ಮಡಿಕೇರಿ ಕೊಡವ ಸಮಾಜದಲ್ಲಿ ಆಕರ್ಷಕ ಕರಕುಶಲ ವಸ್ತುಗಳ ಮಾರಾಟ ಮೇಳ ಆರಂಭ

March 7, 2021

ಮಡಿಕೇರಿ ಮಾ.7 : ಕರಕುಶಲಕರ್ಮಿಗಳು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವಂತೆ ಮಾಡುವ ನಿಟ್ಟಿನಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ. ಇದು ಮಾರಾಟಗಾರರಿಗೆ ಮತ್ತು ಗ್ರಾಹಕರ ನಡುವೆ ಉತ್ತಮ ಸಂಪರ್ಕ ಬೆಳೆಸಲು ಸಹಕಾರಿಯಾಗಿದೆ ಎಂದು ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಡಾ.ಬೇಳೂರು ರಾಘವೇಂದ್ರ ಶೆಟ್ಟಿ ಅವರು ಹೇಳಿದರು.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ ನಿಯಮಿತ ಮತ್ತು ಅಭಿವೃದ್ಧಿ ಆಯುಕ್ತರು (ಕರಕುಶಲ) ಜವಳಿ ಮಂತ್ರಾಲಯ ಭಾರತ ಸರ್ಕಾರ ನವದೆಹಲಿ ಇವರ ಜಂಟಿ ಪ್ರಾಯೋಜಕತ್ವದಲ್ಲಿ ನಗರದ ಕೊಡವ ಸಮಾಜದಲ್ಲಿ ಆಯೋಜಿಸಿದ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಕರಕುಶಲ ಕರ್ಮಿಗಳಿಗೆ ಉತ್ತೇಜನ ನಿಡುವ ಮತ್ತು ಅವರ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಪ್ರದರ್ಶನ ಇದಾಗಿದ್ದು, ಯುವ ಜನತೆಗೆ ಕರಕುಶಲ ವಸ್ತಗಳ ಬಗ್ಗೆ ಕಾರ್ಯ ಮಾಡಬೇಕು. ಜಿಲ್ಲೆಯ ಜನತೆ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಹೊಸ ವಿನ್ಯಾಸದ ವಸ್ತುಗಳ ಪ್ರದರ್ಶನದ ಜೊತೆಗೆ ಕರಕುಶಲ ಕರ್ಮಿಗಳ ಅಭಿವೃದ್ಧಿಗೆ ನಿಗಮವು ಸದಾಕಾಲವೂ ಅವರ ಜೊತೆ ಇರುತ್ತದೆ. ಈಗಾಗಲೇ ಅವರ ಮನೆಗಳ ಹಕ್ಕು ಪತ್ರಗಳನ್ನು ಹಂಚಲಾಗಿದೆ. ಮೊಬೈಲ್ ವ್ಯಾನ್ ಆರಂಭಿಸಲಾಗುತ್ತದೆ. ಕಲ್ಲಿನ ಕೆತ್ತನೆ, ಬಿದಿರಿನ ಕೆಲಸ, ಮಡಕೆ ತಯಾರಿಕೆ ಮುಂತಾದ ಕರಕುಶಲ ಕರ್ಮಿಗಳ ಅಭಿವೃದ್ಧಿ ಆಗುವ ನಿಟ್ಟಿನಲ್ಲಿ ಹೊಸ ಮಾರಾಟ ಮಳಿಗೆಗಳನ್ನು ತೆಗೆಯಲಾಗುವುದು ಎಂದು ಅವರು ಹೇಳಿದರು.
ಕರಕುಶಲ ಅಭಿವೃದ್ಧಿ ನಿಗಮದ ವತಿಯಿಂದ ತಿರುಪತಿ, ಅಯೋಧ್ಯೆ, ಉಡುಪಿ, ಶಿರಡಿ, ನವದೆಹಲಿ ಸೇರಿದಂತೆ ದೇಶದ 12 ಸ್ಥಳಗಳಲ್ಲಿ ಕರಕುಶಲ ಮಳಿಗೆಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಈ ಕುರಿತು ಸವಿಸ್ತಾರವಾದ ಯೋಜನೆ ರೂಪಿಸಿ, ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಕುಶಲಕರ್ಮಿಗಳು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಅವಕಾಶ ಕಲ್ಪಿಸುವುದು ವಸ್ತು ಪ್ತದರ್ಶನದ ಉದ್ದೇಶವಾಗಿದೆ. 7 ದಿನಗಳ ಕಾಲ ನಡೆಯುವ ವಸ್ತುಪ್ರದರ್ಶನ ಪ್ರತಿದಿನ ಬೆಳಗ್ಗೆ 10 ರಿಂದ ರಾತ್ರಿ 8 ಗಂಟೆವರೆಗೆ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ಈ ಮೇಳದಲ್ಲಿ ಚೆನ್ನಪಟ್ಟಣದ ಗೊಂಬೆ, ಕಬ್ಬಿಣ ಮತ್ತು ಜಿಂಕ್‍ನ (ಬಿದರಿ) ವಿಶೇಷ ಕಲಾಕೃತಿಗಳು, ಮರದ ಕೆತ್ತನೆ, ಶಿಲಾ ಶಿಲ್ಪ, ಮರದ ಕುಂದಣ ಕಲೆ, ರತ್ನ ಕಂಬಳಿ, ಹತ್ತಿ ಜಮಖಾನ, ಅನುಕರಣೆ ಆಭರಣಗಳು, ಮರದ ಅರಗಿನ ಕಲಾ ವಸ್ತುಗಳು, ಗೊಂಬೆಗಳು, ಇಳಕಲ್ ಸಿರೇಗಳು, ಹೈದರಾಬಾದ್/ತೆಲಂಗಾಣದ ನಾರಾಯಣಪೇಟ ಸೀರೆಗಳು, ಪಟ್ಟ ಚಿತ್ರ, ಬೆಳ್ಳಿಯ ಸೂಕ್ಷ್ಮ ವಿನ್ಯಾಸ ವಸ್ತುಗಳು, ಬಿದಿರು-ಬೆತ್ತದ ವಸ್ತುಗಳು, ಅಲಂಕಾರಿಕ ಹೂಗಳು, , ಜಮಖಾನ, ಮತ್ತಿತರೆ ಆಕರ್ಷಣೀಯ ಕಲಾತ್ಮಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಗಮನ ಸೇಳೆದವು.
ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಾರುಕಟ್ಟೆ ಪ್ರಧಾನ ವ್ಯವಸ್ಥಾಪಕರರಾದ ನಾಗೇಂದ್ರಪ್ಪ, ಅಭಿವೃದ್ಧಿ ಅಧಿಕಾರಿ ಮಂಡನ್, ಕಾವೇರಿ ಎಂಪೆÇೀರಿಯಂ ವ್ಯವಸ್ಥಾಪಕರರಾದ ಪರಶುರಾಮ, ಡಿಎಸ್‍ಎಚ್ ಸಹಾಯಕ ನಿರ್ದೇಶಕರಾದ ಸುನೀಲ್ ಕುಮಾರ್ ಇತರರು ಹಾಜರಿದ್ದರು.

error: Content is protected !!