ಶಿವನಿಗೆ ಸಮರ್ಪಿತವಾದ ಭೋರಮ್‍ದೇವ್ ದೇವಾಲಯ

April 3, 2021

ಭೋರಮ್‍ದೇವ್ ದೇವಾಲಯವು ಭಾರತದ ಛತ್ತೀಸ್‌ಘಡ್ ರಾಜ್ಯದ ಭೋರಮ್‍ದೇವ್‍ನಲ್ಲಿದೆ. ಇದು ಶಿವನಿಗೆ ಸಮರ್ಪಿತವಾದ ಹಿಂದೂ ದೇವಸ್ಥಾನಗಳ ಸಂಕೀರ್ಣವಾಗಿದೆ. ಇದು ನಾಲ್ಕು ದೇವಾಲಯಗಳ ಒಂದು ಗುಂಪನ್ನು ಹೊಂದಿದ್ದು ಇದರಲ್ಲಿ ಅತ್ಯಂತ ಮುಂಚಿತವಾದದ್ದು ಇಟ್ಟಿಗೆಯ ದೇವಾಲಯವಾಗಿದೆ.

ಭೋರಮ್‍ದೇವ್ ದೇವಾಲಯವು ಮುಖ್ಯ ದೇವಾಲಯವಾಗಿದ್ದು ಕಲ್ಲಿನಿಂದ ಕಟ್ಟಲ್ಪಟ್ಟಿದೆ. ಕಾಮಪ್ರಚೋದಕ ಶಿಲ್ಪಗಳಿರುವ ವಾಸ್ತುಶಿಲ್ಪ ಲಕ್ಷಣಗಳು ಇದಕ್ಕೆ ಖಜುರಾಹೊ ದೇವಾಲಯ ಮತ್ತು ಒಡಿಶಾದ ಕೋನಾರ್ಕ್ ಸೂರ್ಯ ದೇವಾಲಯದಂತೆ ಒಂದು ವಿಶಿಷ್ಟ ಶೈಲಿಯನ್ನು ನೀಡಿದೆ. ಹಾಗಾಗಿ ಭೋರಮ್‍ದೇವ್ ಸಂಕೀರ್ಣವು “ಛತ್ತೀಸ್‍ಗಢ್‍ನ ಖಜುರಾಹೊ” ಎಂಬ ಉಪನಾಮದಿಂದ ಪರಿಚಿತವಾಗಿದೆ.

ಭೋರಮ್‍ದೇವ್‍ನಿಂದ ಸುಮಾರು ೧ ಕಿಲೊಮೀಟರ್ ದೂರದಲ್ಲಿರುವ ಈ ಸಂಕೀರ್ಣದ ಮತ್ತೊಂದು ದೇವಾಲಯವೆಂದರೆ ಮಡ್ವಾ ಮೆಹೆಲ್ (ಸ್ಥಳೀಯ ಉಪಭಾಷೆಯಲ್ಲಿ ಇದರರ್ಥ ಮದುವೆ ಮಂಟಪ). ಇದು ದುಲ್ಹಾದೇವ್ ಎಂದೂ ಕರೆಯಲ್ಪಡುತ್ತದೆ. ಇದು ೧೬ ಕಂಬಗಳ ಮೇಲೆ ನಿಲ್ಲಿಸಲಾಗಿರುವ ಅನನ್ಯವಾದ ಶಿವಲಿಂಗವನ್ನು ಹೊಂದಿದೆ.

error: Content is protected !!