ಪವಾಡಗಳಿಗೆ ಹೆಸರುವಾಸಿ ಈ ದೇವರಕೊಲ್ಲಿಯ ಶ್ರೀ ಚಾಮುಂಡೇಶ್ವರಿ ದೇವಿ

March 14, 2021

ಮಡಿಕೇರಿ ಮಾ.14 : ಕೊಡಗು, ದಕ್ಷಿಣ ಕನ್ನಡ ಜಿಲ್ಲೆಗಳ ಕರಾವಳಿ ಮತ್ತು ಮಲೆನಾಡು ಪ್ರಾಂತ್ಯಗಳಲ್ಲಿ ದೇವತಾ, ದೈವಸ್ಥಾನ ಸಾನಿಧ್ಯ ಹೊಂದಿದ ಅನೇಕ ತೀರ್ಥ ಕ್ಷೇತ್ರಗಳಿವೆ. ಅಂತವುಗಳಲ್ಲಿ ಪಶ್ಚಿಮ ಘಟ್ಟ ಸಾಲುಗಳ ಬೆಟ್ಟ ತಪ್ಪಲುಗಳಲ್ಲಿ ಪ್ರಖ್ಯಾತ ಸ್ಥಳವಾದ ಕೊಡಗು ಜಿಲ್ಲೆ, ಮದೆ ಗ್ರಾಮದ ದೇವರಕೊಲ್ಲಿಯಲ್ಲಿ ಊರ ಪರವೂರ ದೇವತೆಯಾಗಿ ನೆಲೆಸಿರುವ ಶ್ರೀ ಚಾಮುಂಡೇಶ್ವರಿ ದೇವಿಯ ಸಾನಿಧ್ಯ ಕೂಡ ಒಂದು.

ಇಲ್ಲಿ ಶ್ರೀ ಶಾಸ್ತಾವು ಮತ್ತು ಶ್ರೀ ವೀರಭದ್ರ ದೇವರುಗಳ ಸಾನಿಧ್ಯವೂ ಇರುತ್ತದೆ. ದೇವಸ್ಥಾನದ ಪುರಾಣ ಹಿನ್ನಲೆಗಾಗಿ ಅಷ್ಟಮಂಗಲ ಪ್ರಶ್ನೆಯ ಚಿಂತನೆಯಲ್ಲಿ ಕಂಡು ಬಂದಂತೆ 1850 ವರ್ಷಗಳ ಪುರಾಣ ಪ್ರಸಿದ್ಧ ಕ್ಷೇತ್ರಇದಾಗಿದೆ. ಆ ಸಮಯದಲ್ಲಿ ಖುಷಿ ಮುನಿಗಳು ವನ ವಿಹಾರಕ್ಕಾಗಿ ಬರುತ್ತಿರುವ ಸಂದರ್ಭ ಸಂಧ್ಯಾ ಸಮಯವಾದ್ದರಿಂದ ಈ ಕ್ಷೇತ್ರದಲ್ಲಿ ಈಶ್ವರ ಪಾರ್ವತಿ ದೇವರ ಪ್ರಾರ್ಥನೆಯೊಂದಿಗೆ ಅಲ್ಲಿ ವಾಸ್ತವ್ಯ ಹೂಡಿ ಮರುದಿನ ಬೆಳಿಗ್ಗೆ ತಮ್ಮ ವನವಿಹಾರವನ್ನು ಮುಂದುವರಿಸುತ್ತಿರುವ ಸಂದರ್ಭದಲ್ಲಿ ಈ ಪೈಕಿ ಮುನಿ ಓರ್ವರಿಗೆ ಕಾಲಿಗೆ ವಿಷದ ಮುಳ್ಳು ಚುಚ್ಚಿ ಅವರು ಅಲ್ಲೇ ಅಸ್ವಸ್ಥರಾಗುತ್ತಾರೆ. ಇದನ್ನರಿತ ಉಳಿದ ಮುನಿವರ್ಯರು ಏಕಾಗ್ರತೆಯಿಂದ ಈಶ್ವರ ಪಾರ್ವತಿಯರನ್ನು ಪ್ರಾರ್ಥಿಸಿದಾಗ ಇವರ ಮೊರೆಯನ್ನು ಆಲಿಸಿದ ಪಾರ್ವತಿ ದೇವಿಯು ಮಾರುವೇಷದಲ್ಲಿ ಪ್ರತ್ಯಕ್ಷಳಾಗಿ ಮುಳ್ಳು ತಾಗಿದ ಕಾಲಿಗೆ ಮರದ ಎಲೆಗಳನ್ನು ಸೇರಿಸಿ ಕೊಲ್ಲಿಯ  ನೀರನ್ನು ಅದರ ಮೇಲೆ ಪ್ರೋಕ್ಷಿಸಿದಾಗ ಕ್ಷಣ ಮಾತ್ರದಲ್ಲಿ ಗಾಯ ವಾಸಿಯಾಗಿ, ಪ್ರಯಾಣ ಮುಂದುವರಿಸಿದಾಗ  ಈ ಕ್ಷೇತ್ರದಲ್ಲಿರುವ ಪ್ರತಿಯೊಂದು ಗಿಡ ಮೂಲಿಕೆ ಹಾಗೂ ಬೆಟ್ಟ ತಪ್ಪಲಿನಿಂದ ಹರಿದು ಬರುತ್ತಿರುವ ನೀರಿಗೆ ಮಹತ್ತರವಾದ ಶಕ್ತಿ ಇದೆ ಎಂಬುದಾಗಿ ಅರಿತು ಈ ಕ್ಷೇತ್ರವನ್ನು ದೇವರ ಕೊಲ್ಲಿ ಎಂಬುದಾಗಿ ಹಡ್ಸರಿಸುವುದು ಉಲ್ಲೇಖದಲ್ಲಿದೆ.

ಪರಿಸರದ ಬೆಟ್ಟ ತಪ್ಪಲಿನಲ್ಲಿರುವ ಆದಿವಾಸಿಗಳು ದೇವರ ಆರಾಧನೆಗಾಗಿ ಒಂದು ಕಲ್ಲನ್ನು ಸಂಪಿಗೆ ಮರದ ತಳದಲ್ಲಿರಿಸಿ ಆ ಕಲ್ಲಿಗೆ ಶ್ರೀ ಚಾಮುಂಡೇಶ್ವರಿ ಹೆಸರನ್ನಿರಿಸಿ ಆರಾಧನೆ ಮಾಡಿಕೊಂಡು ಬರುತ್ತಿದ್ದರು, ದೇವರಿಗೆ ಕಾಡಿನಲ್ಲಿ ದೊರೆಯುವ ಫಲವಸ್ತುಗಳಾದ ಹಣ್ಣುಗಳು, ಗೆಡ್ಡೆ-ಗೆಣಸು, ಜೇನು ಇತ್ಯಾದಿಗಳನ್ನು ನೈವೇದ್ಯವಾಗಿ ಸಮರ್ಪಿಸಿ ತಾವು ಸ್ವೀಕರಿಸುತ್ತಿದ್ದರು. ಹಲವಾರು ವರ್ಷಗಳಿಂದ ಈ ಪದ್ಧತಿ ನಡೆದುಕೊಂಡು ಬಂದು ಈ ಬೆಟ್ಟ ತಪ್ಪಲು ಪ್ರದೇಶಗಳಲ್ಲಿ ಆಗಿನ ಕಾಲದ ರಾಜ ಅರಸರು ಮತ್ತು ಸೈನ್ಯ ಪರಿವಾರದೊಂದಿಗೆ ಸಂಚರಿಸುತ್ತಿರುವಾಗ ಈ ಸಾನಿಧ್ಯದಲ್ಲಿ ಬಿಡಾರ ಹೂಡಿ ಪೂಜಾ-ಪುರಸ್ಕಾರಗಳನ್ನು ಮಾಡಿಸಿ ಮುಂದುವರಿಯುತ್ತಿದ್ದರು ಮತ್ತು ಈ ಸಾನಿಧ್ಯ ದ ಸುತ್ತಮುತ್ತಲ ವನವನ್ನು ದೇವರಕಾಡಿಗಾಗಿ ಕಾದಿರಿಸಿಬಿಟ್ಟರು ಎಂಬುದಾಗಿ ತಿಳಿದು ಬರುತ್ತದೆ.

ಸುಮಾರು 100 ವರ್ಷಗಳ ಹಿಂದೆ ಬ್ರಿಟಿಷರು ಕೊಡಗು ಜಿಲ್ಲೆಯ ವಿವಿಧ ಕಡೆಗಳಲ್ಲಿ ಇಲ್ಲಿ ಬೆಳೆಯಬಹುದಾದ ಕಾಫಿ, ಏಲಕ್ಕಿ, ಭತ್ತ, ಕಿತ್ತಳೆ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದು ಸಮುದ್ರ ಮಟ್ಟದಿಂದ 600 ರಿಂದ 1000 ಅಡಿ ಎತ್ತರ ಪ್ರದೇಶಗಳಲ್ಲಿ ರಬ್ಬರ್ ಬೆಲೆ ಬೆಳೆಯಲು ಯೋಗ್ಯ ಸ್ಥಳವಾದುದರಿಂದ ಈ ಕ್ಷೇತ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಬ್ಬರ್ ಬೆಳೆಯನ್ನು ಬೆಳೆಸಿಕೊಂಡು ಬಂದರು 1947 ಇಸವಿಯಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರೆತಾಗ ಬ್ರಿಟೀಷರು ರಬ್ಬರ್ ತೋಟವನ್ನು ಕೇರಳದ ಗ್ಲಿನ್ ಕೂರ್ಗ್ ರಬ್ಬರ್ ಕಂಪನಿಗೆ ವಹಿಸಿಕೊಟ್ಟರು ಹೋದರು. ಕರ್ನಾಟಕ ಸರಕಾರವು ಈ ಸ್ಥಳವನ್ನು ಅರಣ್ಯ ಇಲಾಖೆಗೆ ವಹಿಸಿ ರಬ್ಬರ್ ಬೆಳೆಯಿರುವ ಪ್ರದೇಶವನ್ನು 99 ವರ್ಷದ  ಅವಧಿಗೆ ಮೇಲಿನ ರಬ್ಬರ್ ಕಂಪನಿಗೆ ಭೋಗ್ಯಕ್ಕೆ ಕೊಟ್ಟು, ಪ್ರಸ್ತುತ ಈ ಕಂಪನಿಯವರು ದೇವರ ವನವು ಸೇರಿಕೊಂಡು ರಬ್ಬರ್ ಬೆಳೆಯನ್ನು ಬೆಳೆದು ಶ್ರೀ ದೇವಿ ಕ್ಷೇತ್ರ ಅವನತಿಗೆ ಬರುವಂತೆ ಮಾಡಿದರು.

ರಬ್ಬರ್ ತೋಟದ ಕೆಲಸ ಕಾರ್ಯಗಳಿಗಾಗಿ ಕೆಲಸ ತಿಳಿದಿರುವ ತಮಿಳುನಾಡು, ಕೇರಳದಿಂದ ಕಾರ್ಮಿಕರನ್ನು ತರಿಸಿ ರಬ್ಬರ್ ಬೆಳೆಯ ಕೆಲಸ ನಿರ್ವಹಿಸುತ್ತಿದ್ದು ಈ ಕೃಷಿ ಕಾರ್ಮಿಕರು ರಸ್ತೆಯ ಕೆಳಭಾಗದಲ್ಲಿ ತಮ್ಮ ನಿವಾಸವನ್ನು ರಚಿಸಿಕೊಂಡು, ಚಿಕ್ಕ ಪುಟ್ಟ ಕೃಷಿಗಳನ್ನು ಮಾಡಿ ತಾವು ಆರ್ಥಿಕ ಸ್ವಾವಲಂಬಿಗಳಾಗಿ, ಈ ಸಾನಿಧ್ಯವನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದರು. ಮದೆ, ಸಂಪಾಜೆ ಗ್ರಾಮದ ಭಕ್ತಾಧಿಗಳು ಸೇರಿ ಆಡಳಿತ ಸಮಿತಿ ರಚನೆ ಮಾಡಿ, ಪ್ರತಿ ಮಂಗಳವಾರ ಮತ್ತು ಶುಕ್ರವಾರ ಪೂಜಾ ವಿಧಿಗಳನ್ನು ನೆರವೇರಿಸಿಕೊಂಡು ಬರಲಾಗುತ್ತಿದೆ.

ಕಳೆದ 6 ವರ್ಷಗಳ ನಂತರ ಈ ಸಾನಿಧ್ಯವನ್ನು ಹೆಚ್ಚಿನ ಭಕ್ತರುಗಳಿಗೆ ಸೇವೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಇನ್ನು ಹೆಚ್ಚಿನ ಆರಾಧನೆ ಮಾಡಿಕೊಂಡು ಬಂದು ಹೆಚ್ಛೆಚ್ಚು ಭಕ್ತಾಧಿಗಳು ತಮ್ಮ ಸೇವೆ ಸಮರ್ಪಿಸಿ ಫಲಕಾರಿಯಾದ ಅನೇಕ ನಿದರ್ಶನಗಳು ಕಂಡು ಬರುತ್ತವೆ.

ಶ್ರೀ ದೇವಿಯ ಸಾನಿಧ್ಯದ ಕಾರಣಿಕೆಯ ವಿಚಾರವಾಗಿ ಕೆಲವು ಪವಾಡಗಳು ಈ ಸನ್ನಿಧಿಯಲ್ಲಿ ಗೋಚರಿಸಿದ್ದು, ದೇವರಕೊಲ್ಲಿಯ ನೀರು ಕೆಳಭಾಗದಲ್ಲಿ ಪಯಸ್ವಿನಿ ನದಿಗೆ ಸೇರುವ ಸಂಗಮದಲ್ಲಿ ಮತ್ಸ್ಯ ತೀರ್ಥವಿದ್ದು 2018ರಲ್ಲಿ ಕೊಡಗು ಜಿಲ್ಲೆಯಲ್ಲಿ ಅದ ಅತಿವೃಷ್ಟಿ ಮತ್ತು ಜಲಪ್ರವಾಹದಲ್ಲಿ ಪಯಸ್ವಿನಿ ನದಿಯ ಇಕ್ಕೆಲಗಳಲ್ಲಿರುವ ವನ್ಯ ಜೀವಿಗಳು ಮತ್ತು ಜಲ ಜೀವಿಗಳು ಸಂಪೂರ್ಣವಾಗಿ ನಾಶವಾಗಿ ಹೋಗಿದ್ದು, ಜಲ ಹರಿಯುವ ಸ್ಥಳ ಏರುಪೇರಾಗಿದ್ದವು. ಶ್ರೀ ದೇವಿಯ ಕೃಪೆಯಿಂದ ಮತ್ಸ್ಯ ತೀರ್ಥದ ದೇವರ ಮೀನುಗಳಿಗೆ ಯಾವುದೇ ದಕ್ಕೆ ಆಗದಿರುವುದು ಈ ಕ್ಷೇತ್ರದ ವಿಶೇಷ. ಕೊಲ್ಲಿಯಿಂದ ಹರಿದು ಬರುವ ಈ ತೀರ್ಥ ಸೇವನೆ ಮತ್ತು ಪ್ರೋಕ್ಷಣೆಯಿಂದ ಶರೀರದಲ್ಲಿರುವ ಯಾವುದೇ ವ್ಯಾಧಿ ನಿವಾರಣೆ ಹಾಗೂ ವಿದ್ಯಾಭ್ಯಾಸ ಬಾರದವರಿಗೆ ಇಲ್ಲಿ ಪ್ರಾರ್ಥಿಸಿಕೊಂಡರೆ ಶ್ರೀ ದೇವಿ ಸರಸ್ವತಿಯಾಗಿ ವಿದ್ಯಾಭ್ಯಾಸ ಜ್ಞಾನ ಕೊಡುವ ಮಹತ್ತರವಾದ ಶಕ್ತಿ ಕ್ಷೇತ್ರಕ್ಕಿದೆ. ಇನ್ನೂ ಅನೇಕ ಪವಾಡಗಳು ಈ ಕ್ಷೇತ್ರದಲ್ಲಿ ನಡೆದಿರುವುದು ಶ್ರೀದೇವಿಯ ಶಕ್ತಿಗೆ ಕಾರಣವಾಗಿದೆ.

 ಈ ಕ್ಷೇತ್ರದ ಚಾಮುಂಡೇಶ್ವರಿ ದೇವಿಯ ಜೀರ್ಣೋದ್ದಾರ ಕಾಮಗಾರಿ ಕಳೆದ 6 ವರ್ಷಗಳಿಂದ ನಡೆಯುತ್ತಿದ್ದು 2021 ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಧನ ಸಹಾಯ ನೀಡಿದ ಊರ ಪರವೂರ ಎಲ್ಲಾ ಭಕ್ತಾಧಿಗಳಿಗೂ ಅಭಿನಂದನೆ ಸಲ್ಲಿಸುತ್ತೇವೆ.

ಪುನರ್ ಪ್ರತಿಷ್ಠೆ, ಅಷ್ಠ ಬಂಧ ಬ್ರಹ್ಮ ಕಲಶ ನಡೆಸುವ ಸಲುವಾಗಿ ದಿನಾಂಕ 17.03.2021 ರಂದು ದೇವಿ ಸಾನಿಧ್ಯದಲ್ಲಿ ಭಕ್ತಾದಿಗಳು ಸಭೆ ಸೇರಿ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಇದರ ವಿವಿಧ  ಉಪಸಮಿತಿಗಳನ್ನು ರಚಿಸಿ ಶ್ರೀ ಕಲ್ಲಾರೆ  ಬಾಲಕೃಷ್ಣ ಜ್ಯೋತಿಷ್ಯರ ಪ್ರಶ್ನೆ ಚಿಂತನೆಯಂತೆ ಬ್ರಹ್ಮಕಲಶ ನೆರವೇರಿಸಲಿರುವ ಕುಂಬಳೆ ಗಣೇಶ ತಂತ್ರಿಯವರ ನೇತೃತ್ವದಲ್ಲಿ  ಹಾಗೂ ಎಡನೀರು ಕುಂಇ ರಾಯ ಶಿಲ್ಪಿ ಇವರುಗಳ ಸಹಯೋಗದೊಂದಿಗೆ ದಿನಾಂಕ 22.04.2021 ಗುರುವಾರದಿಂದ 25.04.2021 ಅದಿತ್ಯವಾರದವರೆಗೆ ನಡೆಸುವುದೆಂದು ತೀರ್ಮಾನಿಸಿರುತ್ತೇವೆ.

ಈ ಬ್ರಹ್ಮಕಲಶ ಕಾರ್ಯಕ್ಕೆ ಅಂದಾಜು ವೆಚ್ಚ ರೂ. 12 ಲಕ್ಷಗಳಾಗುತ್ತಿದ್ದು ಇದನ್ನು ಧನ ಸಹಾಯ ತಾಮ್ರದ ಕಲಶ ಸೇವೆ, ಹಸಿರುವಾಣಿ ಸಂಗ್ರಹ ಹಾಗೂ ಎಲ್ಲಾ ದೈವಗಳ ಮತ್ತು ದೈವಸ್ಥಾನಗಳ ಮತ್ತು ಸಂಘ ಸಂಸ್ಥೆಗಳ ಸಹಕಾರದಿಂದ ಸಂಗ್ರಹಿಸಿ ಕಾರ್ಯಕ್ರಮವನ್ನು ಅದ್ಧುರಿಯಾಗಿ, ಭಕ್ತಿ ಪೂರ್ವಕವಾಗಿ ನೆರವೇರಿಸಲು ಬ್ರಹ್ಮಕಲಶ ಸಮಿತಿ ತೀರ್ಮಾನಿಸಿದೆ.

ರೂ. 5000 ಕ್ಕಿಂತ ಹೆಚ್ಚಿಗೆ ಧನಸಹಾಯ ನೀಡಿದ ಭಕ್ತಾಧಿಗಳ ಹೆಸರುಗಳನ್ನು ಶೀಲಾ ನಾಮಪಾಲಕಗಳಲ್ಲಿ ಕೆತ್ತಿಸಿ ದೇವಸ್ಥಾನದ ಪರಿಸರದಲ್ಲಿ ಅಳವಡಿಸಲಾಗುವುದು.

ರೂ 2000 ಕ್ಕಿಂತ ಹೆಚ್ಚಿಗೆ ಸಹಾಯಧನ ನೀಡಿದ ಭಕ್ತಾದಿಗಳ ಹೆಸರನ್ನು ಸಹ  ಪ್ರತ್ಯೇಕ ಶಿಲಾ ನಾಮ ಫಲಕದಲ್ಲಿ ಕೆತ್ತಿಸಿ ಅಳವಡಿಸಲಾಗುವುದು.

ಬ್ರಹ್ಮಕಲಶೋತ್ಸವಕ್ಕೆ ಭಕ್ತಾದಿಗಳಿಂದ ಹಸಿರುವಾಣಿ ಸಂಗ್ರಹ ಕಾರ್ಯಕ್ರಮವನ್ನು ದಿನಾಂಕ 22.04.2021 ನೇ ಗುರುವಾರ ನಿರ್ಧರಿಸಿದ ಹಸಿರುವಾಣಿ ಸಂಗ್ರಹಕರಿಗೆ ಕೊಟ್ಟು ಅಥವಾ ಶ್ರೀ ದೇವಿ ಸನ್ನಿಧಿಗೆ ನೇರವಾಗಿ ತಲುಪಿಸಿ ರಶಿಧಿಯನ್ನು ಪಡೆದುಕೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ದಾನಿಗಳು ಈ ಕೆಳಗೆ ನಮೂದಿಸಿರುವ ನಮ್ಮ ಉಳಿತಾಯ ಖಾತೆಗೆ ಹಣ ಜಮಾ ಮಾಡಿ ಸಹಕರಿಸಬೇಕಾಗಿ ವಿನಂತಿ.

ಕರ್ನಾಟಕ ಗ್ರಾಮೀಣ ಬ್ಯಾಂಕ್ ಕೊಯನಾಡು 

ಖಾತೆ ಸಂಖ್ಯೆ: 12251110000116

ಐ ಎಫ್ ಸಿ ಕೋಡ್: PKGB0012251

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಸಂಪಾಜೆ ಕೊಡಗು

ಉಳಿತಾಯ ಖಾತೆ: 00001005946

ಮದೆನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಮದೆ ಕೊಡಗು.

ಉಳಿತಾಯ ಖಾತೆ: 2080

                   /-

ಅಧ್ಯಕ್ಷರು / ಸರ್ವ ಸದಸ್ಯರುಗಳು,

ಬ್ರಹ್ಮ ಕಲಶೋತ್ಸವ ಸಮಿತಿ

ಶ್ರೀ ಚಾಮುಂಡೇಶ್ವರಿ ದೇವಸ್ಥಾನ, ದೇವರಕೊಲ್ಲಿ

ಮದೆ, ಕೊಡಗು.

error: Content is protected !!