ಚಿಕನ್ ಲಿವರ್ ಮಸಾಲ ಮಾಡುವ ವಿಧಾನ

March 23, 2021

ಬೇಕಾಗುವ ಸಾಮಗ್ರಿಗಳು : ಚಿಕನ್ ಲಿವರ್- 1/2 kg, ರೆಡ್ ಚಿಲ್ಲಿ ಪೌಡರ್‌ – 1/2 ಕಪ್, ಶುಂಠಿ ಬೆಳ್ಳುಳ್ಳಿ ಪೇಸ್ಟ್‌ – 2 ಚಮಚ, ಎಣ್ಣೆ – 1/2 ಕಪ್, ಅರಿಶಿನ – 1/2 ಚಮಚ, ಕೊಬ್ಬರಿ ಪುಡಿ – 1/2 ಕಪ್, ಧನಿಯಾ ಪುಡಿ – 2 ಚಮಚ, ಕೊತ್ತಂಬರಿ ಸೊಪ್ಪು – 1/2 ಕಪ್,
ನಿಂಬೆರಸ – 2 ಚಮಚ, ಗರಂ ಮಸಾಲ ಪುಡಿ – 2 ಚಮಚ, ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ : ಒಂದು ಬೌಲ್‌ನಲ್ಲಿ ಚಿಕನ್ ಲಿವರ್‌, ರೆಡ್‌‌ ಚಿಲ್ಲಿ ಪೌಡರ್‌, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಸ್ವಲ್ಪ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಅರ್ಧ ಗಂಟೆ ಮ್ಯಾರಿನೇಟ್ ಮಾಡಿ. ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಮ್ಯಾರಿನೇಟ್ ಮಾಡಿದ ಲಿವರ್ ಸೇರಿಸಿ 5-10 ನಿಮಿಷ ಫ್ರೈ ಮಾಡಿಕೊಂಡು ಒಂದು ಪ್ಲೇಟ್‌‌ಗೆ ತೆಗೆದಿಡಿ.

ಅದೇ ಪ್ಯಾನಿನಲ್ಲಿ ಮತ್ತಷ್ಟು ಎಣ್ಣೆ ಬಿಸಿ ಮಾಡಿಕೊಂಡು ಈರುಳ್ಳಿ, ಶುಂಠಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಅರಿಶಿನ, ರೆಡ್‌‌ ಚಿಲ್ಲಿ ಪೌಡರ್‌‌, ಗರಂ ಮಸಾಲ ಪೌಡರ್‌‌ , ಉಪ್ಪು ಎಲ್ಲವನ್ನೂ ಸೇರಿಸಿ ಫ್ರೈ ಮಾಡಿ. ನಂತರ ಒಣಕೊಬ್ಬರಿ ಪುಡಿ , ಸ್ವಲ್ಪ ನೀರು ಸೇರಿಸಿ ಮಿಶ್ರಣ ತಳ ಬಿಡುವರೆಗೂ ಕುಕ್ ಮಾಡಿ.

ಮಸಾಲೆಯೊಂದಿಗೆ ಫ್ರೈ ಮಾಡಿಕೊಂಡ ಲಿವರ್ ಸೇರಿಸಿ 2 ನಿಮಿಷ ತಿರುವಿ ನಿಂಬೆರಸ ಸೇರಿಸಿ ಫ್ಲೇಮ್ ಆಫ್ ಮಾಡಿ. ಅನ್ನ, ಚಪಾತಿ, ರೊಟ್ಟಿಯೊಂದಿಗೆ ಚಿಕನ್ ಲಿವರ್ ಮಸಾಲ ಸರ್ವ್ ಮಾಡಿ.

error: Content is protected !!