ಮಾ.8 ರಂದು ಲೇಖನ ಕೌಶಲ್ಯ ಕಾರ್ಯಕ್ರಮ

March 6, 2021

ಮಡಿಕೇರಿ ಮಾ.5 : ಕರ್ನಾಟಕ ಅರೆಭಾಷೆ ಸಂಸೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಸುಬ್ರಹ್ಮಣ್ಯ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಸಂಘ, ಐ.ಕ್ಯೂ.ಎ.ಸಿ ಘಟಕ ಮತ್ತು ಕನ್ನಡ ವಿಭಾಗ, ಕಡಬ ತಾಲ್ಲೂಕು ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ “ಲೇಖನ ಕೌಶಲ್ಯ” ಕಾಲೇಜು ಮಕ್ಕಳಿಗೆ ಬರವಣಿಗೆ ಹೇಳಿಕೊಡುವ ಕಾರ್ಯಗಾರದ ಉದ್ಘಾಟನಾ ಕಾರ್ಯಕ್ರಮವು ಮಾರ್ಚ್, 8 ರಂದು ಬೆಳಗ್ಗೆ 9.30 ಗಂಟೆಗೆ ಸುಬ್ರಹ್ಮಣ್ಯ ಕೆಎಸ್‍ಎಸ್ ಕಾಲೇಜಿನಲ್ಲಿ ನಡೆಯಲಿದೆ.
ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಕಜೆಗದ್ದೆ, ಬರಹಗಾರರಾದ ವಸುಧೇಂದ್ರ, ಸುಬ್ರಹ್ಮಣ್ಯ ಕೆ.ಎಸ.ಎಸ್.ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಕೆ.ಉದಯಕುಮಾರ್, ಇತರರು ಪಾಲ್ಗೊಳ್ಳಲಿದ್ದಾರೆ.

error: Content is protected !!