ಸೋಮವಾರಪೇಟೆ ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆಯಿಂದ ಮಹಿಳಾ ದಿನಾಚರಣೆ

March 8, 2021

ಸೋಮವಾರಪೇಟೆ ಮಾ.8 : ಒಕ್ಕಲಿಗರ ಪ್ರಗತಿಪರ ಮಹಿಳಾ ವೇದಿಕೆ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆಯಿತು.
ಕಾರ್ಯಕ್ರಮವನ್ನು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಪದವೀಧರ ಮುಖ್ಯೋಪಾಧ್ಯಾಯನಿ ಎಂ.ಜೆ.ಅಣ್ಣಮ್ಮ ಉದ್ಘಾಟಿಸಿದರು. ನಂತರ ಅವರು ಮಾತನಾಡಿ ನಾಗರೀಕ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದು. ಇಡೀ ಕುಟುಂಬವನ್ನು ಬೆಳಸುವಲ್ಲಿ ಮಹಿಳೆ ಪ್ರತಿಫಲಾಫೇಕ್ಷೆಯಿಲ್ಲದೆ ದುಡಿಯುತ್ತಾಳೆ ಎಂದು ಹೇಳಿದರು.
ಇನ್ನೊಬ್ಬ ಹೆಣ್ಣಿನ ಕಣ್ಣೀರು ಒರೆಸುವವರು ನಿಜವಾದ ಮಹಿಳೆ ಅಂತಹವರಿಗೆ ಸಮಾಜ ಗೌರವ ನೀಡುತ್ತದೆ. ಪುರುಷ ಹಾಗು ಮಹಿಳೆ ಸಮಾನರು, ಗಾಡಿಯ ಎರಡು ಚಕ್ರಗಳಿದ್ದಂತೆ, ಕ್ಷಮೆ ಹಾಗು ಹೊಂದಾಣಿಕೆಯಿಂದ ಬದುಕಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಹೈನುಕಾರಿಕೆಯಲ್ಲಿ ಯಶ ಕಂಡ ಕುಸುಬೂರು ಗ್ರಾಮದ ಚಂದ್ರಿಕಾ ಕುಮಾರ್, ಜಾನಪದ ಕಲಾವಿದೆ ಹೆಗ್ಗುಳ ಗ್ರಾಮದ ಚಂದ್ರಕಲಾ ಸುರೇಶ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ವೇದಿಕೆಯ ಅಧ್ಯಕ್ಷೆ ಲೋಕೇಶ್ವರಿ ಗೋಪಾಲ್ ವಹಿಸಿದರು. ವೇದಿಕೆಯಲ್ಲಿ ಕಾರ್ಯದರ್ಶಿ ಸಂಗೀತಾ ದಿನೇಶ್, ಕುವೆಂಪು ಪೂರ್ವ ಪ್ರಾಥಮಿಕ ಶಾಲೆಯ ಭಾತ್ಮೀದಾರರಾದ ಕವಿತಾ ವಿರೂಪಾಕ್ಷ ಇದ್ದರು. ಪುಷ್ಪ ಸುರೇಶ್, ಸವಿನಾ ಕೃಪಾಲ್ ಕಾರ್ಯಕ್ರಮ ನಿರ್ವಹಿಸಿದರು. ಆಶಾ ಯೋಗೇಂದ್ರ ತಂಡ ಪ್ರಾರ್ಥಿಸಿದರು. ಮಹಿಳಾ ವೇದಿಕೆಯ ಸದಸ್ಯರಿಂದ ಮನರಂಜನೆ ಕಾರ್ಯಕ್ರಮ ನಡೆಯಿತು. ವಿವಿಧ ವಿಭಾಗದ ಸ್ಪರ್ಧಾವಿಜೇತರಿಗೆ ಬಹುಮಾನ ವಿತರಿಸಲಾಯಿತು.

error: Content is protected !!