ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ : ಭಾರತೀಯ ವಿದ್ಯಾಭವನದ ಪಿ. ಚಿನ್ಮಯ ಹಾಗೂ ಸರಿನ ಶಿಜ ಆಯ್ಕೆ

March 5, 2021

ಮಡಿಕೇರಿ ಮಾ. 5 : ಚಂದನ ವಾಹಿನಿಯಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಯಲಿರುವ ‘ಥಟ್ ಅಂತ ಹೇಳಿ?!’ ಸರ್ ಸಿ.ವಿ.ರಾಮನ್ ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಗೆ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳನ್ನು ಒಳಗೊಂಡ ತಂಡ ಆಯ್ಕೆಗೊಂಡಿದೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕೊಡಗು ಜಿಲ್ಲಾ ಪಂಚಾಯ್ತಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪೆÇ್ರೀತ್ಸಾಹಕ ಸೊಸೈಟಿ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ದೂರದರ್ಶನ ಕೇಂದ್ರ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಮಡಿಕೇರಿ ನಗರದ ರೋಟರಿ ಮಿಸ್ಟಿ ಹಿಲ್ಸ್ ಸಂಸ್ಥೆಯ ಸಹಯೋಗದಲ್ಲಿ ನಗರದ ಸರ್ಕಾರಿ ಜೂನಿಯರ್ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕೊಡಗು ಜಿಲ್ಲಾ ಮಟ್ಟದ ಸರ್ ಸಿ.ವಿ.ರಾಮನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ನಗರದ ಭಾರತೀಯ ವಿದ್ಯಾಭವನ ಕೊಡಗು ವಿದ್ಯಾಲಯದ ವಿದ್ಯಾರ್ಥಿಗಳಾದ ಪಿ.ಚಿನ್ಮಯ ಮತ್ತು ಸರಿನ ಶಿಜ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದ್ದಾರೆ.

ಈ ತಂಡಕ್ಕೆ ಶಿಕ್ಷಕಿ ಪಿ.ಎಸ್.ಪೆÇನ್ನಮ್ಮ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳಾದ ಬಿ.ಸಿ.ಅಭಿಜ್ಞಾನ್ ಮತ್ತು ಕೆ.ಪಿ.ಕಾರ್ತಿಕ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮಾರ್ಗದರ್ಶಕಿಯಾಗಿ ಶಿಕ್ಷಕಿ ವೀಣಾ ಕಾರ್ಯನಿರ್ವಹಿಸಿದ್ದಾರೆ.
ನಗರದ ಸಂತ ಜೋಸೆಫರ ಕಾನ್ವೆಂಟ್ ಸಂಯುಕ್ತ ಪ್ರೌಢಶಾಲೆಯ ಅನನ್ಯ ಎಂ.ಎಚ್. ಮತ್ತು ರೊಲೆನ್ಸಿಯಾ ಬಿಯಾಸ್ ರಾಯ್ ತಂಡವು ತೃತೀಯ ಸ್ಥಾನ ಪಡೆದುಕೊಂಡಿದ್ದು, ಮಾರ್ಗದರ್ಶಿಯಾಗಿ ಶಿಕ್ಷಕಿ ಮಂಗಳ ಗೀತಾ ಕಾರ್ಯನಿರ್ವಹಿಸಿದ್ದಾರೆ.
ಸ್ಪರ್ಧೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಗಳಿಸಿದ ತಂಡಗಳಿಗೆ ಕ್ರಮವಾಗಿ ರೂ.3 ಸಾವಿರ ಹಾಗೂ ರೂ.2 ಸಾವಿರ ನಗದು ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ.ಟಿ.ಎನ್.ಗಾಯತ್ರಿ ವಿಜೇತ ತಂಡಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುವ ವಿದ್ಯಾರ್ಥಿ ಚಿನ್ಮಯ ಪಿ., ನಗರದ ಕೆನರಾ ಬ್ಯಾಂಕ್ ನ ಪ್ರಾದೇಶಿಕ ಕಛೇರಿಯ ವಿಭಾಗೀಯ ಮೆನೇಜರ್ ಜಿ.ಸಿ.ಪ್ರಕಾಶ್ ಮತ್ತು ಸ್ಮಿತಾ ದಂಪತಿಯ ಪುತ್ರ ಹಾಗೂ ವಿದ್ಯಾರ್ಥಿನಿ ಸರಿನ ಶಿಜ, ನಗರದ ವರ್ತಕ ಖಾಜಮನ್ನ ಮತ್ತು ಜೈನಬ್ ದಂಪತಿಯ ಪುತ್ರಿ.
ರಸಪ್ರಶ್ನೆ ಲಿಖಿತ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೊದಲ ಮೂರು ತಂಡಗಳಿಗ 5 ಸುತ್ತಿನಲ್ಲಿ ರಸಪ್ರಶ್ನೆ ಸ್ಪರ್ಧೆಯೊಂದಿಗೆ ವಿಜ್ಞಾನ ಪ್ರಯೋಗದ ಚಟುವಟಿಕೆಯನ್ನು ನಡೆಸಲಾಯಿತು.

error: Content is protected !!