ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಕ್ಕಂಡ ರೋಶನ್‌ ಕುಮಾರ್ ನೇಮಕ

March 8, 2021

ಮಡಿಕೇರಿ ಮಾ. 8 : ಪೊನ್ನಂಪೇಟೆ ತಾಲೂಕಿನ ಹಾತೂರು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಕೊಕ್ಕಂಡ ರೋಶನ್‌ಕುಮಾರ್ ಅವರನ್ನು ನೇಮಿಸಲಾಗಿದೆ.
ಕಾಂಗ್ರೆಸ್ ಪಕ್ಷದ ವರಿಷ್ಠರ, ಹಿರಿಯ ನಾಯಕರ ಸಲಹೆ ಸೂಚನೆ ಮೇರೆಗೆ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೀದೇರಿರ ನವೀನ್ ಅವರು ನೇಮಕಾತಿ ಆದೇಶವನ್ನು ನೀಡಿದ್ದಾರೆ.
ನೇಮಕಾತಿ ಆದೇಶವನ್ನು ಪಡೆದುಕೊಂಡ ರೋಶನ್ ಅವರು, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ತತ್ವಗಳನ್ನು ಆಧರಿಸಿ ನಿಷ್ಠೆ ಮತ್ತು ಪ್ರಾಮಾಣಿಕ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ್ದಾರೆ.

error: Content is protected !!