ಚುನಾವಣಾ ಗುರುತು ಚೀಟಿ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ

March 6, 2021

ಮಡಿಕೇರಿ ಮಾ.6 : ಭಾರತ ಚುನಾವಣಾ ಆಯೋಗವು 2020 ರ ನವೆಂಬರ್, 18 ರಿಂದ 2021 ರ ಜನವರಿ, 18 ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಿಂದ ಇ-ಎಪಿಕ್(e-ಇPIಅ) ಡೌನ್ ಲೋಡ್ ಮಾಡಲು ಮಾರ್ಗದರ್ಶನ ನೀಡುವಂತೆ ಸೂಚಿಸಲಾಗಿದೆ.

ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರಿಂದ ಇ-ಎಪಿಕ್ ಡೌನ್‍ಲೋಡ್ ಮಾಡುವ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಮಾರ್ಚ್, 06 ಮತ್ತು 07 ರಂದು ಬೂತ್ ಮಟ್ಟದ ಅಧಿಕಾರಿಗಳು, ಮೇಲ್ವಚಾರಕರು ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ವಿಶೇಷ ಅಭಿಯಾನ ಹಮ್ಮಿಕೊಂಡು ಹೊಸ ಮತದಾರರಿಂದ ಇ-ಎಪಿಕ್ ಡೌನ್‍ಲೋಡ್ ಮಾಡಲು ಕ್ರಮವಹಿಸಲಾಗಿದೆ.
ಆದ್ದರಿಂದ 2020ರ ನವೆಂಬರ್, 18 ರಿಂದ 2021 ರ ಜನವರಿ, 18 ರವರೆಗೆ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಹೊಸ ಮತದಾರರು ಮಾರ್ಚ್, 06 ಮತ್ತು 07 ರಂದು ತಮ್ಮ ಮತಗಟ್ಟೆಯ ಬೂತ್ ಮಟ್ಟದ ಅಧಿಕಾರಿಯನ್ನು ಸಂಪರ್ಕಿಸಿ ತಮ್ಮ ಇ-ಎಪಿಕ್ ಡೌನ್ ಲೋಡ್ ಮಾಡಿಕೊಳ್ಳಲು ಕೋರಿದೆ ಅಥವಾ ಹೊಸ ಮತದಾರರು ತಾವೇ www.nvsp.in, Voter helpline Mobile App  ಮತ್ತು https://volerportal.eci.gov.in/ ಮುಖಾಂತರ ಇ-ಎಪಿಕ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಚಾರುಲತ ಸೋಮಲ್ ಅವರು ತಿಳಿಸಿದ್ದಾರೆ.

error: Content is protected !!