ಕನ್ನಂಡಬಾಣೆಯಲ್ಲಿ ಬಿಜೆಪಿ ಸಂಘಟನಾ ಸಭೆ

March 6, 2021

ಮಡಿಕೇರಿ ಮಾ. 6 : ನಗರದ 214ರ ಕನ್ನಂಡಬಾಣೆಯಲ್ಲಿ ಬಿಜೆಪಿ ಬೂತ್ ನ ಸಂಘಟನಾ ಸಭೆಯು ಬೂತ್ ಅಧ್ಯಕ್ಷ ದೇವರಾಜ್ ಅವರ ಉಪಸ್ಥಿತಿಯಲ್ಲಿ ನಡೆಯಿತು.

ಈ ಸಂದರ್ಭ ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಕೊಡಗು ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ವಕ್ತಾರ ಮಹೇಶ್ ಜೈನಿ, ಕಾರ್ಯದರ್ಶಿ ಎಸ್.ಸಿ. ಸತೀಶ್, ನಗರ ಪ್ರಧಾನ ಕಾರ್ಯದರ್ಶಿ ಕಾಳಚಂಡ.ಎಂ. ಅಪ್ಪಣ್ಣ , ಪ್ರಮುಖರಾದ ಉಮೇಶ್ ಸುಬ್ರಮಣಿ, ನಗರಸಭಾ ಮಾಜಿ ಸದಸ್ಯ, ರಮೇಶ್ .ಕೆ. ಎಸ್, ಕನ್ನಿಕೆ, ಹಿರಿಯರಾದ ಪೊನ್ನಪ್ಪ, ಮೋಹನ್, ಮತ್ತು ಪಕ್ಷದ ಕಾರ್ಯಕರ್ತರು ಹಾಜರಿದ್ದರು.

error: Content is protected !!