಸ್ಲಿಂ ಸ್ಪೋಟ್ರ್ಸ್ ಅಸೋಸಿಯೇಶನ್ ಹಾಗೂ ಬೇತ್ರಿಯ ಎಸ್.ಇ.ಎಸ್. ಆಟ್ರ್ಸ್ ಎಂಡ್ ಸ್ಪೋಟ್ರ್ಸ್ ಕ್ಲಬ್‍ನ ಸಂಯುಕ್ತಾಶ್ರಯದಲ್ಲಿ ಏ.4 ರಿಂದ 11 ರವರೆಗೆ 17ನೇ ವರ್ಷದ “ಕೊಡಗು ಜಿಲ್ಲಾ ಮುಸ್ಲಿಂ ಕಪ್” ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಅಸೋಸಿಯೇಶನ್ ಸಂಸ್ಥಾಪಕ ಕೆ.ಎ.ಅಬ್ದುಲ್ ರಫೀಕ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡಾ ಕಲಿಗಳ ತವರೂರು ಎಂದೇ ಪ್ರಖ್ಯಾತವಾಗಿರುವ ಕೊಡಗು ಜಿಲ್ಲೆಯಲ್ಲಿ ಏ.4 ರಿಂದ ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ವಿಜೇತ ತಂಡಕ್ಕೆ ಬಹುಮಾನವಾಗಿ ರೂ.50 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.25 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಮತ್ತು ಹಲವಾರು ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಗುವುದು. ಈಗಾಗಲೇ 80ಕ್ಕಿಂತಲೂ ಹೆಚ್ಚು ತಂಡಗಳು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಸಮಾರೋಪ ಸಮಾರಂಭದಂದು ಸಾಮಾಜಿಕ, ರಾಜಕೀಯ, ಕ್ರೀಡಾ ಹಾಗೂ ಶೈಕ್ಷಣಿಕ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು.
ಕೊಂಡಂಗೇರಿಯ ಟಿ.ಎಸ್.ಕೆ, ಕುಶಾಲನಗರದ ಕೂರ್ಗ್ ನಿರ್ಮಲ್ ಫುಡ್, ಉದ್ಯಮಿ ಅಬ್ದುಲ್ ರಷೀದ್ ಹಾಗೂ ಅಬ್ದುಲ್ ಲತೀಫ್ ತಂಝಾನಿ ಪ್ರಮುಖ ಪ್ರಾಯೋಜಕರಾಗಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9449694257, 9740658913, 9847562800, 9843307801 ಸಂಪರ್ಕಿಸುವಂತೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಎಂ.ಎ.ಲತೀಫ್, ಕಾರ್ಯದರ್ಶಿ ಸಿ.ಎಂ.ಅಬ್ದುಲ್ ಸಮೀರ್, ಸಹ ಕಾರ್ಯದರ್ಶಿ ಎಂ.ಕೆ.ಅಬ್ದುಲ್ ರಜಾಕ್, ಸದಸ್ಯರಾದ ಕೆ.ಇ.ಅಮೀರ್ ಹಾಗೂ ಎಂ.ಪಿ.ಹಾರಿಸ್ ಉಪಸ್ಥಿತರಿದ್ದರು.

error: Content is protected !!