ರುಚಿಕರವಾದ ಪನ್ನೀರ್ ಗ್ರೇವಿ ಮಾಡುವ ವಿಧಾನ

March 25, 2021

ಬೇಕಾಗುವ ಸಾಮಾಗ್ರಿಗಳು : ಪನ್ನೀರ್ – 500 ಗ್ರಾಮ್ (2 ಕಪ್ಸ್), ಹಸಿಮೆಣಸು – 5 ರಿಂದ 6, ಮೆಣಸಿನ ಹುಡಿ – 1/2 ಚಮಚ, ಅಕ್ಕಿ ಹುಡಿ – 1 ಚಮಚ, ಕಾರ್ನ್ ಪ್ಲೋರ್ – 2 ಚಮಚ, ಕೆಂಪು ಚಿಲ್ಲಿ ಸಾಸ್ – 1 ಚಮಚ, ಸೋಯಾ ಸಾಸ್ – 1 ಚಮಚ, ಟೊಮೆಟೊ ಪೂರಿ – 1 ಕಪ್, ಈರುಳ್ಳಿ – 1 ಕಪ್, ಗ್ರೀನ್ ಕ್ಯಾಪ್ಸಿಕಮ್ – 1/2 ಕಪ್, ಬೆಳ್ಳುಳ್ಳಿ – 1/2 ಚಮಚ, ಶುಂಠಿ – 1/2 ಚಮಚ, ಲಿಂಬೆ ರಸ – 1/2 ಚಮಚ, ಕೊತ್ತಂಬರಿ ಸೊಪ್ಪು – 1/2 ಚಮಚ, ಎಣ್ಣೆ , ಉಪ್ಪು- ರುಚಿಗೆ ತಕ್ಕಷ್ಟು.

ಮಾಡುವ ವಿಧಾನ : ಸಣ್ಣ ಪಾತ್ರೆಯನ್ನು ತೆಗೆದುಕೊಂಡು ಇದಕ್ಕೆ ಅಕ್ಕಿ ಹುಡಿ, ಗರಮ್ ಮಸಾಲಾ, ಉಪ್ಪು ಮತ್ತು ನೀರನ್ನು ಸೇರಿಸಿ. ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಂಡು ಪನ್ನೀರ್ ತುಂಡುಗಳನ್ನು ಹಾಕಿ. ಚೆನ್ನಾಗಿ ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ. ಈ ಸಮಯದಲ್ಲಿ ತಳ ಆಳವಿರುವ ಪಾತ್ರೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಇದು ಬಿಸಿಯಾದೊಡನೆ, ಈ ಎಣ್ಣೆಗೆ ಪನ್ನೀರ್ ತುಂಡನ್ನು ಹಾಕಿ ಇದು ಕಂದು ಬಣ್ಣಕ್ಕೆ ಬರುವವರೆಗೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ತದನಂತರ, ಬೌಲ್‎ಗೆ ಪನ್ನೀರ್ ತುಂಡನ್ನು ವರ್ಗಾಯಿಸಿ. ಈಗ, ಇನ್ನೊಂದು ಪಾತ್ರೆಯನ್ನು ತೆಗೆದುಕೊಳ್ಳಿ. ಇದಕ್ಕೆ ಎಣ್ಣೆ ಹಾಕಿ ಅದನ್ನು ಬಿಸಿ ಮಾಡಿಕೊಳ್ಳಿ, ಇದಕ್ಕೆ ಕತ್ತರಿಸಿದ ಈರುಳ್ಳಿಯನ್ನು ಹಾಕಿ, ಟೊಮೆಟೊ ಪೂರಿ ಮತ್ತು ಕ್ಯಾಪ್ಸಿಕಮ್ ಅನ್ನು ಸೇರಿಸಿಕೊಳ್ಳಿ, ತದನಂತರ ಚೆನ್ನಾಗಿ ಹುರಿದುಕೊಳ್ಳಿ. ಈ ಮಿಶ್ರಣಕ್ಕೆ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಬೆರೆಸಿ ಹುರಿದುಕೊಳ್ಳಿ. ಐದು ಹತ್ತು ನಿಮಿಷಗಳ ನಂತರ, ಪಾತ್ರೆಗೆ ಹುರಿದ ಪನ್ನೀರ್ ಅನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಂತರ ಎಲ್ಲಾ ಸಾಮಾಗ್ರಿಗಳನ್ನು ಮಿಶ್ರ ಮಾಡಿಕೊಳ್ಳಿ. ಈಗ, ಗ್ರೇವಿಯ ಮೇಲೆ ಲಿಂಬೆ ರಸವನ್ನು ಹಿಂಡಿ.ಕೊತ್ತಂಬರಿ ಸೊಪ್ಪಿನಿಂದ ಗ್ರೇವಿಯನ್ನು ಅಲಂಕರಿಸಿ ನಂತರ ಬಿಸಿ ಚಪಾತಿ, ರೋಟಿ ಮತ್ತು ಅನ್ನದೊಂದಿಗೆ ಮನೆಯವರಿಗೆ ಸೇವಿಸಲು ನೀಡಿ.

error: Content is protected !!