ಮಾ.12 ಮತ್ತು 13 ರಂದು ಮಡಿಕೇರಿಯಲ್ಲಿ ಕೃತಕ ಕಾಲು ಜೋಡಣೆ ಮತ್ತು ಮಧುಮೇಹ ತಪಾಸಣಾ ಶಿಬಿರ

March 6, 2021

ಮಡಿಕೇರಿ ಮಾ.6 : ಕೊಡಗು ಜಿಲ್ಲಾ ಬಿಜೆಪಿ ವೃತ್ತಿಪರ ಪ್ರಕೋಷ್ಠದಿಂದ ಮಾ.12 ಮತ್ತು 13 ರಂದು ಉಚಿತ ಕೃತಕ ಕಾಲು ಜೋಡಣೆ ಹಾಗೂ ಉಚಿತ ಮಧುಮೇಹ ತಪಾಸಣಾ ಶಿಬಿರ ನಡೆಯಲಿದೆ ಎಂದು ಪ್ರಕೋಷ್ಠದ ಜಿಲ್ಲಾ ಸಂಚಾಲಕ ಡಾ.ಮೋಹನ್ ಅಪ್ಪಾಜಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಕಾಫಿ ಕೃಪಾ ಕಟ್ಟಡದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶಿಬಿರ ನಡೆಯಲಿದ್ದು, ಮಾ.12 ರಂದು ಮಧ್ಯಾಹ್ನ 2 ಗಂಟೆಗೆ ಬಿಜೆಪಿ ನಾಯಕರು ಶಿಬಿರವನ್ನು ಉದ್ಘಾಟಿಸಲಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮತ್ತಿತರ ನಾಯಕರ ಉಪಸ್ಥಿತಿಯಲ್ಲಿ ನಡೆಯುವ ಶಿಬಿರದಲ್ಲಿ ಮೈಸೂರಿನ ಬೃಂದಾವನ್ ಆಸ್ಪತ್ರೆಯ ನಿರ್ದೇಶಕ ಹಾಗೂ ವೈದ್ಯ ಮತ್ತು ಮಧುಮೇಹ ತಜ್ಞ ಡಾ.ಮಾತ್ತಂಡ ಅಯ್ಯಪ್ಪ, ದಕ್ಷಿಣ ಕನ್ನಡದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜ್ ನ ಮೂಳೆ ತಜ್ಞ ಪ್ರೊ.ಡಾ.ರೋಷನ್ ಪಾಲ್ಗೊಳ್ಳಲಿದ್ದಾರೆ.
ಮಾ.13 ರಂದು ನಡೆಯಲಿರುವ ಶಿಬಿರದಲ್ಲಿ ಮಧುಮೇಹ ಕಾಲು ನಿರ್ವಹಣೆ ವಿಶೇಷ ಘಟಕ ಹಾಗೂ ಸಾಮಾನ್ಯ ಶಸ್ತ್ರ ಚಿಕತ್ಸಕ ಸಲಹೆಗಾರ ಡಾ.ಬಿ.ಜಿ.ಪೊನ್ನಪ್ಪ, ಮೈಸೂರು ಮಧುಮೇಹ ಸಲಹೆಗಾರ ಡಾ.ರೇಣುಕಾ ಪ್ರಸಾದ್ ಭಾಗವಹಿಸಲಿದ್ದಾರೆ ಎಂದರು.
::: ಇಂದು ಯಂತ್ರ ವಿತರಣೆ :::
ಬಿಜೆಪಿ ವೃತ್ತಿಪರ ಪ್ರಕೋಷ್ಠದ ವತಿಯಿಂದ ಮಾ.7 ರಂದು ನಗರದಲ್ಲಿ ಉಚಿತ ಶ್ರವಣ ಯಂತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ ಎಂದು ಡಾ.ಮೋಹನ್ ಅಪ್ಪಾಜಿ ಇದೇ ಸಂದರ್ಭ ತಿಳಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಘೋಷಣೆ “ಹಿಯರಿಂಗ್ ಕೇರ್ ಫಾರ್ ಆಲ್” ಎಂಬ ಘೋಷ ವಾಕ್ಯದೊಂದಿಗೆ ಅಮೃತ ಇಎನ್‍ಟಿ ಮತ್ತು ವರ್ಟಿಗೋ ಕ್ಲಿನಿಕ್ ಹಾಗೂ ಕಾವೇರಿ ಹಿಯರಿಂಗ್ ಕ್ಲಿನಿಕ್ ಸಹಯೋಗದಲ್ಲಿ 3ನೇ ವರ್ಷದ ಉಚಿತ ಶ್ರವಣ ಪರೀಕ್ಷಾ ಕಾರ್ಯಕ್ರಮ ಹಾಗೂ ಉಚಿತ ಕಿವಿ ಆರೋಗ್ಯ ತಪಾಸಣೆ ಯಶಸ್ವಿಯಾಗಿ ನಡೆದೆ. ಆಯ್ಕೆಯಾದ ಏಳು ಫಲಾನುಭವಿಗಳಿಗೆ ಬಿಜೆಪಿ ವೃತ್ತಿಪರ ಪ್ರಕೋಷ್ಠದಿಂದ ಉತ್ತಮ ಗುಣಮಟ್ಟದ ಉಚಿತ ಶ್ರವಣ ಯಂತ್ರ ವಿತರಿಸಲಾಗುವುದೆಂದು ಮಾಹಿತಿ ನೀಡಿದರು.
ಅಮೃತ ಇಎನ್‍ಟಿ ಮತ್ತು ವರ್ಟಿಗೂ ಕ್ಲಿನಿಕ್‍ನಲ್ಲಿ ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಶ್ವಿನ್, ನಗರ ಬಿಜೆಪಿ ಅಧ್ಯಕ್ಷ ಮನು ಮಂಜುನಾಥ್ ಪಾಲ್ಗೊಳ್ಳಲಿದ್ದಾರೆ.
ಹೆಚ್ಚಿನ ಮಾಹಿತಿಗೆ 8792874030 ಸಂಪರ್ಕಿಸುವಂತೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕ ಮನೋಜ್ ಮಂದಪ್ಪ ಉಪಸ್ಥಿತರಿದ್ದರು.

error: Content is protected !!