ಜೀವ ರಕ್ಷಣೆಗಾಗಿ ಕೋವಿ ಬಳಸಲು ಅವಕಾಶ ನೀಡಿ : ಬ್ರಿಜೇಶ್ ಕಾಳಪ್ಪ ಒತ್ತಾಯ

March 8, 2021

ಮಡಿಕೇರಿ ಮಾ.8 : ವನ್ಯಜೀವಿ ದಾಳಿ ಸಂದರ್ಭ ನಮ್ಮ ಜೀವವನ್ನು ನಾವು ರಕ್ಷಣೆ ಮಾಡಿಕೊಳ್ಳಲು ಕೋವಿ ಬಳಸಲು ಅವಕಾಶ ನೀಡಬೇಕೆಂದು ಎಐಸಿಸಿ ವಕ್ತಾರ ಹಾಗೂ ಸುಪ್ರೀಂಕೋರ್ಟ್ ವಕೀಲ ಬ್ರಿಜೇಶ್ ಕಾಳಪ್ಪ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಪ್ರಾಣ ಭಯದ ಸಂದರ್ಭ ಸ್ವಯಂ ರಕ್ಷಣೆಗೆ ಶಸ್ತ್ರಾಸ್ತ್ರ ಬಳಸಲು ಕಾನೂನಿನಲ್ಲಿ ಅವಕಾಶವಿದೆ, ಕೊಡಗಿನ ಮನೆಗಳಲ್ಲಿ ವಿಶೇಷ ಹಕ್ಕಾಗಿ ಕೋವಿಗಳಿದ್ದರೂ ಇದನ್ನು ಬಳಸದಂತೆ ಅರಣ್ಯ ಇಲಾಖೆ ಅಡ್ಡಿ ಪಡಿಸುವುದು ಸರಿಯಾದ ಕ್ರಮವಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೂರು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿರುವ ಹುಲಿಯನ್ನು ಅರಣ್ಯ ಇಲಾಖೆ ಮೊದಲು ಸೆರೆ ಹಿಡಿಯಬೇಕು, ಸೆರೆ ಹಿಡಿಯಲು ಸಾಧ್ಯವಾಗಿಲ್ಲವೆಂದಾದಲ್ಲಿ ಆತ್ಮ ರಕ್ಷಣೆಗಾಗಿ ಕೋವಿ ಬಳಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇದೊಂದು ಗಂಭೀರ ಸಮಸ್ಯೆಯಾಗಿದ್ದು, ವನ್ಯಜೀವಿಗಳ ದಾಳಿಯಿಂದ ಬೇಸತ್ತಿರುವ ಕೊಡಗಿನ ಜನ ದಂಗೆ ಏಳುವ ಮೊದಲು ಅರಣ್ಯಾಧಿಕಾರಿಗಳು ಎಚ್ಚೆತ್ತುಕೊಳ್ಳಲಿ ಎಂದು ಬ್ರಜೇಶ್ ಕಾಳಪ್ಪ ಹೇಳಿದ್ದಾರೆ.

error: Content is protected !!