ಅಕ್ರಮ ಗೋಮಾಂಸ ಮಾರಾಟ : ವಿರಾಜಪೇಟೆಯಲ್ಲಿ ಓರ್ವನ ಬಂಧನ

March 6, 2021

ವಿರಾಜಪೇಟೆ, ಮಾ. 6: ಅಕ್ರಮವಾಗಿ ಗೋಮಾಂಸವನ್ನು ಹೊರ ಪ್ರದೇಶದಿಂದ ತಂದು ಮಾರಾಟ ಮಾಡುತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿ ಎಂ.ಎ. ಇದ್ರೀಸ್ (50 )ಅಕ್ರಮವಾಗಿ ಗೋಮಾಂಸ ಮಾರಾಟ ಮಾಡಿ ಬಂಧನವಾದ ವ್ಯಕ್ತಿ. ಸುಣ್ಣದ ಬೀದಿಯ ತನ್ನ ನಿವಾಸದಲ್ಲಿ ಗೋಮಾಂಸವನ್ನು ಮಾರಾಟ ಮಾಡುತಿದ್ದ ಎನ್ನಲಾಗಿದೆ. ಬಂಧಿತನು ಮೈಸೂರು ಜಿಲ್ಲೆಯ ಹುಣುಸೂರಿನಿಂದ ಪ್ರತಿನಿತ್ಯ ಮಾಂಸ ಖರೀದಿಸಿ ನಗರದಲ್ಲಿ ತನ್ನ ಆಪ್ತರಿಗೆ ನೀಡುತಿದ್ದ ಎನ್ನಲಾಗಿದೆ.
ನಗರದ ಅಪರಾಧ ವಿಭಾಗದ ಠಾಣಾಧಿಕಾರಿ ಬೋಜಪ್ಪ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಇದ್ರೀಸ್ ಮನೆಯ ಮೇಲೆ ಧಾಳಿ ನಡೆಸಿದ ಪೊಲೀಸರು ಮನೆಯ ಕೊಣೆಯೊಂದರಲ್ಲಿ ಚೀಲದಲ್ಲಿ ಇರಿಸಲಾಗಿದ್ದ 13. ಕೆ.ಜಿ. ಗೋಮಾಸಂವನ್ನು ಪತ್ತೆಹಚ್ಚಿದ್ದಾರೆ.

ಮಾರುಕಟ್ಟೆಯ ದರ 3,900 ರೂ ಮೌಲ್ಯದಾಗಿದೆ ಎಂದು ಅಂದಾಜಿಸಲಾಗಿದೆ. ಗೋಮಾಸಂದೊಂದಿಗೆ 990 ರೂ. ನಗದು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ನಗರ ಪೊಲೀಸು ಠಾಣೆಯಲ್ಲಿ ಆರೋಪಿಯ ಮೇಲೆ ಗೋ ಹತ್ಯೆ ಮತ್ತು ಮಾರಾಟ ನಿಷೇದ ಕಾಯ್ದೆ ಅನ್ವಯ ಪ್ರಕರಣ ದಾಖಲಾಗಿದ್ದು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, 15 ದಿನಗಳ ಕಾಲ ನ್ಯಾಯಂಗ ಬಂಧನದಲ್ಲಿಡಲು ಆದೇಶ ನೀಡಲಾಗಿದೆ.

ವಿರಾಜಪೇಟೆ ಉಪ ವಿಭಾಗ ಡಿವೈಎಸ್ಪಿ ಸಿ.ಟಿ.ಜಯಕುಮಾರ್ ಅವರ ಮಾರ್ಗದರ್ಶನದಲ್ಲಿ ವೃತ್ತನೀರಿಕ್ಷಕರಾದ ಶ್ರೀಧರ್ ಅವರ ನಿರ್ದೇಶನದ ಮೇರೆಗೆ ವಿರಾಜಪೇಟೆ ಅಪರಾಧ ವಿಭಾಗದ ಉಪ ನೀರಿಕ್ಷಕರಾದ ಹೆಚ್.ಎಸ್ ಬೋಜಪ್ಪ ಸಿಬ್ಬಂದಿಗಳಾದ ಗಿರೀಶ್, ಮುನೀರ್ ಮತ್ತು ಗೀತಾ ಹಾಗೂ ಚಾಲಕ ಪೂವಯ್ಯ ಅವರು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

error: Content is protected !!